
ಸಾಹಿತ್ಯ ಸಮ್ಮೇಳನದ ಅಹ್ವಾನ ಪತ್ರ : ವಸತಿ ಸಮಿತಿ ಪಟ್ಟಿಯಲ್ಲಿ ಮೃತ ಮುಖ್ಯ ಶಿಕ್ಷಕನ ಹೆಸರು
Team Udayavani, Mar 4, 2023, 2:20 PM IST

ಕುಷ್ಟಗಿ: ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾ ಘಟಕದ ಮಾ.5 ಹಾಗೂ 6 ರಂದು ನಿಗದಿಯಾದ ಹನುಮಸಾಗರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಹ್ವಾನ ಪತ್ರದಲ್ಲಿ ಕೋವಿಡ್ ನಿಂದ ಮೃತ ವ್ಯಕ್ತಿಯನ್ನು ಸಮ್ಮೇಳನದ ವಸತಿ ಸಮಿತಿಗೆ ನೇಮಿಸಿ ಎಡವಟ್ಟು ಸೃಷ್ಟಿಸಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೃತ ವ್ಯಕ್ತಿ ರಾಮಣ್ಣ ಚೌಡಕಿ ಕಲಾವಿದರೊಬ್ಬರ ಹೆಸರು ಸೇರಿಸಿ ಪೇಚಿಗೆ ಸಿಲುಕಿಸಿತ್ತು. ಈ ಪ್ರಮಾದ ಅರಿತಿರುವ ಕಸಾಪ ಅಹ್ವಾನ ಪತ್ರಿಕೆಯಲ್ಲಿ ಮೃತ ರಾಮಣ್ಣ ಚೌಡಕಿ ಹೆಸರು ಅಳಿಸಿ ಹಾಕಿ ಹಂಚಿಕೆಗೆ ಮುಂದಾಗಿದೆ.
ಇದರ ಬೆನ್ನಲ್ಲೆ ಮತ್ತೊಂದು ಪ್ರಮಾದ ಆಗಿರುವುದು ಗುಟ್ಟಾಗಿ ಉಳಿದಿಲ್ಲ. ಅದೇನೆಂದರೆ ಗೊರೆಬಿಹಾಳ ಶಾಲೆಯ ಮುಖ್ಯ ಶಿಕ್ಷಕ ಶಂಕರಪ್ಪ ನಾಟೇಕರ್ ಅವರು, ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಮೃತರಾಗಿದ್ದಾರೆ ಅದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದ್ದರೂ, ಮೃತ ಮುಖ್ಯ ಶಿಕ್ಷಕನನ್ನು ವಸತಿ ಸಮಿತಿಯ ಪಟ್ಟಿಯಲ್ಲಿ ಸೇರಿಸಿ ಮತ್ತೊಂದು ಎಡವಟ್ಟಿಗೆ ಕಸಾಪ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಸತ್ತ ವ್ಯಕ್ತಿಗಳನ್ನು ಸಮ್ಮೇಳನದ ಅಹ್ವಾನ ಪತ್ರದಲ್ಲಿ ಉಲ್ಲೇಖಿಸಿ ಸ್ವಯಂಕೃತ ತಪ್ಪಿಗೆ ವಿಪರೀತ ಮುಜುಗರ ಎದುರಿಸುವಂತಾಗಿದೆ.
ಇದನ್ನೂ ಓದಿ: 18 ರೂ. ಸಂಬಳ ಪಡೆಯುತ್ತಿದ್ದ ಹುಡುಗ ಇಂದು ಕೋಟ್ಯಧಿಪತಿ…ಕಾರ್ಕಳ ಮೂಲದ ಜಯರಾಮ್ ಬನಾನ್ ಯಶೋಗಾಥೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM ಸಿದ್ದರಾಮಯ್ಯ ಅರಸು ಆಗಲು ಸಾಧ್ಯವಿಲ್ಲ: ಜಿಟಿ.ದೇವೇಗೌಡ

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Kustagi: ವಿದ್ಯುತ್ ಸಂಪರ್ಕದ ವೇಳೆ ಎಡವಟ್ಟು: ಹಲವು ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ

Gangavathi ಕೊಲೆ ಆರೋಪ- ಪತ್ನಿಯನ್ನು ಕಾಲುವೆಗೆ ತಳ್ಳಿದ ಪತಿ: ದೂರು ದಾಖಲು

Kushtagi: ಹತ್ತಿಗೆ ಯೋಗ್ಯ ಬೆಲೆ; ವಿಸ್ತಾರಗೊಳ್ಳುತ್ತಿದೆ ಕ್ಷೇತ್ರ