Delhi Man: ಅಶ್ಲೀಲ ಚಿತ್ರ ತಾರೆಯಂತೆ ಬಟ್ಟೆ ಧರಿಸಲು ಪತ್ನಿಗೆ ಪತಿಯ ಬಲವಂತ: ದೂರು ದಾಖಲು
ಈ ದಂಪತಿ 2020ರಲ್ಲಿ ವಿವಾಹವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Team Udayavani, Jul 5, 2023, 12:58 PM IST
ನವದೆಹಲಿ: ಅಶ್ಲೀಲ ಸಿನಿಮಾ ವೀಕ್ಷಣೆಯ ವ್ಯಸನಿ ಪತಿರಾಯನೊಬ್ಬ ಪತ್ನಿ ಬಳಿ ಅಶ್ಲೀಲ ಚಿತ್ರ ವೀಕ್ಷಿಸುವಂತೆ ಬಲವಂತಪಡಿಸಿದ್ದಲ್ಲದೇ, ನೀಲಿಚಿತ್ರ ತಾರೆಯಂತೆ ಬಟ್ಟೆ ಧರಿಸುವಂತೆ ಸತಾಯಿಸುತ್ತಿದ್ದ ವ್ಯಕ್ತಿ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಮಂಗಳೂರು: ಕಟ್ಟಡದ ಮೇಲಿದ್ದ ಜಾಹೀರಾತು ಹೋರ್ಡಿಂಗ್ ಬಿದ್ದು 15 ವಾಹನಗಳಿಗೆ ಹಾನಿ
ತನ್ನ ಪತಿ ಅಶ್ಲೀಲ ಸಿನಿಮಾ ವೀಕ್ಷಣೆಯ ವ್ಯಸನಿಯಾಗಿರುವುದಾಗಿ ಪತ್ನಿ(30ವರ್ಷ) ಆರೋಪಿಸಿದ್ದು, ಈ ದಂಪತಿ 2020ರಲ್ಲಿ ವಿವಾಹವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ತನ್ನ ಗಂಡ ಮತ್ತು ಆತನ ಕುಟುಂಬ ಸದಸ್ಯರು ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾಳೆ.
ಮಂಗಳವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಸಂಬಂಧಿಕರ ವಿರುದ್ಧ ಭಾರತೀಯ ದಂಡ ಸಂಹಿತೆ 498ಎ (ಕ್ರೌರ್ಯ), 406 (ವಿಶ್ವಾಸದ್ರೋಹ), 377 (ಅಸ್ವಾಭಾವಿಕ ಅಪರಾಧ) ಮತ್ತು ಸೆಕ್ಷನ್ 34ರ ಅಡಿ ದೂರು ದಾಖಲಿಸಿರುವುದಾಗಿ ಡೆಪ್ಯುಟಿ ಪೊಲೀಸ್ ಕಮಿಷನರ್ ರೋಹಿತ್ ಮೀನಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?