Desi Swara: ವೇಗಾಸಿನ ಐತಿಹಾಸಿಕ “ಕಾ (Ka)’ ಶೋ

ಚಿತ್ರವಿಚಿತ್ರ ಸಂಗತಿಗಳ ನಗರ ವೇಗಾಸ್‌

Team Udayavani, Dec 30, 2023, 1:05 PM IST

Desi Swara: ವೇಗಾಸಿನ ಐತಿಹಾಸಿಕ “ಕಾ (Ka)’ ಶೋ

ವೇಗಾಸ್‌ ಎಂದ ತತ್‌ಕ್ಷಣ ನೆನಪಾಗುವುದು ಗಗನಚುಂಬಿ ಕಟ್ಟಡಗಳು, ಕಸಿನೋಗಳು, ರೆಸಾರ್ಟ್‌ಗಳು, ರಾತ್ರಿಯಲ್ಲಿ ನಕ್ಷತ್ರಪುಂಜದಂತೆ ಹೊಳೆಯುವ ಇಡೀ ಶಹರ…ಇಲ್ಲಿಗೆ ಜನ ಬರುವುದೇ ಸ್ವೇಚ್ಛೆಯಾಗಿ ಕಾಲ ಕಳೆಯಲಿಕ್ಕೆ. ಈ ನಗರ ಮಲಗುವುದೇ ಇಲ್ಲ. ಎಷ್ಟೇ ಅಪರಾತ್ರಿಯಲ್ಲಿ ಬಂದಿಳಿದರೂ ಕೈಯ್ಯಲ್ಲಿ ಬೀರು, ವಿಸ್ಕಿ, ವೈನ್‌ ಇತ್ಯಾದಿ ಪೇಯಗಳನ್ನು ಹಿಡಿದುಕೊಂಡು ಸ್ಲಾಟ್‌ ಮಶಿನ್‌ನನ್ನು ಕುಟ್ಟುತ್ತ ಕಳೆದುಕೊಂಡ ಹಣಕ್ಕೆ ಪರಿತಪಿಸುತ್ತುರುವ ಜನ ಕಾಣಿಸುತ್ತಾರೆ. ಇಲ್ಲಿ ಯಾರೂ ಯಾರತ್ತಲೂ ಕೈ ಮಾಡಿ ತೋರಿಸುವುದಿಲ್ಲ.

ಇಲ್ಲಿ ಹೀಗೆಯೇ ಇರಬೇಕೆಂಬ ಕಟ್ಟುಪಾಡುಗಳಿಲ್ಲ. ಎಂತೆಂತಹ ತಹರೇವಾರಿ ಜನ ಬರುತ್ತಾರೆಂದರೆ ಅದನ್ನು ಹೇಳಲಸಾಧ್ಯ. ನಾನು ನೋಡಿದ ಅತಿ ವಿಚಿತ್ರ ಸಂಗತಿಯೆಂದರೆ ಹುಡುಗಿಯೊಬ್ಬಳು ತಾನು ಸಾಕಿದ ಹಾವನ್ನು ಮೈಗೆ ಸುತ್ತಿಕೊಂಡು ಬಂದಿದ್ದಳು. ಬಿಳಿಯ ಬಣ್ಣದ ಮಿರಿ ಮಿರಿ ಮಿಂಚುತ್ತಿದ್ದ ಆ ಹಾವು ಅವಳ ಕೊರಳಿನ ಹತ್ತಿರ ತಲೆಯಾಡಿಸುತ್ತಿದ್ದರೆ ಅವಳ ಬೆನ್ನಿನ ಹತ್ತಿರವಿದ್ದ ಬಾಲ ಮಿಸುಕಾಡಿತ್ತಿತ್ತು. ನೋಡಿದರೆ ಮೈ ಝುಂ ಎನ್ನುವಂತಿತ್ತು ದೃಶ್ಯ. ಎಲ್ಲಿ ನನ್ನನ್ನೇ ಸುತ್ತಿಕೊಂಡು ಬಿಡುತ್ತದೋ ಎಂದು ಹೆದರಿಕೆಯಲ್ಲಿ ನಾನು ಬೇಗ ಬೇಗ ಹೆಜ್ಜೆ ಹಾಕುತ್ತಿದ್ದರೆ ಯಾರೋ ಒಬ್ಬ ಅವಳ ಬಳಿ ಆ ಹಾವಿನ ಬಗ್ಗೆ ಆಸ್ಥೆಯಿಂದ ವಿಚಾರಿಸುತ್ತಿದ್ದ. ಅದರ ಹೆಸರು “ಮೈಕೇಲ್…’ ಎಂದು ಆಕೆ ಅವನಿಗೆ ಹೇಳಿದ್ದು ಕೇಳಿಸಿತ್ತು. ಹೀಗೆ ಎಲ್ಲ ತರಹದ ಎಕ್ಸಟ್ರೀಮ್‌ ಸಂಗತಿಗಳನ್ನು ಬಹುಶಃ ವೇಗಾಸಿನಲ್ಲೇ ಕಾಣಬಹುದೇನೋ….

ಕುಡುಕರಿಗೆ, ಸೇದುವವರಿಗೆ, ಮಾಂಸಪ್ರಿಯರಿಗೆ, ಗ್ಯಾಂಬ್ಲಿಂಗ್‌ ಪ್ರಿಯರಿಗೆ ಇದು ಸ್ವರ್ಗ. ಹಾಗಾದರೆ ನಮ್ಮಂತಹವರು ಏನು ಮಾಡುವುದು? ಅಮೆರಿಕದಲ್ಲಿದ್ದ ಮೇಲೆ ವೇಗಾಸ್‌ ನೋಡದೆ ಹೇಗಿರುವುದು? ? What happens in Vegas stays in Vegas ಎಂಬ ಮಾತಿದೆ. ಹಾಗಿದ್ದ ಮೇಲೆ ಅಲ್ಲಿ ನಡೆಯುವುದಾದರೂ ಏನು ಎಂಬ ಕುತೂಹಲವನ್ನು ತಣಿಸಿಕೊಳ್ಳಬೇಕಲ್ಲ. ಇಲ್ಲಿ ಎಲ್ಲ ತರಹದ ಚಟುವಟಿಕೆಗಳಿವೆ. ಮಕ್ಕಳಿಂದ ಮುದುಕರವರೆಗೆ, ಯುವಕ ಯುವತಿಯರಿಂದ ಸಂಸಾರಸ್ಥರವರೆಗೆ, ಬಡವನಿಂದ ಸಿರಿವಂತನವರೆಗೆ ಎಲ್ಲವೂ ಇದೆ. ನಮಗೆ ಹೊಂದುವಂತಹದನ್ನು ಆಯ್ದುಕೊಳ್ಳಬೇಕಷ್ಟೇ. ನಮ್ಮ ಭಾರತೀಯರು ತಮ್ಮ ಅಪ್ಪ ಅಮ್ಮನನ್ನು ವೇಗಾಸಿಗೆ ಕರೆದುಕೊಂಡು ಬರುವುದನ್ನು ನೋಡಿ ನನಗೆ ಆಶ್ಚರ್ಯವಾದದ್ದಿದೆ. ಎಷ್ಟೇ ಒಪನ್‌ ಮೈಂಡ್‌ ಎಂದು ಹೇಳಿಕೊಂಡರೂ ಇಲ್ಲಿ ಕಾಣಿಸುವ ಕೆಲವು ಸಂಗತಿಗಳು ಬಾಯಿ ತೆರೆಯುವಂತೆ ಮಾಡುತ್ತವೆ. ಈಗ ನಾನು ಹೇಳಲು ಹೊರಟಿದ್ದು ನಾವು ನೋಡಿದ ಒಂದು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದರ್ಶನದ ಬಗ್ಗೆ. ಲೈವ್‌ ಕನ್ಸರ್ಟ್‌, ಜಾದೂ ಪ್ರದರ್ಶನ, ಹಾಡು ಕುಣಿತಗಳ ಶೋ, ಬೈಸಿಕಲ್‌ ಸವಾರಿ ಇದೆಲ್ಲದರ ಮಧ್ಯೆ ನಮಗೆ ಆಕರ್ಷಕವಾಗಿ ಕಂಡಿದ್ದು ಈ ಕಾ ಎಂಬ ಶೋ.

Cirque du Soleil ಎಂಬ ಹೆಸರಿನ ಜನಪ್ರಿಯ ಕೆನಡಾದ ಕಂಪೆನಿ ನಡೆಸಿಕೊಡುವ ಈ ಪ್ರದರ್ಶನ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯುತ್ತದೆ. ಕಾ ಎಂದರೆ ಬೆಂಕಿ ಎಂದರ್ಥ. ಬೆಂಕಿಗೆ ಬೆಳಗುವ ಶಕ್ತಿಯೂ ಇದೆ, ಸುಡುವ ಶಕ್ತಿಯೂ ಇದೆ ಎಂಬ ತತ್ವ್ತವನ್ನಿಟ್ಟುಕೊಂಡು ಸಿದ್ಧ ಪಡಿಸಿದ ಪ್ರದರ್ಶನವಿದು. 80 ಜನ ಕಲಾವಿದರು ಈ ಒಂದೂವರೆ ಗಂಟೆಯ ಅವಧಿಯಲ್ಲಿ ಒಟ್ಟು 240 ಬಗೆಯ ವೇಷಭೂಷಣಗಳನ್ನು ಬದಲಾಯಿಸಿಕೊಂಡು ರಂಗಮಂಚದ ಮೇಲೆ ಅನೇಕ ರೂಪದಲ್ಲಿ ಬರುತ್ತಿರುತ್ತಾರೆ. ಒಮ್ಮೆ ಒಬ್ಬನೇ ಬಂದು ಕತ್ತಿವರಸೆಯನ್ನು ತೋರಿಸಿದರೆ ಇನ್ನೊಮ್ಮೆ ಎಲ್ಲರೂ ಸ್ಟೇಜಿನ ಮೇಲೆ ಬಂದು ತಮ್ಮ ಸರದಿಯ ಪ್ರಕಾರ ಪ್ರದರ್ಶನ ನೀಡುತ್ತ ಹೋಗುತ್ತಾರೆ.

ನಾವು ಒಳಹೋದಾಗ ಮೊದಲು ದಂಗುಪಡಿಸಿದ್ದು ಆ ರಂಗಮಂದಿರ. ಸುಮಾರು 2000 ಜನ ಕೂರುವಂತಹ ವ್ಯವಸ್ಥೆಯಿದ್ದ ಆ ಸ್ಥಳದಲ್ಲಿ ಕೂರುವ ಸೀಟಿನಿಂದ ಹಿಡಿದು, ತಲೆಯ ಮೇಲೆ ಹಾದು ಹೋಗುವ ಉದ್ದನೆಯ ಸ್ಟೀಲ್‌ ಪೈಪ್‌ಗ್ಳಲ್ಲಿಯೂ ಸಹ ಧ್ವನಿವರ್ಧಕಗಳನ್ನು ಅಳವಡಿಸಿದ್ದಾರೆ. ಹೊರಗಿನ ಜಗತ್ತನ್ನು ಮರೆಸುವಂತಹ ಸದ್ದು ಅಲ್ಲಿ ಝೇಂಕರಿಸುತ್ತದೆ. ಮನೆಗಿರುವ ಬಾಲ್ಕನಿಯಂತೆ ರಂಗಮಂದಿರದ ತುಂಬ ಬಾಲ್ಕನಿಗಳಿವೆ. ಕತ್ತಲಲ್ಲಿ ಮೈ ಮರೆತು ಪ್ರದರ್ಶನ ನೋಡುತ್ತ ಕುಳಿತಾಗ ಒಮ್ಮೆಲೇ ಯಾವುದೋ ಒಂದು ಬಾಲ್ಕನಿಯಲ್ಲಿ ಒಬ್ಬ ಪ್ರತ್ಯಕ್ಷನಾಗಿ ಹಗ್ಗದ ಸಹಾಯದಿಂದ ನೇರವಾಗಿ ಸ್ಟೇಜಿಗೆ ಹೋಗುತ್ತಾನೆ.

ಪ್ರದರ್ಶನ ಆರಂಭವಾಗುವುದು ಇಬ್ಬರು ಅವಳಿಗಳಿಂದ. ಹದಿನಾರನೇ ವಯಸ್ಸಿನ ಬಾಲಕ ಮತ್ತು ಬಾಲಕಿ. ರಾಜ ರಾಣಿಯ ಮಕ್ಕಳು. ಅವರದ್ದು ಸುಖೀ ರಾಜ್ಯ. ಎಲ್ಲವೂ ನಿರ್ವಿಘ್ನವಾಗಿ ನಡೆಯುತ್ತಿರುವಾಗ ಒಬ್ಬ ದುಷ್ಟ ರಾಜ ಬಂದು ಆಕ್ರಮಣ ಮಾಡುತ್ತಾನೆ. ವಂಚನೆಯಿಂದ ನಡೆದ ಈ ಆಕ್ರಮಣದಲ್ಲಿ ರಾಜ ರಾಣಿ ಸತ್ತು ಅವಳಿಗಳಲ್ಲಿ ಹುಡುಗ ಒಂದು ದಿಕ್ಕಿಗೆ ಓಡಿ ಹೋದರೆ ಹುಡುಗಿ ತನ್ನ ಸಹಚರರೊಂದಿಗೆ ಪಾರಾಗಿ ಇನ್ನೊಂದು ದಿಕ್ಕಿನಲ್ಲಿ ಕಣ್ಮರೆಯಾಗುತ್ತಾಳೆ. ಆ ರಾಜ್ಯದ ಮಂತ್ರಿ ದುಷ್ಟ ರಾಜನನ್ನು ಸೇರಿಕೊಳ್ಳುತ್ತಾನೆ. ಈ ದುಷ್ಟರಾಜ ಆ ಮಕ್ಕಳನ್ನು ಹುಡುಕಲು ಜನರನ್ನು ಕಳುಹಿಸುತ್ತಾನೆ.

ದುಷ್ಟ ರಾಜನ ಹೆಂಡತಿಯ ಮೇಲೆ ಅವನ ಗುಂಪಿನ ಇನ್ನೊಬ್ಬ ಕಣ್ಣು ಹಾಕಿದಾಗ ಅವರ ಮಧ್ಯದಲ್ಲಿಯೇ ಬಿರುಕು ಮೂಡುತ್ತದೆ. ಆಗ ನಡೆದ ಜಗಳವನ್ನು ಉಪಯೋಗಿಸಿಕೊಳ್ಳುವ ಮಂತ್ರಿ ಆ ದುಷ್ಟ ರಾಜನನ್ನು ಸಾಯಿಸಿ ತಾನು ಸರ್ವಾಧಿಕಾರಿಯಾಗುತ್ತಾನೆ. ಇದೇ ಸಮಯಕ್ಕೆ ಅಗಲಿದ ಹುಡುಗ ಹುಡುಗಿ ಒಮ್ಮೆ ಸಮುದ್ರದಡಿಯಲ್ಲಿ ಮತ್ತೂಮ್ಮೆ ಕಾಡಿನ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡು ಅಲ್ಲಿ ಎದುರಾಗುವ ಅಪಾಯದ ಸನ್ನಿವೇಶಗಳನ್ನು ಪಾರು ಮಾಡಿ ಅಂತೂ ಒಂದಾಗುತ್ತಾರೆ. ತಮ್ಮವರನ್ನೆಲ್ಲ ಒಗ್ಗೂಡಿಸಿ ಒಟ್ಟಾಗಿ ಬಂದು ಮಂತ್ರಿಯ ವಿರುದ್ಧ ಹೋರಾಡುತ್ತಾರೆ. ಸರ್ವಾಧಿಕಾರ ಎಂದು ನಂಬಿದ್ದ ಬೆಂಕಿಯೇ ಮಂತ್ರಿಯ ಪತನಕ್ಕೆ ಕಾರಣವಾಗುತ್ತದೆ.

ಒಂದು ಸಿನೆಮಾದಂತೆ ಈ ಎಲ್ಲ ಚಿತ್ರಣ ಮಂಚದ ಮೇಲೆ ಕಾಣಿಸಿಕೊಂಡಿತು. ಟ್ರಾಪೀಜಿಗಳು ನಿರಾಯಾಸವಾಗಿ ಹಗ್ಗದ ಮೂಲಕ ತಮ್ಮ ಕಸರತ್ತುಗಳನ್ನು ತೋರಿಸುವಾಗ ಜನರೆಲ್ಲ ಬಿಟ್ಟ ಕಣ್ಣು ಬಿಡದಂತೆ ನೋಡುತ್ತಿದ್ದರು. ನೆರಳು ಬೆಳಕಿನಾಟದಲ್ಲಿ ಗಿಳಿ, ಜಿರಾಫೆ, ಮಗುವನ್ನು ಸಂತೈಸುವ ತಾಯಿಯ ಚಿತ್ರಗಳು ಮೂಡಿ ಬಂದಾಗ ವಾವ್ಹ್ ಎಂಬ ಉದ್ಘಾರ. ತಿರುಗುವ ಎರಡು ಗಾಲಿಗಳ ಮೇಲೆ ಸಮತೋಲನ ಮಾಡುತ್ತ ಜಿಗಿಯುವ, ತಿರುಗುವ, ನಡೆಯುವ, ಹಗ್ಗವಾಟ ಆಡುವ ಹುಡುಗರಿಗೆ ಜನರು ಅತ್ಯಂತ ಖುಷಿಯಲ್ಲಿ ಚಪ್ಪಾಳೆ ಹಾಕಿ ಉತ್ತೇಜಿಸಿದರು. ಉದ್ದಕ್ಕೆ ನಿಂತ ಹಲಗೆಯ ಮೇಲೆ ಬ್ಯಾಲೆನ್ಸ್‌ ಮಾಡುತ್ತ ಆಗಾಗ ಬೀಳುತ್ತ ನಗೆಯುಕ್ಕಿಸಿದ ಒಂದು ಗುಂಪು… ಹೀಗೆ ಒಂದೂವರೆ ಗಂಟೆಯ ಸಮಯದಲ್ಲಿ ಭಿನ್ನ ಭಿನ್ನ ಪ್ರದರ್ಶನಗಳು. ಇಲ್ಲಿ ಎಲ್ಲವೂ ಇತ್ತು. ಹಾಸ್ಯ, ಸಾಹಸ, ಕಲೆ, ಕತೆ, ಸಂತಾಪ ಎಲ್ಲವನ್ನು ಸುಂದರವಾಗಿ ಹೆಣೆದು ಅತ್ಯಂತ ಶಿಸ್ತಿನಿಂದ ಪ್ರದರ್ಶಿಸಿದ ಶೋ ಇದಾಗಿತ್ತು.

ಈ ಪ್ರದರ್ಶನದ ಮುಖ್ಯ ಅಂಶವೆಂದರೆ ಅದು ರಂಗಸ್ಥಳ. ಪ್ರದರ್ಶನಕಾರರನ್ನು ಮೇಲೆತ್ತುವ, ಗಾಳಿಯಲ್ಲಿ ತೂರುವ, ಕೆಳಗೆ ಬೀಳಿಸಿದಂತೆ ಮಾಡುವ, ಅಲುಗಾಡಿಸುವ ಹೀಗೆ ಬಗೆಬಗೆಯ ರೂಪಗಳನ್ನು ತೋರಿಸುವ ಈ ರಂಗಸ್ಥಳ ಪ್ರತೀ ಹತ್ತು ನಿಮಿಷಗಳಿಗೊಮ್ಮೆ ಪರಿವರ್ತನೆಯಾಗುತ್ತಲೇ ಇರುತ್ತದೆ. ಒಮ್ಮೆ ದೊಡ್ಡ ಹಡಗಿನಂತೆ ಕಂಡರೆ ಮರುಕ್ಷಣವೇ ಅದರ ರೂಪ, ಆಕಾರಗಳೆಲ್ಲ ಬದಲಾಗಿ ಸಮುದ್ರದಲ್ಲಿ ಗಾಳಿಗೆ ಓಲಾಡುವ ಹಾಯಿದೋಣಿಯಾಗಿ ಬದಲಾಗುತ್ತದೆ. ಒಮ್ಮೆ ಕಾಡು ಉದ್ಭವವಾದರೆ ಮತ್ತೂಮ್ಮೆ ದೊಡ್ಡ ಬೆಟ್ಟ ಕಣ್ಣೆದುರಿಗೆ. ನಿಜವಾದ ಮರಳು ನಾವು ಸಮುದ್ರದ ದಂಡೆಯಲ್ಲೇ ಇದ್ದೇವೆನೋ ಎಂಬಂತೆ ಕಾಣಿಸುತ್ತದೆ. ಕುಳಿತಲ್ಲಿಂದಲೇ ಬಗೆ ಬಗೆಯ ವೈಭೋಗವನ್ನು ನೋಡುವ ಅವಕಾಶ ನಮ್ಮದಾಗಿತ್ತು.

Cirque du Soleil ಕಂಪೆನಿಯು ವೇಗಾಸಿನಲ್ಲಿ ಅನೇಕ ಪ್ರದರ್ಶನಗಳನ್ನು ತೋರಿಸುತ್ತದೆ. ಇನ್ನೊಂದು ನಾವು ನೋಡಬೇಕೆಂದುಕೊಂಡಿದ್ದ ಪ್ರದರ್ಶನ O ಎಂಬುದಾಗಿತ್ತು. ಇದರಲ್ಲಿ ಸುಮಾರು ದಶಲಕ್ಷ ಲೀಟರ್‌ ನೀರನ್ನು ಸ್ಟೇಜಿನ ಮೇಲೆ ತಂದು ಅದರ ಮಧ್ಯದಲ್ಲಿ ಪ್ರದರ್ಶನಕಾರರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ ಎಂದು ನಾನು ಓದಿದ್ದೆ. ಆದರೆ ಸಮಯದ ಅಭಾವದಿಂದ ಅದಕ್ಕೆ ಹೋಗಲಾಗಲಿಲ್ಲ. ಮುಂದಿನ ಸಲ ಬಂದಾಗ ತಪ್ಪದೇ ಹೋಗಬೇಕು ಎಂದು ನನಗೆ ಕಾ ಶೋ ನೋಡಿದ ಮೇಲೆ ಅನ್ನಿಸಿತು.

*ಸಂಜೋತಾ ಪುರೋಹಿತ್‌

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.