Udayavni Special

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

Team Udayavani, Apr 20, 2021, 12:33 AM IST

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ನಂ.58, 31ನೇ ಕ್ರಾಸ್‌, 7ನೇ ಬ್ಲಾಕ್‌, ಜಯನಗರ, ಬೆಂಗಳೂರು ಮುಂಜಾನೆ 4.30. ಆ ಮನೆಯಲ್ಲಿ ನೂರು ದಾಟಿದ ಹಿರಿಯ “ಜೀವಿ’ ಅದಾಗಲೇ ಎದ್ದಿರುತ್ತಿದ್ದರು. ಮೊದಲು ಶುಚಿಗೊಂಡು, ಸೀದಾ ಅಡುಗೆ ಮನೆಗೆ ಸೇರಿಬಿಡುತ್ತಿದ್ದರು. ಅಲ್ಲಿ, ಕಾಫಿಯ ಪರಿಮಳದ ಪ್ರಾಥಃಸ್ಮರಣೆ. ತಾವೇ ಸ್ವತಃ ಕಾಫಿ ತಯಾರಿಸಿ, ಮನೆ ಮಂದಿಗೂ ಡಿಕಾಕ್ಷನ್‌ ಮಾಡಿಟ್ಟು, ಅಲ್ಲಿಂದ ಮುಂದಿನ ನಿಲ್ದಾಣ, ಓದಿನ ಕೋಣೆ. ನಿನ್ನೆ ರಾತ್ರಿ ಓದಿ, ಮಡಚಿಟ್ಟ ಪುಸ್ತಕದೊಳಗೆ ಕೆಲವು ಹೊತ್ತು ವಿಹಾರ. ಸರಿಯಾಗಿ 6ಕ್ಕೆ ವಾಯುವಿಹಾರ.
100ರ ಗೆರೆ ಮುಟ್ಟುವವರೆಗೂ ಬಿಪಿ, ಶುಗರನ್ನೂ ಹತ್ತಿರ ಬಿಟ್ಟುಕೊಳ್ಳದ ಅವರ ಶತಕದ ಗುಟ್ಟಿನಲ್ಲಿ ಹಲವು ಶಿಸ್ತುಗಳ ಬೆರಕೆಯಿತ್ತು.

ಅದ್ಭುತ ಚೆಸ್‌ ಆಟಗಾರ
ವೆಂಕಟಸುಬ್ಬಯ್ಯ ಅವರೊಳಗೊಬ್ಬ ಅದ್ಭುತ ಚೆಸ್‌ ಆಟಗಾರನಿದ್ದ. ಆತನಿಗೆ ಸೋತು ಗೊತ್ತಿಲ್ಲ. ಎದುರು ಮನೆಯಲ್ಲಿದ್ದ ಜಗನ್ನಾಥ ಎಂಬವರ ಜತೆಗೆ, ನಿತ್ಯ ಆಟ. ಚೆಸ್ಸೇ ಜಿ.ವಿ. ಒಳಗಿನ ಕೌನ್ಸೆಲಿಂಗ್‌. ಹೀಗಾಗಿ ಎಂದಿಗೂ ಅವರಿಗೆ ಖನ್ನತೆ ಬಾಧಿಸಿರಲಿಲ್ಲ.

ಪ್ರೀತಿಯ ಸುಳಿಗೆ ಬಿದ್ದವರಲ್ಲ
ಪ್ರೀತಿ- ಗೀತಿಯ ಫ‌ಜೀತಿಗೆ ಜಿ.ವಿ. ಎಂದೂ ಸಿಲುಕಿದವರಲ್ಲ. ಎಂ.ಎ. ಓದುತ್ತಿದ್ದ ದಿನಗಳಲ್ಲಿ ಕಮಲಾ ಎಂಬ ಸುಂದರಿ ಇದ್ದಳಂತೆ. ಆಕೆ ಮಾತಾಡಿಸಲು ಬಂದರೆ, ಜಿ.ವಿ. ನಾಚುತ್ತಿದ್ದರಂತೆ. “ಪದವಿ ಮುಗಿಯವರೆಗೂ ನಾನು ಆಕೆಯನ್ನು ಕಣ್ಣೆತ್ತಿ ನೋಡುವ ಧೈರ್ಯವನ್ನೇ ತೋರಿರಲಿಲ್ಲ’ ಎಂದು ಒಮ್ಮೆ ಜಿ.ವಿ.ಯೇ ಹೇಳಿಕೊಂಡಿದ್ದರು.

ಕೋಪ ಮಾಡಿಕೊಂಡವರಲ್ಲ
ಜಿ.ವಿ. ಅವರ ಬದುಕಿನಲ್ಲಿ ಸಿಟ್ಟು ಉಕ್ಕಿಸುವ ಪ್ರಸಂಗಗಳು ಹಲವು ಬಾರಿ ಎದುರಾಗಿವೆ. “ಕೋಪ ಬಂದಾಗಲೆಲ್ಲ ಒಂದು ದೀರ್ಘ‌ ನಿಟ್ಟುಸಿರುಬಿಟ್ಟು, ಸಿಟ್ಟನ್ನು ತಣಿಸಿಕೊಂಡು, ನಿಷ್ಕಲ್ಮಷವಾಗಿ ನಗುತ್ತಿದ್ದೆ’ ಎನ್ನುತ್ತಿದ್ದರು, ಜಿ.ವಿ.

ರಾಜಕಾರಣದಿಂದ ದೂರ
ಜಿ.ವಿ., ರಾಜಕಾರಣವನ್ನೂ ಬದುಕಿನಿಂದ ದೂರ ಇಟ್ಟಿದ್ದರು. ರಾಜಕಾರಣಿಗಳು ಸಿಕ್ಕಾಗ, ಕನ್ನಡದ ವಿಚಾರಗಳನ್ನಷ್ಟೇ ಮಾತಾಡುತ್ತಿದ್ದರು. ಹಾಗಾದರೆ, ಜಿ.ವಿ. ಅವರಿಗೆ ಯಾವುದೇ ವ್ಯಸನಗಳೇ ಇರಲಿ ಲ್ಲವೇ? ಇತ್ತು! ಚಕ್ಕುಲಿ, ಕೋಡುಬಳೆಯನ್ನು  ಕಡಿಯುವ ಕಸರತ್ತನ್ನು ಅವರು ನೂರು ದಾಟಿದ ಮೇಲೂ ನಿರಂತರವಾಗಿ ಮಾಡುತ್ತಿದ್ದರು. ಹಲ್ಲುಗಳು ಅಷ್ಟು ಗಟ್ಟಿಮುಟ್ಟಾಗಿದ್ದವು. ಕಣ್ಣಿಗೆ ಕನ್ನಡಕವೂ ಬೇಡ ವಾಗಿತ್ತು. ಬದುಕಿಡೀ ಪಾಠ ಹೇಳಿ, ಕೂಗಿ ಕೂಗಿಯೇ ನಮ್ಮ ಆಯುಸ್ಸು ಕಮ್ಮಿ ಆಗುತ್ತೆ ಎನ್ನುವ ಮೇಷ್ಟ್ರುಗಳ ನಡುವೆ, ಪಾಠ ಹೇಳುತ್ತಲೇ ಆಯುಸ್ಸನ್ನು ಹೆಚ್ಚಿಸಿ ಕೊಂಡವರು ಜಿ.ವಿ. ಒಬ್ಬ ಮನುಷ್ಯ, ಇಷ್ಟೆಲ್ಲ ಸಭ್ಯತೆ ರೂಢಿಸಿಕೊಂಡರೆ, ಶತಾಯುಷಿ ಆಗ್ತಾನಾ? ಎಂಬ ಪ್ರಶ್ನೆಗೆ, ಜಿ.ವಿ., ಒಂದು ವಿಸ್ಮಯದ ಉತ್ತರವಷ್ಟೇ.

ಸಿನೆಮಾ ನೋಡೋರಲ್ಲ…
ಜಿ.ವಿ. ಅವರು ಡಾ| ರಾಜ್‌ ಅವರಂಥ ಹತ್ತಾರು ನಟರನ್ನು ಬಲ್ಲರು. ಆದರೆ ಸಿನೆಮಾದ ರುಚಿ ಜಿ.ವಿ.ಗೆ ಹತ್ತಿರಲಿಲ್ಲ. ವಿದ್ಯಾರ್ಥಿಯಾಗಿದ್ದಾಗ ಎಂದೋ ಮೈಸೂರಿನ ಒಪೇರಾ ಟಾಕೀಸಿನಲ್ಲಿ ಜರಾಸಂಧನ ಕುರಿತ ಚಿತ್ರ ನೋಡಿದ ನೆನಪು, ಅವರೊಳಗೆ ಮಸುಕು ಮಸುಕಾಗಿತ್ತು.

ಸಾಕ್ಷ್ಯಚಿತ್ರ
ಜಿ.ವಿ. ಅವರ ಬದುಕು- ಸಾಧನೆ ಕುರಿತು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ಪ್ರಾಯೋಜಕತ್ವದಲ್ಲಿ ಸಾಕ್ಷ್ಯಚಿತ್ರವನ್ನೂ ನಿರ್ಮಿಸಲಾಗಿದೆ.

ಟಾಪ್ ನ್ಯೂಸ್

16-6

ಅಪೂರ್ವ ಅನುಭೂತಿಯನ್ನು ನೀಡುವ ಆತ್ಮಕಥನ ‘ಕಾಲ ಉರುಳಿ ಉಳಿದುದು ನೆನಪಷ್ಟೇ

ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ

ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ

Bjp chief jp nadda discussed the precaution and relief work with the lawmakers to help states hit by cyclone tauktae

ತೌಖ್ತೇ ಚಂಡಮಾರುತವನ್ನು ಎದುರಿಸಲು ಜನರ ಬೆನ್ನೆಲುಬಾಗಿರಿ : ಕಾರ್ಯಕರ್ತರಿಗೆ ನಡ್ಡಾ ಕರೆ

cats

ಕೋವಿಡ್-ಉಪಚುನಾವಣೆ ವೇಳೆ ಮೃತಪಟ್ಟ ಶಿಕ್ಷಕರ ಕುರಿತು ವಿವರ ಕೇಳಿದ ಸಚಿವ ಸುರೇಶ್ ಕುಮಾರ್‌

cats

‘ಸಾಯೋರು ಎಲ್ಲಾದರೂ ಸಾಯಲಿ’ : ಶಾಸಕ ಚಂದ್ರಪ್ಪ

ಕುಷ್ಟಗಿಯಲ್ಲಿ ಸೇವೆ ಸಲ್ಲಿಸಿದ್ದ ತಹಸೀಲ್ದಾರ ಕೋವಿಡ್ ಗೆ ಬಲಿ

ಕುಷ್ಟಗಿಯಲ್ಲಿ ಸೇವೆ ಸಲ್ಲಿಸಿದ್ದ ತಹಸೀಲ್ದಾರ ಕೋವಿಡ್ ಗೆ ಬಲಿ

THoukthe Cyclone Effect in Goa, High allert announced by CM

ತೌಖ್ತೇ ಚಂಡಮಾರುತ : ಗೋವಾ ಕಡಲ ತೀರದಲ್ಲಿ ಅವಾಂತರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cats

ಕೋವಿಡ್-ಉಪಚುನಾವಣೆ ವೇಳೆ ಮೃತಪಟ್ಟ ಶಿಕ್ಷಕರ ಕುರಿತು ವಿವರ ಕೇಳಿದ ಸಚಿವ ಸುರೇಶ್ ಕುಮಾರ್‌

cats

‘ಸಾಯೋರು ಎಲ್ಲಾದರೂ ಸಾಯಲಿ’ : ಶಾಸಕ ಚಂದ್ರಪ್ಪ

ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವ್ಯವಸ್ಥೆ: ಸಚಿವ ಡಾ.ಕೆ.ಸುಧಾಕರ್

ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವ್ಯವಸ್ಥೆ: ಸಚಿವ ಡಾ.ಕೆ.ಸುಧಾಕರ್

cats

ಬಾದಾಮಿ ಕ್ಷೇತ್ರಕ್ಕೆ ಮೂರು ಆಂಬುಲೆನ್ಸ್ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ರಾಯಚೂರಲ್ಲೂ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್

ರಾಯಚೂರಲ್ಲೂ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

15gadag 4

ಔಷಧ-ಹಾಸಿಗೆ-ಆಕ್ಸಿಜನ್‌ ಕೊರತೆಯಾಗದಂತೆ ನೋಡಿಕೊಳ್ಳಿ : ಡಿಸಿ ಸುಂದರೇಶ್‌ ಬಾಬು

16-6

ಅಪೂರ್ವ ಅನುಭೂತಿಯನ್ನು ನೀಡುವ ಆತ್ಮಕಥನ ‘ಕಾಲ ಉರುಳಿ ಉಳಿದುದು ನೆನಪಷ್ಟೇ

15hvr1

ಧರ್ಮಸ್ಥಳದಿಂದ ಬಂತು ಆಕ್ಸಿಜನ್‌ ಟ್ಯಾಂಕರ್‌

ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ

ಮಂಗಳೂರು ದೋಣಿ ನಾಪತ್ತೆ : ನೌಕಾ ಸೇನಾ ಹೆಲಿಕಾಪ್ಟರ್ ಬಳಸಿ ಕಾರ್ಯಚರಣೆಗೆ ಸಿದ್ಧತೆ

Bjp chief jp nadda discussed the precaution and relief work with the lawmakers to help states hit by cyclone tauktae

ತೌಖ್ತೇ ಚಂಡಮಾರುತವನ್ನು ಎದುರಿಸಲು ಜನರ ಬೆನ್ನೆಲುಬಾಗಿರಿ : ಕಾರ್ಯಕರ್ತರಿಗೆ ನಡ್ಡಾ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.