ಆಕ್ರೋಶ: ಪ್ರಧಾನಿ ಮೋದಿ ಮತ್ತು ಅದಾನಿ ಕುರಿತು ಅಮೆರಿಕದ ಹೂಡಿಕೆದಾರ ಸೊರೋಸ್ ಹೇಳಿದ್ದೇನು?

, ಸೊರೊಸ್‌ ವಿರುದ್ಧ ಆಡಳಿತಾರೂಢ ಬಿಜೆಪಿ ಮುಗಿಬಿದ್ದಿದೆ.

Team Udayavani, Feb 18, 2023, 12:51 PM IST

ಆಕ್ರೋಶ: ಪ್ರಧಾನಿ ಮೋದಿ ಮತ್ತು ಅದಾನಿ ಕುರಿತು ಅಮೆರಿಕದ ಹೂಡಿಕೆದಾರ ಸೊರೋಸ್ ಹೇಳಿದ್ದೇನು?

ಹೊಸದಿಲ್ಲಿ: ಮ್ಯೂನಿಚ್‌ನ ಭದ್ರತಾ ಸಮಾವೇಶದಲ್ಲಿ ಕೋಟ್ಯಧಿಪತಿ ಉದ್ಯಮಿ ಹಾಗೂ ಹೂಡಿಕೆದಾರ ಜಾರ್ಜ್‌ ಸೊರೊಸ್‌ ಅವರು ನೀಡಿರುವ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ್ದು, ಸೊರೊಸ್‌ ವಿರುದ್ಧ ಆಡಳಿತಾರೂಢ ಬಿಜೆಪಿ ಮುಗಿಬಿದ್ದಿದೆ.

ಇದನ್ನೂ ಓದಿ:ಇತಿಹಾಸದ ಪುಟ ಸೇರಲಿದೆ ಭದ್ರಾವತಿಯ ವಿಐಎಸ್‌ಎಲ್‌; 4200 ಮನೆಗಳ ಕಥೆ ಏನು?

“ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್‌ ಅದಾನಿ ಅವರು ಷೇರು ಮಾರುಕಟ್ಟೆ ತಿರುಚುವಿಕೆಯಂಥ ಕೆಲಸದಲ್ಲಿ ತೊಡಗಿರುವುದು ಭಾರತದಲ್ಲಿ ಪ್ರಜಾಸತ್ತೆಯ ಪುನರುತ್ಥಾನಕ್ಕೆ ಕಾರಣವಾಗಬಹುದು. ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮೌನ ಮುರಿಯಬೇಕು ಮತ್ತು ವಿದೇಶಿ ಹೂಡಿಕೆದಾರರ ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದು ಸೊರೊಸ್‌ ಹೇಳಿದ್ದರು.

ಇದಕ್ಕೆ ವ್ಯಾಪಕ ಆಕ್ರೋಶ ಹೊರಹಾಕಿರುವ ಬಿಜೆಪಿ, “ಸೊರೊಸ್‌ ಅವರು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರವಲ್ಲದೆ ಭಾರತೀಯ ಪ್ರಜಾಸತ್ತೆ ಮೇಲೂ ದಾಳಿ ನಡೆಸಿದ್ದಾರೆ’
ಎಂದು ಕಿಡಿಕಾರಿದೆ.

ಸೊರೊಸ್‌ ಹೇಳಿದ್ದೇನು?: ಗುರುವಾರ ಮ್ಯೂನಿಚ್‌ನಲ್ಲಿ ಮಾತನಾಡಿದ 92 ವರ್ಷ ಸೊರೊಸ್‌, “ಮೋದಿ ಮತ್ತು ಅದಾನಿ ಬಹಳ ಆಪ್ತರು. ಅವರ ಹಣೆಬರಹವೂ ಒಂದಕ್ಕೊಂದು ಸಂಬಂಧ ಹೊಂದಿರು ವಂಥದ್ದು. ಅದಾನಿ ಷೇರು ಮಾರುಕಟ್ಟೆ ತಿರುಚುವಿಕೆಯಲ್ಲಿ ತೊಡಗಿದ ಕಾರಣ ಷೇರುಗಳು ಪತನ ಹೊಂದಿದವು. ಈ ವಿಷಯದಲ್ಲಿ ಮೋದಿ ಮೌನಕ್ಕೆ ಶರಣಾಗಿದ್ದಾರೆ. ಆದರೆ ವಿದೇಶಿ ಹೂಡಿಕೆದಾರರು ಮತ್ತು ಸಂಸತ್‌ಗೆ ಅವರು ಉತ್ತರಿಸ ಲೇಬೇಕು’ ಎಂದಿದ್ದರು.

ಸ್ಮತಿ ಇರಾನಿ ಆಕ್ರೋಶ: ಈ ಹಿನ್ನೆಲೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವೆ ಸ್ಮತಿ ಇರಾನಿ, “ಆರ್ಥಿಕ ಯುದ್ಧಾಪರಾಧಿ’ ಆಗಿರುವ ಸೊರೊಸ್‌ ಈಗ ಭಾರತದ ವಿರುದ್ಧ ತನ್ನ ದುರುದ್ದೇಶವನ್ನು ಸಾಧಿಸಲು ಹೊರಟಿದ್ದಾರೆ. ಬ್ಯಾಂಕ್‌ ಆಫ್ ಇಂಗ್ಲೆಂಡ್‌ನ‌ ಪತನಕ್ಕೆ ಕಾರಣವಾದ ವ್ಯಕ್ತಿಯು, ಭಾರತದ ಪ್ರಜಾಸತ್ತೆಯನ್ನು ನಾಶ ಮಾಡಲು ಮುಂದಾಗಿದ್ದಾರೆ.

ತಮ್ಮಿಷ್ಟದ ವ್ಯಕ್ತಿಗಳು ಅಧಿಕಾರದಲ್ಲಿ ಇರಬೇಕು ಎಂಬ ಉದ್ದೇಶದಿಂದ ಬೇರೆ ಬೇರೆ ದೇಶಗಳ ಸರಕಾರಗಳನ್ನು ಪತನಗೊಳಿಸಲು ಇಂಥ ಶಕ್ತಿಗಳು ಪ್ರಯತ್ನ ಪಡುತ್ತಲೇ ಇರುತ್ತವೆ ಎಂದಿದ್ದಾರೆ. ಸೊರೊಸ್‌ ಪರ ಯಾವುದೇ ರಾಜಕೀಯ ಪಕ್ಷಗಳು ಮಾತನಾಡಿ ದರೂ ಅವರ ಬಣ್ಣವನ್ನು ದೇಶದ ಮತದಾರರು ಬಯಲು ಮಾಡಲಿದ್ದಾರೆ ಎಂದೂ ಇರಾನಿ ಎಚ್ಚರಿಸಿದ್ದಾರೆ.

ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಪ್ರತಿಕ್ರಿಯಿಸಿ, “ಸೊರೊಸ್‌ ಹೇಳಿಕೆ ಖಂಡಿಸಲೆಂದೇ ಇಡೀ ಬಿಜೆಪಿಯ ಟ್ರೋಲ್‌ ಸಚಿವಾಲಯಗಳು ಪತ್ರಿಕಾಗೋಷ್ಠಿ ನಡೆಸುತ್ತವೆ. ಇಸ್ರೇಲ್‌ನ ಪೆಗಾಸಸ್‌ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದರ ಬಗ್ಗೆ ಸಚಿವರು ಏನೂ ಮಾತನಾಡಿಲ್ಲವೇಕೆ? ಅದು ನಿಜಕ್ಕೂ ದೇಶದ ಪ್ರಜಾಸತ್ತೆಗೆ ಅತೀ ದೊಡ್ಡ ಅಪಾಯ ಉಂಟುಮಾಡಿತ್ತಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಅದಾನಿ ಪ್ರಕರಣವು ಭಾರತದಲ್ಲಿ ಪ್ರಜಾಸತ್ತಾತ್ಮಕ ಪುನರುತ್ಥಾನಕ್ಕೆ ಕಾರಣವಾಗುತ್ತದೋ, ಇಲ್ಲವೋ ಎನ್ನುವುದು ಕಾಂಗ್ರೆಸ್‌, ಇತರ ವಿಪಕ್ಷಗಳು ಹಾಗೂ ನಮ್ಮ ಚುನಾವಣಾ ಪ್ರಕ್ರಿಯೆಯನ್ನು ಅವಲಂಬಿಸಿದೆ. ಅದಕ್ಕೂ ಸೊರೊಸ್‌ಗೂ ಸಂಬಂಧವಿಲ್ಲ. ಅವರ ಹಸ್ತಕ್ಷೇಪ ಮಾಡಬೇಕಾಗಿಲ್ಲ.
● ಜೈರಾಂ ರಮೇಶ್‌ ಕಾಂಗ್ರೆಸ್‌ ನಾಯಕ

ಟಾಪ್ ನ್ಯೂಸ್

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.