GT V/s KKR: ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಗುಜರಾತ್‌

Team Udayavani, Apr 9, 2023, 7:56 AM IST

GT KKR

ಅಹ್ಮದಾಬಾದ್‌: ಗುಜರಾತ್‌ ಟೈಟಾನ್ಸ್‌ ತನ್ನ ಚಾಂಪಿಯನ್ನರ ಆಟವನ್ನು ಮುಂದುವರಿಸಿದ್ದು, ಭಾನುವಾರ ತವರಿನಂಗಳದಲ್ಲಿ ಕೋಲ್ಕತಾ ನೈಟ್‌ರೈಡರ್ ವಿರುದ್ಧವೂ ಪರಾಕ್ರಮ ಮೆರೆಯುವ ಉಮೇದಿನಲ್ಲಿದೆ. ಗೆದ್ದರೆ ಹ್ಯಾಟ್ರಿಕ್‌ ಸಾಧಿಸಿದಂತಾಗುತ್ತದೆ.

ಇನ್ನೊಂದೆಡೆ ಕೆಕೆಆರ್‌ ಗುರುವಾರ ಈಡನ್‌ ಗಾರ್ಡನ್ಸ್‌ನಲ್ಲಿ ಆರ್‌ಸಿಬಿಗೆ ಬಲವಾದ ಏಟು ನೀಡಿ ಬಂದಿದೆ. ಇದೇ ಲಯವನ್ನು ಮುಂದುವರಿಸಿದರೆ ಅಹ್ಮದಾಬಾದ್‌ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ.

ಇಲ್ಲೇ ನಡೆದ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್‌ 5 ವಿಕೆಟ್‌ಗಳಿಂದ ಚೆನ್ನೈಯನ್ನು ಮಣಿಸಿತ್ತು. ಬಳಿಕ ಡೆಲ್ಲಿ ವಿರುದ್ಧ 6 ವಿಕೆಟ್‌ ಜಯ ಸಾಧಿಸಿತ್ತು. ಎರಡೂ ಚೇಸಿಂಗ್‌ ಪಂದ್ಯಗಳಾಗಿದ್ದವು. ಚೆನ್ನೈ ವಿರುದ್ಧ ಆರಂಭಿಕರಾದ ಶುಭಮನ್‌ ಗಿಲ್‌(63), ವೃದ್ಧಿಮಾನ್‌ ಸಾಹಾ(25) ಬಿರುಸಿನ ಆರಂಭ ಒದಗಿಸಿದ್ದರು. ಡೆಲ್ಲಿ ಎದುರು ಇವರಿಬ್ಬರೂ 14 ರನ್‌ ಮಾಡಿ ವಾಪಸಾದಾಗ ಸಾಯಿ ಸುದರ್ಶನ್‌(62) ನೆರವಿಗೆ ನಿಂತಿದ್ದರು. ಡೇವಿಡ್‌ ಮಿಲ್ಲರ್‌, ವಿಜಯ್‌ ಶಂಕರ್‌ ಅವರ ಬ್ಯಾಟಿಂಗ್‌ ಕೂಡ ಭರವಸೆಯಿಂದ ಕೂಡಿತ್ತು.

ಬಿಗ್‌ ಹಿಟ್ಟರ್‌ ರಾಹುಲ್‌ ತೆವಾಟಿಯಾ ಅವರಿಗೆ ಒಂದು ಪಂದ್ಯದಲ್ಲಷ್ಟೇ ಬ್ಯಾಟಿಂಗ್‌ ಅವಕಾಶ ಸಿಕ್ಕಿತ್ತು. ಚೆನ್ನೈ ವಿರುದ್ಧ ಗೆಲುವು ಸಾರುವ ವೇಳೆ ತೆವಾಟಿಯಾ ಅವರೇ ಕ್ರೀಸ್‌ನಲ್ಲಿದ್ದರು(ಅಜೇಯ 15). ವೈಫ‌ಲ್ಯ ಅನುಭವಿಸಿದ್ದು ನಾಯಕ ಹಾರ್ದಿಕ್‌ ಪಾಂಡ್ಯ ಮಾತ್ರ. ಎರಡೂ ಪಂದ್ಯಗಳಲ್ಲಿ ಇವರ ಗಳಿಕೆ ಬರೀ 8 ರನ್‌ ಆಗಿತ್ತು.

ಮೊಹಮ್ಮದ್‌ ಶಮಿ, ರಶೀದ್‌ ಖಾನ್‌, ಅಲ್ಜಾರಿ ಜೋಸೆಫ್ ಗುಜರಾತ್‌ ಟೈಟಾನ್ಸ್‌ನ ಬೌಲಿಂಗ್‌ ಹೀರೋಗಳು.

ಕೆಕೆಆರ್‌ ಅಮೋಘ ಚೇತರಿಕೆ:
ಪಂಜಾಬ್‌ ಎದುರಿನ 7 ರನ್ನುಗಳ ಮಳೆ ಸೋಲಿನ ಬಳಿಕ ಅಮೋಘ ಚೇತರಿಕೆ ಕಂಡ ತಂಡ ಕೆಕೆಆರ್‌. ತವರಿನ ಈಡನ್‌ ಅಂಗಳದಲ್ಲಿ ಅದು ಆರ್‌ಸಿಬಿಗೆ ಎದ್ದೇಳಲಾಗದಂಥ ಹೊಡೆತವಿಕ್ಕಿತ್ತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಪರಿಪೂರ್ಣ ಸಾಮರ್ಥ್ಯ ತೋರಿದ ಹಿರಿಮೆ ನಿತೀಶ್‌ ರಾಣಾ ಪಡೆಯದ್ದಾಗಿತ್ತು. 12ನೇ ಓವರ್‌ನಲ್ಲಿ 89ಕ್ಕೆ 5 ವಿಕೆಟ್‌ ಉದುರಿಸಿಕೊಂಡಿದ್ದ ಕೆಕೆಆರ್‌, ಇನ್ನೂರರ ಗಡಿ ದಾಟಿದ್ದನ್ನು ಮರೆಯುವಂತಿಲ್ಲ. ರಿಂಕು ಸಿಂಗ್‌, ಶಾರ್ದೂ ಲ್‌ ಠಾಕೂರ್‌ ಸೇರಿಕೊಂಡು ಬೆಂಗಳೂರು ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ್ದರು.
ಕೆಕೆಆರ್‌ ಬೌಲಿಂಗ್‌ ಅತ್ಯಂತ ಘಾತಕವಾಗಿತ್ತು. ವರುಣ್‌ ಚಕ್ರವರ್ತಿ, ಸುನೀಲ್‌ ನಾರಾಯಣ್‌, ಹೊಸಬ ಸುಯಶ್‌ ಶರ್ಮ ಭರ್ಜರಿ ಯಶಸ್ಸು ತಂದಿತ್ತಿದ್ದರು. ಇದೆಲ್ಲವೂ ಗುಜರಾತ್‌ ಪಾಲಿಗೆ ಎಚ್ಚರಿಕೆಯ ಗಂಟೆ.

ಟಾಪ್ ನ್ಯೂಸ್

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.