“ಗ್ಯಾರಂಟಿ’ ಜಾರಿಗೆ ಷರತ್ತು ಹಾಕಬಾರದು: ಬಿ.ವೈ.ವಿಜಯೇಂದ್ರ


Team Udayavani, Jun 6, 2023, 6:15 AM IST

“ಗ್ಯಾರಂಟಿ’ ಜಾರಿಗೆ ಷರತ್ತು ಹಾಕಬಾರದು: ಬಿ.ವೈ.ವಿಜಯೇಂದ್ರ

ಮೈಸೂರು: ಗ್ಯಾರಂಟಿ ಯೋಜನೆಗಳ ಜಾರಿ ವಿಚಾರದಲ್ಲಿ ಷರತ್ತು ಹಾಕಬಾರದು. ಈಗಾಗಲೇ ವಿದ್ಯುತ್‌ ಬಿಲ್‌ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಜಾರಿ ಮಾಡಲು ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ. ಗ್ಯಾರಂಟಿ ಕಾರ್ಡ್‌ ಒಂದು ಕಡೆಯಾದರೆ ಮತ್ತೊಂದು ಕಡೆ ಗ್ರಾಹಕರಿಗೆ ಪೆಟ್ಟು ನೀಡುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆ ಜಾರಿ ವಿಚಾರದಲ್ಲಿ ಷರತ್ತು ಹಾಕಿರುವ ರಾಜ್ಯ ಸರ್ಕಾರದ ನಡೆಯನ್ನು ಶಾಸಕ ಬಿ.ವೈ.ವಿಜಯೇಂದ್ರ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರ ರೊಂದಿಗೆ ಮಾತ ನಾಡಿದ ಅವರು, ಕಾಂಗ್ರೆಸ್‌ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆಗಳ ಮೇಲೆ ಜನರು ಸಾಕಷ್ಟು ನೀರಿಕ್ಷೆಯಲ್ಲಿದ್ದರು. ಈಗಾಗಲೇ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಷರತ್ತು ವಿಧಿಸುತ್ತಿದ್ದಾರೆ, ಇದು ಸರಿಯಲ್ಲ. ಈ ಎಲ್ಲ ವನ್ನೂ ಬಿಜೆಪಿ ಕಾದು ನೋಡುತ್ತಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಜಾರಿಗೆ ಎಷ್ಟು ಹಣ ಬೇಕಾಗುತ್ತದೆ. ಅದಕ್ಕೆ ಹಣವನ್ನು ಹೇಗೆ ಹೊಂದಿಸಿಕೊಳ್ಳುತ್ತಾರೆ, ಹೊಸ ತೆರಿಗೆ ಹಾಕುತ್ತಾರಾ ಅಥವಾ ಸಾಲ ಮಾಡುತ್ತಾರಾ ಇದೆಲ್ಲವನ್ನೂ ಸಹ ಬಿಜೆಪಿ ಗಮನಿಸುತ್ತಿದೆ. ಕಾಂಗ್ರೆಸ್‌ ಕೊಟ್ಟ ಭರವಸೆ ಯಾಥಾವತ್ತಾಗಿ ಜನರಿಗೆ ತಲುಪಬೇಕು. ಇದಕ್ಕೆ ಯಾವುದೇ ಕಂಡಿಷನ್‌ ಹಾಕಬಾರದು. ಈಗಾಗಲೇ ವಿದ್ಯುತ್‌ ದರ ಹೆಚ್ಚಳ ಮಾಡಿದ್ದಾರೆ. ಜತೆಗೆ ಗ್ಯಾರಂಟಿ ಯೋಜನೆ ಜಾರಿಗೆ ಹೆಚ್ಚು ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆಂದು ಕಿಡಿಕಾರಿದರು.

ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿ ಮಾತನಾಡಿ, ಸಚಿವರ ಹೇಳಿಕೆಯನ್ನು ಗಮನಿ ಸಿದರೆ ದೇಶದ ಸಂಸ್ಕೃತಿಯ ಅರಿವು, ಕಾಳಜಿ ಇಲ್ಲದ ವ್ಯಕ್ತಿ ಎನಿಸುತ್ತದೆ. ಈ ರೀತಿಯ ಉಡಾಫೆ ಹೇಳಿಕೆಯನ್ನು ರಾಜ್ಯದ ಜನರು ನೀರಿಕ್ಷೆ ಮಾಡರಲಿಲ್ಲ. ಅನೇಕ ಸಚಿವರು ಗೆದ್ದಿರುವ ವಿಶ್ವಾಸದಲ್ಲಿ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗುವ ರೀತಿ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಹಿಂದೂ ಸಂಸ್ಕೃತಿ, ಪರಂಪರೆ ಗೊತ್ತಿದ್ದರೆ ಈ ರೀತಿ ಹೇಳಿಕೆ ಕೊಡುತ್ತಿರಲಿಲ್ಲ. ನಾಳೆಯಿಂದ ಬಿಜೆಪಿಯವರು ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ. ಜನ ಸಾಮಾನ್ಯರು ಕೂಡ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದರು.

ಟಾಪ್ ನ್ಯೂಸ್

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

1-fdsdsa

ODI: ಭಾರತದ ಎದುರು ವೈಟ್‌ವಾಶ್‌ ತಪ್ಪಿಸಿಕೊಂಡ ಆಸೀಸ್ ; 66 ರನ್ ಗಳ ಜಯ

1-cssadsa

Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ

kejriwal-2

Kejriwal ಬಂಗಲೆ ವಿವಾದ : ಸಿಬಿಐ ತನಿಖೆಗೆ ಗೃಹ ಸಚಿವಾಲಯ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು, ಭೀಮ

ಸಿಎಂ ಸಿದ್ದರಾಮಯ್ಯ

Cauvery; ತಮಿಳುನಾಡಿಗೆ ಮತ್ತೆ ನೀರು ಹರಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ: ಸಿದ್ದರಾಮಯ್ಯ

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

tdy-14

Mysuru Dasara: ಅರಮನೆಗೆ ಬಂದಿಳಿದ ಗಜಪಡೆಯ 2ನೇ ತಂಡ

Mysore; Sainik school in 110 acres in the name of Rayanna: Chief Minister Siddaramaiah

Mysore; ರಾಯಣ್ಣನ ಹೆಸರಲ್ಲಿ 110 ಎಕರೆಯಲ್ಲಿ ಸೈನಿಕ ಶಾಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

UDMangaluruಚಾಲಕರ ಅಪಘಾತ ಪರಿಹಾರ ಯೋಜನೆ: ಅರ್ಜಿ ಆಹ್ವಾನ

Mangaluruಚಾಲಕರ ಅಪಘಾತ ಪರಿಹಾರ ಯೋಜನೆ: ಅರ್ಜಿ ಆಹ್ವಾನ

election lok sabha

One Country, One Election: ಇದು ದೀರ್ಘಾವಧಿ ಪ್ರಕ್ರಿಯೆ…

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

1-ssad

Women’s Hockey : ಸಂಗೀತಾ ಹ್ಯಾಟ್ರಿಕ್‌; ಸಿಂಗಾಪುರ ವಿರುದ್ಧ 13-0 ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.