Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

ಮೋದಿ, ಶಾ ತವರೂರಲ್ಲಿಮೋದಿ ಫ್ಯಾಕ್ಟರ್‌ ಬಿಟ್ಟರೆ ಬೇರೆ ಲೆಕ್ಕಕ್ಕಿಲ್ಲ...

Team Udayavani, Apr 19, 2024, 10:18 AM IST

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

ಗುಜರಾತ್‌… ಇದು ಸತತ 30 ವರ್ಷಗಳಿಂದ ಕೇಸರಿ ಪಾಳಯದ ಅಭೇದ್ಯ ಕೋಟೆಯೆಂದೇ ಪರಿಗಣಿಸಲ್ಪಟ್ಟ ರಾಜ್ಯ. ಬಿಜೆಪಿಯ
ಅತ್ಯುನ್ನತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ತವರು ನೆಲ. 2024 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಇಲ್ಲಿನ ಎಲ್ಲ 26 ಕ್ಷೇತ್ರಗಳನ್ನೂ ಬಿಜೆಪಿ ಕ್ಲೀನ್‌ ಸ್ವೀಪ್‌ ಮಾಡಿವೆ. ಎರಡೂ ಚುನಾವಣೆಯಲ್ಲಿ ಶೇ.60ಕ್ಕೂ ಹೆಚ್ಚು ಮತಗಳನ್ನು ಗಳಿಸುವ ಮೂಲಕ “ಗುಜರಾತ್‌ ಬಿಜೆಪಿಯ ಭದ್ರಕೋಟೆ’ ಎಂಬುದನ್ನು
ಸಾಬೀತುಪಡಿಸಿದೆ. ಈ ಬಾರಿಯೂ ಇದೇ ಫ‌ಲಿತಾಂಶ ಮರುಕಳಿಸಲಿದೆ ಎನ್ನುವ ನಿರೀಕ್ಷೆಯಲ್ಲಿದೆ ಬಿಜೆಪಿ.

ಆದರೆ ಈ ಬಾರಿ ಬಿಜೆಪಿಯೊಳಗೆ ಕಾಣಿಸಿಕೊಂಡಿರುವ ಸಣ್ಣಪುಟ್ಟ ಆಂತರಿಕ ಕಲಹಗಳು ಪಕ್ಷಕ್ಕೆ ಡ್ಯಾಮೇಜ್‌ ಉಂಟುಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್‌ಕೋಟ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪರುಷೋತ್ತಮ ರುಪಾಲಾ ಅವರು ಕ್ಷತ್ರಿಯ(ರಜಪೂತ)ರ ಬಗ್ಗೆ ನೀಡಿದ್ದಾರೆನ್ನಲಾದ ವಿವಾದಿತ ಹೇಳಿಕೆಯು ಆ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಅವರನ್ನು ಅಭ್ಯರ್ಥಿ ಸ್ಥಾನದಿಂದ ಕಿತ್ತುಹಾಕಬೇಕೆಂದು ಆಗ್ರಹಿಸಿ ಕೆಲವು ರಜಪೂತ ಮಹಿಳೆಯರು ಇತ್ತೀಚೆಗೆ ಜೋಹಾರ್‌ (ಬೆಂಕಿಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳುವುದು) ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕಿದ್ದರು. ಆದರೆ ಬಿಜೆಪಿ ನಾಯಕತ್ವ ಇದಕ್ಕೆ ಕ್ಯಾರೇ ಎಂದಿಲ್ಲ. ಪರಿಣಾಮ ಕ್ಷತ್ರಿಯ ಸಮುದಾಯದ ನಾಯಕ ರಾಜ್‌ ಶೇಖಾವತ್‌ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ರಜಪೂತರು ಸೌರಾಷ್ಟ್ರ ಪ್ರದೇಶದ ಪ್ರಭಾವಿ ಸಮುದಾಯವಾಗಿದ್ದು, ಹಿಂದಿನಿಂದಲೂ ಇದು ಬಿಜೆಪಿಯ
ಮತಬ್ಯಾಂಕ್‌ ಆಗಿದೆ. ರೂಪಾಲ ಹೇಳಿಕೆಯು ಬಿಜೆಪಿಯ ಮತ ಹಂಚಿಕೆಯ ಮೇಲೆ ಸಣ್ಣಮಟ್ಟಿಗೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಹಾಗಂತ ರುಪಾಲರನ್ನು ಬದಲಿಸಲು ಹೊರಟರೆ ಬಿಜೆಪಿಯ ಭದ್ರ ವೋಟ್‌ಬ್ಯಾಂಕ್‌ ಆಗಿರುವ ಪಾಟೀದಾರ ಸಮುದಾಯ ತಿರುಗಿಬೀಳುವ ಆತಂಕವೂ ಇದೆ. ಹೀಗಾಗಿ ಈ ವಿವಾದವು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿರುವುದಂತೂ ನಿಜ.

ಇದಲ್ಲದೇ, ಪೋರಬಂದರ್‌ನ ವಸೋಯಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಮನ್‌ಸುಖ್‌ ಮಾಂಡವೀಯ ಅವರಿಗೆ ಟಿಕೆಟ್‌ ನೀಡಿರು
ವುದು ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಇನ್ನು, ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ತೀವ್ರ ಪ್ರತಿರೋಧ, ಅಭ್ಯರ್ಥಿಗಳ ವಿರುದ್ಧದ ಪೋಸ್ಟರ್‌ಗಳ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ವಡೋದರಾದ 2 ಬಾರಿ ಸಂಸದೆ ರಂಜನ್‌ ಬೆನ್‌ ಭಟ್‌ ಮತ್ತು ಸಬರಕಾಂತ ಕ್ಷೇತ್ರದ ಅಭ್ಯರ್ಥಿ ಭಿಖಾಜಿ ಠಾಕೂರ್‌ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಪಕ್ಷದ ಕಾರ್ಯಕರ್ತರನ್ನು ನಿರ್ಲಕ್ಷಿಸಿ, ವಲಸಿಗರಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪವೂ ಬಿಜೆಪಿಯೊಳಗೆ ಅಸಮಾಧಾನ ಹೊಗೆ ಮೂಡಿಸಿದೆ. ಇನ್ನೊಂದೆಡೆ ಈ ಬಾರಿ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳು “ಇಂಡಿಯಾ’ ಒಕ್ಕೂಟದ ಹೆಸರಿನಲ್ಲಿ ಕೇಸರಿ ಕೋಟೆಗೆ ಲಗ್ಗೆ ಹಾಕಲು ಸಜ್ಜಾಗಿ ನಿಂತಿವೆ. ಬಿಜೆಪಿಗೆ ಟಫ್ ಫೈಟ್‌ ಕೊಟ್ಟು, ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳುವ ಗುರಿ ಹಾಕಿಕೊಂಡು ಅಖಾಡಕ್ಕಿಳಿದಿವೆ. ಕಾಂಗ್ರೆಸ್‌ 24 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಆಪ್‌ಗೆ ಭರೂಚ್‌ ಮತ್ತು ಭಾವನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ.

ಈಗಾಗಲೇ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಗುಜರಾತ್‌ನ ಬುಡಕಟ್ಟು ನೆಲೆಯೊಳಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಅದರ ಫಲವೆಂಬಂತೆ, 2022ರ ವಿಧಾನಸಭೆ ಚುನಾವಣೆಯಲ್ಲಿ ದೇಡಿಯಾಪಾದ(ಎಸ್ಟಿ) ಕ್ಷೇತ್ರವು ಆಪ್‌ನ ತೆಕ್ಕೆಗೆ ಬಂದಿತ್ತು. ಇನ್ನು, ಒಂದು ಕಾಲದಲ್ಲಿ ಗುಜರಾತ್‌ನ ಬುಡಕಟ್ಟು ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್‌ ಈಗ ಮತ್ತೆ ಅದೇ ಪ್ರದೇಶದಲ್ಲಿ ಕಳೆದುಕೊಂಡ ನೆಲೆಯನ್ನು ಹುಡುಕತೊಡಗಿದೆ.

ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ನ್ಯಾಯ ಯಾತ್ರೆ ಕೂಡ ಇದೇ ಪ್ರದೇಶಗಳಿಂದ ಹಾದು ಬಂದಿರುವುದು ಅದಕ್ಕೆ ಸಾಕ್ಷಿ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಇಲ್ಲಿನ ಬಿಜೆಪಿ ವಿರೋಧಿ ಮತಗಳೆಲ್ಲ ಆಪ್‌, ಕಾಂಗ್ರೆಸ್‌ ಮತ್ತು ಭಾರತೀಯ ಟ್ರೆ„ಬಲ್‌ ಪಾರ್ಟಿ ನಡುವೆ ಹರಿದುಹಂಚಿ ಹೋಗಿದ್ದವು. ಆದರೆ ಈ ಬಾರಿ ಆಪ್‌ ಮತ್ತು ಕಾಂಗ್ರೆಸ್‌ ಇಂಡಿಯಾ ಒಕ್ಕೂಟದ ಭಾಗವಾಗಿ ಸ್ಪರ್ಧಿಸುತ್ತಿರುವ ಕಾರಣ ಮತ ವಿಭಜನೆ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಆದರೆ ನಲ್‌ ಸೆ ಜಲ್‌, ಗೃಹ ನಿರ್ಮಾಣ ಯೋಜ ನೆಗಳು, ಆರೆಸ್ಸೆಸ್‌ ನಡೆಸಿರುವ ತಳಮಟ್ಟದ ಪಕ್ಷ ಸಂಘಟನ ಕಾರ್ಯಗಳೆಲ್ಲ ಬುಡಕಟ್ಟು ಬಾಹುಳ್ಯದ ಪ್ರದೇಶ ಗಳಲ್ಲಿ ಬಿಜೆಪಿ ಪರ ವಾತಾವರಣ ಸೃಷ್ಟಿಸಿದ್ದು, ಅದನ್ನು ಅಷ್ಟು ಸುಲಭವಾಗಿ ತೆಗೆದುಹಾಕಲು ಇಂಡಿಯಾ ಒಕ್ಕೂಟಕ್ಕೆ ಸಾಧ್ಯವಿಲ್ಲ. ಅಲ್ಲದೇ, ಕಾಂಗ್ರೆಸ್‌ ನಲ್ಲಿ ಪ್ರಭಾವಿ ಬುಡಕಟ್ಟು ನಾಯಕ ಎನಿಸಿಕೊಂಡವರು ಯಾರೂ ಇಲ್ಲ. ಪ್ರಭಾವಿಗಳೆನಿಸಿಕೊಂಡ ಅನೇಕ ನಾಯಕರು ಈ ಹಿಂದೆಯೇ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ, ಟ್ರೈಬಲ್‌ ಬೆಲ್ಟ್‌ ನಲ್ಲಿ ಖಾತೆ ತೆರೆಯುವ ಇಂಡಿಯಾ ಒಕ್ಕೂಟದ ಕನಸು ನನಸಾಗುವುದು ದೂರದ ಮಾತು ಎಂದು ಹೇಳಲಾಗುತ್ತಿದೆ.

ಯಾವ ಪಕ್ಷಗಳು ಮೈತ್ರಿ ಮಾಡಿಕೊಂಡರೂ ಬಿಜೆಪಿಯ ಭದ್ರ ಮತಬ್ಯಾಂಕ್‌ ಅನ್ನು ಘಾಸಿಗೊಳಿಸಲು ಸಾಧ್ಯವಿಲ್ಲ ಎಂಬ ವಿಶ್ವಾಸ
ಬಿಜೆಪಿಯದ್ದು. ಮತ್ತೊಂದೆಡೆ, 2022ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲಲು ಆಪ್‌ ಮತ್ತು ಕಾಂಗ್ರೆಸ್‌ನ ಮತಗಳು ವಿಭಜನೆ ಯಾಗಿದ್ದೇ ಕಾರಣ. ಹೀಗಾಗಿ, ಈ ಬಾರಿ ಮತಗಳು ಚದುರಿ ಹೋಗದೇ ಇದ್ದರೆ ಇಂಡಿಯಾ ಒಕ್ಕೂಟಕ್ಕೆ ಲಾಭವಾ ಗುವ ಸಾಧ್ಯತೆ ಯಿದೆ ಎನ್ನುವುದು ವಿಪಕ್ಷಗಳ ಲೆಕ್ಕಾಚಾರ. ಆದರೆ ಗುಜ ರಾತ್‌ನಲ್ಲಿ “ಮೋದಿ ಫ್ಯಾಕ್ಟರ್‌’ ಬಿಟ್ಟು ಬೇರೇನೂ ಲೆಕ್ಕಕ್ಕೇ ಬರದ ಕಾರಣ, ಬಿಜೆಪಿ ಪ್ರಾಬಲ್ಯವನ್ನು ತಗ್ಗಿಸುವುದು ಸುಲಭದ ಮಾತಲ್ಲ.

*ಹಲೀಮತ್‌ ಸಅದಿಯ

ಟಾಪ್ ನ್ಯೂಸ್

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.