ಹಂಪಿ ವಿವಿ ಹಾಸ್ಟೆಲ್ನ 40 ವಿದ್ಯಾರ್ಥಿನಿಯರು ಅಸ್ವಸ್ಥ; 6 ಮಂದಿ ಗಂಭೀರ
ರಾತ್ರಿಯೂಟ ಸೇವಿಸಿದ ಬಳಿಕ ಅಸ್ವಸ್ಥ ಗೊಂಡಿರುವ ವಿದ್ಯಾರ್ಥಿನಿಯರು
Team Udayavani, May 7, 2019, 9:43 AM IST
ಹೊಸಪೇಟೆ: ಕಮಲಾಪುರದ ಕನ್ನಡ ವಿವಿಯ ಹಾಸ್ಟೆಲ್ ನಲ್ಲಿ ಸೋಮವಾರ ರಾತ್ರಿ ಊಟ ಮಾಡಿದಬಳಿಕ 40 ಮಂದಿ ವಿದ್ಯಾರ್ಥಿನಿಯರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಆ ಪೈಕಿ 6 ಜನರ ಸ್ಥಿತಿ ಗಂಭೀರವಾಗಿದೆ.
ಪಿಎಚ್ಡಿ ವ್ಯಾಸಂಗಕ್ಕಾಗಿ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿನಿಯರು ಎಂದು ತಿಳಿದು ಬಂದಿದೆ.
ಹೊಸಪೇಟೆ ಮತ್ತು ಕಮಾಲಾಪುರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ರಾತ್ರಿ ಮಜ್ಜಿಗೆ ಸೇವಿಸಿದ ಬಳಿಕ ವಿದ್ಯಾರ್ಥಿನಿಯರಿಗೆ ವಾಂತಿ ಮತ್ತು ಬೇಧಿ ಕಾಣಿಸಿಕೊಂಡಿದೆ.
ಕುಲಪತಿ ಡಾ.ಸ.ಚಿ.ರಮೇಶ್ ಅವರು ಆಸ್ಪತ್ರೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.