
ಹಿಮಾಚಲದಲ್ಲಿ ಭೂಕುಸಿತ 7 ಪಟ್ಟು ಹೆಚ್ಚು
Team Udayavani, Mar 13, 2023, 7:20 AM IST

ಹಿಮಾಲಯ ಪರ್ವತಶ್ರೇಣಿಯಲ್ಲಿ ಬರುವ ಪ್ರಮುಖ ರಾಜ್ಯಗಳಲ್ಲಿ ಇತ್ತೀಚೆಗೆ ಭೂಕುಸಿತಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಹಿಮಾಚಲಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂಕುಸಿತ ಪ್ರಮಾಣ 7 ಪಟ್ಟು ಹೆಚ್ಚಾಗಿದೆ. 2020ರಲ್ಲಿ ಕೇವಲ 16 ಬಾರಿ ಭೂಕುಸಿತಗಳು ಉಂಟಾದರೆ, 2022ರಲ್ಲಿ 117 ಬಾರಿ ಭೂಕುಸಿತ ಸಂಭವಿಸಿದೆ.
ಕಾರಣವೇನು?
ಹಿಮಾಚಲಪ್ರದೇಶ ಹಿಮಾಲಯ ಪರ್ವತಶ್ರೇಣಿಯಲ್ಲಿ ಬರುತ್ತದೆ. ಇಲ್ಲಿನ ಮಣ್ಣು ಮೂಲಭೂತವಾಗಿ ಸಡಿಲವಾಗಿರುತ್ತದೆ. ಇತ್ತೀಚೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದಕ್ಕೆ ಬೇರೆಯದ್ದೇ ಕಾರಣಗಳಿವೆ. ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಹೆಚ್ಚಿವೆ. ಇದಕ್ಕಾಗಿ ಪರ್ವತಗಳ ಇಳಿಜಾರುಪ್ರದೇಶಗಳನ್ನು ಕಡಿಯಲಾಗುತ್ತಿದೆ. ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ. ರಸ್ತೆ ನಿರ್ಮಾಣ, ಜಲವಿದ್ಯುತ್ ಯೋಜನೆಗಳು, ಸುರಂಗ ನಿರ್ಮಾಣ, ಗಣಿಗಾರಿಕೆ ಮುಂತಾದ ಕಾರಣಕ್ಕೆ ಪರ್ವತಗಳನ್ನೇ ಸ್ಫೋಟಿಸಲಾಗುತ್ತಿದೆ. ಇದರಿಂದ ನೆಲ ತೀವ್ರವಾಗಿ ಅದುರಿ, ಕುಸಿಯುತ್ತಿದೆ. ಮತ್ತೂಂದು ಮುಖ್ಯ ಕಾರಣವೆಂದರೆ, ಕಡಿಮೆ ಅವಧಿಯಲ್ಲಿ ವಿಪರೀತ ಮಳೆಯಾಗುತ್ತಿರುವುದು. ಇಲ್ಲಿ ಮಳೆ ಬೀಳುವ ಅವಧಿ ಕಡಿಮೆಯಿದೆ. ಆದರೆ ತೀವ್ರತೆ ಬಹಳ ಹೆಚ್ಚಾಗಿದೆ. ಹೀಗಾಗಿ ಸವಕಳಿಯೂ ಹೆಚ್ಚಾಗುತ್ತಿದೆ.
ಮುಂಗಾರು ಅವಧಿಯಲ್ಲೇ ಗರಿಷ್ಠ ಕುಸಿತ
ಭೂಕುಸಿತಗಳು ಗರಿಷ್ಠ ಪ್ರಮಾಣದಲ್ಲಿ ಕಂಡುಬಂದಿದ್ದು ಮುಂಗಾರು ಮಳೆ ಅವಧಿಯಲ್ಲಿ. ಮನುಷ್ಯ ಚಟುವಟಿಕೆಗಳು ಹೆಚ್ಚಿದ್ದು, ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಪ್ರಾಕೃತಿಕ ಸಂಪನ್ಮೂಲಗಳನ್ನು ಶೋಷಿಸುತ್ತಿರುವುದೇ ಇದಕ್ಕೆ ಕಾರಣವೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಿಮಾಚಲದಲ್ಲಿ 17,120 ಪ್ರದೇಶಗಳನ್ನು ಭೂಕುಸಿತಪೀಡಿತ ತಾಣಗಳೆಂದು ಗುರುತಿಸಲಾಗಿದೆ. ಈ ಪೈಕಿ 675 ಸ್ಥಳಗಳು ವಸತಿಯೋಗ್ಯವೇ ಅಲ್ಲ ಎನ್ನುವಂತಹ ಸ್ಥಿತಿಗೆ ಮುಟ್ಟಿವೆ.
2020ರಲ್ಲಿ ಸಂಭವಿಸಿದ ಭೂಕುಸಿತ – 16
2022ರಲ್ಲಿ ಸಂಭವಿಸಿದ್ದು – 117
ಈ ಪೈಕಿ ಕುಲ್ಲುವೊಂದರಲ್ಲೇ ಆಗಿದ್ದು- 21
ಭೂಕುಸಿತ ಭೀತಿ ಹೆಚ್ಚಿರುವ ಪ್ರದೇಶಗಳು- 17,120
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttar Pradesh: ಮಗಳ ಮದುವೆಗೆ ಕೂಡಿಟ್ಟ 18 ಲಕ್ಷ ರೂ. ಗೆದ್ದಲು ಪಾಲು!

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್ ಗಡ್ಕರಿ

Cable TV service ಎಂಎಸ್‌ಒಗಳಿಗೆ 10 ವರ್ಷ ಲೈಸನ್ಸ್: ಕೇಂದ್ರ ಸರಕಾರ

US aims ಭಾರತೀಯರಿಗೆ 10 ಲಕ್ಷಕ್ಕೂ ಅಧಿಕ ಅಮೆರಿಕದ ವಲಸೆರಹಿತ ವೀಸಾ ವಿತರಣೆ
MUST WATCH
ಹೊಸ ಸೇರ್ಪಡೆ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ; ಪ್ರತಿಕೃತಿ ದಹಿಸಿ ಪ್ರತಿಭಟನೆ

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ