ಕಿರಿಯರ ಮಹಿಳಾ ಹಾಕಿ ವಿಶ್ವಕಪ್: ಭಾರತಕ್ಕೆ ಜಯ
Team Udayavani, Apr 5, 2022, 10:30 PM IST
ಪೊಚೆಫ್ಸ್ಟ್ರೊಮ್: ಮುಮ್ತಾಜ್ ಖಾನ್ ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಭಾರತೀಯ ವನಿತಾ ಹಾಕಿ ತಂಡವು ಎಫ್ಐಎಚ್ ಕಿರಿಯರ ವಿಶ್ವಕಪ್ ಹಾಕಿ ಕೂಟದಲ್ಲಿ ಮಲೇಷ್ಯಾ ತಂಡವನ್ನು 4-0 ಗೋಲುಗಳಿಂದ ಸೋಲಿಸಿ ತನ್ನ ಬಣದಲ್ಲಿ ಅಜೇಯ ದಾಖಲೆ ಮಾಡಿದೆ.
ಈಗಾಗಲೇ ಕ್ವಾರ್ಟರ್ಫೈನಲ್ ಹಂತಕ್ಕೇರಿದ್ದ ಭಾರತವು ಈ ಪಂದ್ಯದಲ್ಲಿ ನಾಲ್ಕು ಫೀಲ್ಡ್ ಗೋಲುಗಳನ್ನು ಬಾರಿಸಿ ಗಮನ ಸೆಳೆದಿದೆ.
ಇದರಲ್ಲಿ ಮೂರು ಗೋಲನ್ನು ಮುಮ್ತಾಜ್ ಅನುಕ್ರಮವಾಗಿ 10, 26 ಮತ್ತು 59ನೇ ನಿಮಿಷದಲ್ಲಿ ಹೊಡೆದಿದ್ದರು.
ಇನ್ನೊಂದು ಗೋಲನ್ನು ಸಂಗೀತಾ ಕುಮಾರಿ 11ನೇ ನಿಮಿಷದಲ್ಲಿ ಹೊಡೆದಿದ್ದರು. ಈ ಗೆಲುವಿನಿಂದಾಗಿ ಭಾರತವು “ಡಿ’ ಬಣದಲ್ಲಿ ತಾನಾಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಗರಿಷ್ಠ 9 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು.
ಇದನ್ನೂ ಓದಿ:ಹಾವೇರಿ : ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿತು ಮಹಿಳೆ ಸಾವು, ವಿದ್ಯುತ್ ಕಂಬ, ಮರಗಳು ಧರೆಗೆ
ಭಾರತವು ಈ ಹಿಂದಿನ ಪಂದ್ಯಗಳಲ್ಲಿ ವೇಲ್ಸ್ 5-1 ಮತ್ತು ಜರ್ಮನಿ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸಿತ್ತು. ಭಾರತವು ಶುಕ್ರವಾರ ನಡೆಯುವ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೊರಿಯ ತಂಡವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ