
ಮಂಗಳವಾರದ ರಾಶಿ ಫಲ; ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ, ನಿರೀಕ್ಷಿತ ಧನಾಗಮನ
Team Udayavani, Dec 6, 2022, 7:20 AM IST

ಮೇಷ: ಅನಿರೀಕ್ಷಿತ ಧನ ಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಪರರಿಂದ ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಉತ್ತಮ ಜವಾಬ್ದಾರಿಯುತ ವಾಕ್ ಚತುರತೆ. ಗುರುಹಿರಿಯರಿಂದ ಸಂತೋಷ.
ವೃಷಭ: ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿ ಸಾಧನೆಯಿಂದ ನೆಮ್ಮದಿ. ಉತ್ತಮ ಧನಾರ್ಜನೆ. ಬಂಧುಮಿತ್ರರ ಸಹಕಾರ. ದಾಂಪತ್ಯದಲ್ಲಿ ಪ್ರೀತಿ, ಅನುರಾಗ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪರಿಶ್ರಮದಿಂದ ಮುನ್ನಡೆ.
ಮಿಥುನ: ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಸ್ವಚ್ಛತೆಗೆ ಆದ್ಯತೆ ನೀಡಿ. ದೂರದ ವ್ಯವಹಾರಗಳಲ್ಲಿ ಪಾಲುದಾರಿಕಾ ವೃತ್ತಿಯಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ನಿಮಿತ್ತ ಶ್ರಮ.
ಕರ್ಕ: ಸಣ್ಣ ಪ್ರಯಾಣ ಸಂಭವ. ನಿರೀಕ್ಷೆಗೂ ಮೀರಿದ ಧನಾಗಮನ. ಮನಃಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನ ಗೌರವ ವೃದ್ಧಿ. ಅಧಿಕಾರಯುತ ನಡೆಯಿಂದ ಸಫಲತೆ. ಬಂಧುಮಿತ್ರರ ಸಹಾಯ ಸಹಕಾರ ಲಭ್ಯ.
ಸಿಂಹ: ಆರೋಗ್ಯ ಸುಧಾರಣೆ. ಆಲೋಚಿಸಿದ ರೀತಿಯಲ್ಲಿ ಕಾರ್ಯವೃದ್ಧಿಯಾದುದರಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ. ಗೌರವ ಪ್ರಾಪ್ತಿ. ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ. ದಾಂಪತ್ಯ ಸುಖ ವೃದ್ಧಿ.
ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ, ನೇತೃತ್ವ. ಗುರುಹಿರಿಯರ ಸಲಹೆ ಸಹಕಾರ ಆಶೀರ್ವಾದ ಪ್ರಾಪ್ತಿ. ಧನಾರ್ಜನೆಗೆ ಸರಿಸಮವಾಗಿ ಧನವ್ಯಯ ತೋರೀತು. ಮಕ್ಕಳಿಂದ ತೃಪ್ತಿ. ಆಸ್ತಿ ವಿಚಾರಗಳಲ್ಲಿ ಉತ್ತಮ ಬದಲಾವಣೆ ಸಂಭವ.
ತುಲಾ: ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಲಾಭ. ಗೌರವಾದಿ ವೃದ್ಧಿ. ಎಲ್ಲರೂ ನೆನಪಿಡುವಂತಹ ಕಾರ್ಯಶೈಲಿ. ಸ್ವಾರ್ಜಿತ ಧನ ಸಂಪತ್ತು ವೃದ್ಧಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಉತ್ತಮ. ಮಾನಸಿಕ ನೆಮ್ಮದಿ. ಅವಿವಾಹಿತರಿಗೆ ವಿವಾಹ ಯೋಗ.
ವೃಶ್ಚಿಕ: ಅನಿರೀಕ್ಷಿತ ಧನ ಸಂಪತ್ತಿನ ವೃದ್ಧಿ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಬಂಧುಮಿತ್ರರ ಸಹಾಯ ಲಭಿಸದು. ನಿಮ್ಮ ಪರಿಶ್ರಮದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿ. ಮಕ್ಕಳಿಂದ ಸಂತೋಷ. ಗುರುಹಿರಿಯರ ಉತ್ತಮ ಸಹಕಾರ.
ಧನು: ಕೆಲಸ ಕಾರ್ಯಗಳಲ್ಲಿ ಚಾಣಾಕ್ಷತನ, ಜವಾ ಬ್ದಾರಿ ಯಿಂದ ಯಶಸ್ಸು. ಹಣಕಾಸಿನ ವಿಚಾರ ದಲ್ಲಿ ದಾಕ್ಷಿಣ್ಯದಿಂದ ನಷ್ಟ ಸಂಭವ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ದಾಂಪತ್ಯ ತೃಪ್ತಿಕರ. ಸರಕಾರೀ ಕಾರ್ಯಗಳಲ್ಲಿ ಪ್ರಗತಿ. ದೂರದ ಮಿತ್ರರಿಂದ ಸಹಾಯ.
ಮಕರ: ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಮನೆಯಲ್ಲಿ ಸಂತಸದ ವಾತಾವರಣಕ್ಕೆ ತೊಂದರೆ ಆಗ ದಂತೆ ಕಾರ್ಯ ಪ್ರವೃತ್ತರಾಗಿ. ಮಾತಿನಲ್ಲಿ ತಾಳ್ಮೆ ಅಗತ್ಯ. ಬಂಧುಮಿತ್ರರಲ್ಲಿ ನಿಷ್ಠುರ ವರ್ತನೆ ಸಲ್ಲದು. ದೂರದ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಮಾಡದಿರಿ.
ಕುಂಭ: ಸಣ್ಣ ಪ್ರಯಾಣ ಸಂಭವ. ಅಧ್ಯಯನ ದಲ್ಲಿ ಮಗ್ನತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆರೋಗ್ಯ ಗಮನಿಸಿ. ಸಾಂಸಾರಿಕ ಸುಖ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರ ಸಹಕಾರದಿಂದ ಪ್ರಗತಿ. ದೂರದ ಮಿತ್ರರ ಭೇಟಿ.
ಮೀನ: ನಷ್ಟ ವಸ್ತುಗಳು ಪ್ರಯತ್ನಿಸಿದರೆ ಸಿಗುವ ಸಂಭವ. ಧನ ಸಂಪತ್ತಿನ ಅನಿರೀಕ್ಷಿತ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಆದರದ ಮನ್ನಣೆ. ಸಹೋದ್ಯೋಗಿಗಳಿಂದ ಅಲ್ಪ ಸಹಾಯ. ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಅಧ್ಯಯನದಲ್ಲಿ ತಲ್ಲೀನತೆಯಿಂದ ಮಾನಸಿಕ ತೃಪ್ತಿ. ಸಾಂಸಾರಿಕ ಸುಖ ತೃಪ್ತಿದಾಯಕ. ದೇವತಾ ಸ್ಥಳ ಸಂದರ್ಶನ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಶಿ ಫಲ: ಅವಿವಾಹಿತರಿಗೆ ವಿವಾಹ ಭಾಗ್ಯ, ದೂರ ಪ್ರಯಾಣ ಸಂಭವ, ಎಲ್ಲರೂ ಶ್ಲಾಘಿಸುವಂತಹ ದಿನಚರಿ

ರಾಶಿ ಫಲ: ಆರೋಗ್ಯದ ಬಗ್ಗೆ ಗಮನವಿರಲಿ, ಅತಿಯಾದ ಕಾರ್ಯ ಒತ್ತಡ ಎದುರಾದೀತು

ರಾಶಿ ಫಲ: ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ಇದ್ದರೂ ಧನಾರ್ಜನೆಗೆ ಅಧಿಕ ಶ್ರಮ ವಹಿಸಬೇಕಾದೀತು

ರಾಶಿ ಫಲ; ನಿರೀಕ್ಷಿತ ಸ್ಥಾನ ಸುಖ ವೃದ್ಧಿ, ಹಣಕಾಸಿನ ವಿಚಾರದಲ್ಲಿ ಉತ್ತಮ ಬದಲಾವಣೆ

ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಹಣಕಾಸಿನ ವಿಚಾರದಲ್ಲಿ ಪ್ರಗತಿ ಉಂಟಾಗಲಿದೆ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರ ದಂಡು

ಸಮಾಜದಲ್ಲಿ ತುಳಿತಕ್ಕೆ ಒಳಗಾದ ಪ್ರತಿ ವರ್ಗದ ಅಭಿವೃದ್ಧಿಗೆ ಬದ್ಧ: ಮೋದಿ

ಬಸ್ ಚಾಲಕನ ವೇಗಕ್ಕೆ ಕಳಚಿ ಹೋದ ಚಕ್ರ: ಅಪಾಯದಿಂದ ಪಾರಾದ ಪ್ರಯಾಣಿಕರು

ಕುಂದಾಪುರ: ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಅಂಬೇಡ್ಕರ್ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ