ಕುಂದಾಪುರ: ಆಸ್ಪತ್ರೆ ಬಿಲ್‌ 90 ಸಾವಿರ ರೂ., ಇಲಾಖೆ ನೀಡಿದ್ದು 1,725 ರೂ.!

Team Udayavani, Dec 14, 2022, 7:50 AM IST

ಆಸ್ಪತ್ರೆ ಬಿಲ್‌ 90 ಸಾವಿರ ರೂ., ಇಲಾಖೆ ನೀಡಿದ್ದು 1,725 ರೂ.!

ಕುಂದಾಪುರ: ಗುಲ್ವಾಡಿಯ ಕೌಂಜೂರಿನ ಕಾರ್ಮಿಕರೊಬ್ಬರು ಕಟ್ಟಡ ನಿರ್ಮಾಣ ಸಂದರ್ಭ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹೊರಬರುವಾಗ 90 ಸಾವಿರ ರೂ. ಕಟ್ಟಬೇಕಾಯಿತು. ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಚಿಕಿತ್ಸಾ ವೆಚ್ಚ ದೊರೆಯುವ ಭರವಸೆ ಇರಿಸಿದ್ದ ಅವರಿಗೆ ಅದೆಷ್ಟೋ ಸಮಯದ ಬಳಿಕ ಮಂಡಳಿಯು 1,725 ರೂ. ಪಾವತಿಸಿತು!
ಇಂತಹ ಪ್ರಕರಣಗಳು ಹಲವು. ಮತ್ತೂಬ್ಬರಿಗೆ 38,340 ರೂ. ಬಿಲ್‌ಗೆ 4,800 ರೂ., 20,930 ರೂ.ಗೆ 6 ಸಾವಿರ ರೂ., 13,072 ರೂ.ಗೆ 1,500 ರೂ. 2.2 ಲಕ್ಷ ರೂ.ಗೆ 11,500 ರೂ., 23 ಸಾವಿರ ರೂ.ಗೆ 1,800 ರೂ., 1.37 ಲಕ್ಷ ರೂ.ಗೆ 29 ಸಾವಿರ ರೂ. ಕೊಟ್ಟು ಕೈ ತೊಳೆದುಕೊಂಡದ್ದೂ ಇದೆ.

ಕಟ್ಟಡ ಕಾರ್ಮಿಕರ ವೈದ್ಯ ಕೀಯ ಸಹಾಯಧನ, ಪ್ರಮುಖ ಕಾಯಿಲೆಗಳ ಚಿಕಿತ್ಸಾ ವೆಚ್ಚ, ಅಪ‌ಘಾತ ಚಿಕಿತ್ಸಾ ವೆಚ್ಚದ ಮರುಪಾವತಿಯನ್ನು ಕಾರ್ಮಿಕ ಕಲ್ಯಾಣ ಮಂಡಳಿ ಮಾಡುತ್ತದೆ. ಗಂಭೀರ ಚಿಕಿತ್ಸೆಗೆ 2 ಲಕ್ಷ ರೂ. ವರೆಗೆ, ಸಹಜ

ವಾದ ಚಿಕಿತ್ಸೆಗೆ 300 ರೂ.ಗಳಿಂದ 20 ಸಾವಿರ ರೂ. ವರೆಗೆ ನೀಡಬಹುದು. ಈಗ ಸಿಗುತ್ತಿರುವುದು ತೀರಾ ಅತ್ಯಲ್ಪ. ವೈದ್ಯಕೀಯ ಚಿಕಿತ್ಸಾ ಸಹಾಯಧನದಲ್ಲಿ ಕಾರ್ಮಿಕ 72 ಗಂಟೆಗಿಂತ ಹೆಚ್ಚು ಸಮಯ ಒಳ ರೋಗಿಯಾಗಿ ಆಸ್ಪತ್ರೆಗೆ ಸೇರಿದ್ದರೆ ಬಿಲ್‌ ಎಷ್ಟೇ ಆಗಿದ್ದರೂ ದಿನಕ್ಕೆ 300 ರೂ. ಮಾತ್ರ. ಅದನ್ನು ಪಡೆಯಲೂ ಕೆಲವು ಬಾರಿ ಸಿಗುವುದಕ್ಕಿಂತ ಹೆಚ್ಚು ವ್ಯಯಿಸಬೇಕಾಗುತ್ತದೆ. 4-5 ದಿನದ ಅಲೆದಾಟ, ಅರ್ಜಿ ಸಲ್ಲಿಕೆ, ವೈದ್ಯರ ದೃಢೀಕರಣ ಎಂದು ಲೆಕ್ಕಾಚಾರ ಹಾಕಿದರೆ ಕಳೆದುಕೊಳ್ಳುವುದೇ ಅಧಿಕ.

ಕಠಿನ ನಿಯಮ
ಯಾವುದಾದರೂ ಅಂಗ ಊನ ಗೊಂಡು ತಿಂಗಳುಗಟ್ಟಲೆ ಮನೆಯಲ್ಲೇ ಇರಬೇಕಾಗಿ ಬಂದರೆ ಮಾಸಾಶನ ಹಾಗೂ 2 ಲಕ್ಷ ರೂ. ಪರಿಹಾರ ನೀಡ ಬೇಕೆಂಬುದು ನಿಯಮ; ಆದರೆ ಅಂಗ ವೈಕಲ್ಯ ಪ್ರಮಾಣ ಪತ್ರ ಇದ್ದರೆ ಮಾತ್ರ. ಶಾಶ್ವತ ಅಂಗವೈಕಲ್ಯ ಆಗದೇ ವೈದ್ಯರು ಪ್ರಮಾಣಪತ್ರ ನೀಡುವುದಿಲ್ಲ. ತಾತ್ಕಾಲಿಕ ಪ್ರಮಾಣಪತ್ರದಂತಹ ತಾಂತ್ರಿಕ ಪರಿ ಹಾರ ನೀಡಬಹುದಾದರೂ ಮಂಡಳಿ, ಸಚಿವಾಲಯ ಮನಸ್ಸು ಮಾಡಿಲ್ಲ.

ಬದಲಾವಣೆ
ಕಾರ್ಮಿಕ ಕಲ್ಯಾಣ ಮಂಡಳಿ ಮನಸ್ಸು ಮಾಡಿದರೆ ಬದಲಾವಣೆ ಸಾಧ್ಯ. ಇತ್ತೀಚೆ ಗಷ್ಟೇ ಎರಡು ನಿಯಮಗಳಲ್ಲಿ ಬದಲಾವಣೆ ತಂದಿದೆ. ಕಾರ್ಮಿಕರ ಸಹಜ ಸಾವಿಗೆ ದೊರೆಯುತ್ತಿದ್ದ 54 ಸಾವಿರ ರೂ.ಗಳನ್ನು 75 ಸಾವಿರಕ್ಕೆ ಏರಿಸಿದೆ. ಕಟ್ಟಡ ನಿರ್ಮಾಣ ವೇಳೆ ಬಿದ್ದು ಸಾವಿಗೀಡಾದರೆ 5 ಲಕ್ಷ ರೂ., ರಸ್ತೆ ಅಪಘಾತದಲ್ಲಿ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ಎಂದಿದ್ದ ತಾರತಮ್ಯವನ್ನೂ ಸಂಘಟನೆಗಳ ಮನವಿ ಮೇರೆಗೆ ಸರಿಪಡಿಸಲಾಗಿದೆ.

ವೈದ್ಯಕೀಯ ಸಹಾಯ ಧನ, ಪ್ರಮುಖ ಕಾಯಿಲೆಗಳ ಚಿಕಿತ್ಸಾ ವೆಚ್ಚ, ಅಪಘಾತ ಚಿಕಿತ್ಸಾ ವೆಚ್ಚವನ್ನು ಪೂರ್ಣವಾಗಿ ಕಾರ್ಮಿಕನಿಗೆ ಪಾವತಿಸಬೇಕು ಅಥವಾ ನಗದು ರಹಿತ ಸೇವೆ ಜಾರಿ ಮಾಡಬೇಕು.

– ಕೆ. ಜಯರಾಜ್‌ ಸಾಲಿಯಾನ್‌, ರಾಜ್ಯ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ಮಜ್ದೂರ್‌ ಸಂಘ

ಗುಲ್ವಾಡಿ ಪ್ರಕರಣ ಗಮನಕ್ಕೆ ತಂದು ಸರಿಪಡಿಸಲಾಗುತ್ತಿದೆ. ವೈದ್ಯಕೀಯ ವೆಚ್ಚ ಹೆಚ್ಚಳ ಕುರಿತು ಕಾರ್ಮಿಕ ಸಚಿವರ ಸೂಚನೆಯಂತೆ ಆಯುಕ್ತರು ದರ ಮರು ಪರಿಶೀಲಿಸಿ ಮಂಡಿಸಲಿದ್ದಾರೆ. ಅನಂತರ ಆವಶ್ಯಕ ತಿದ್ದುಪಡಿ ಆಗಲಿದೆ.
– ಡಾ| ಶಿವಪುತ್ರ ಬಾಬುರಾವ್‌, ಜಂಟಿ ಕಾರ್ಯದರ್ಶಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು

ಟಾಪ್ ನ್ಯೂಸ್

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.