ಭಾರತದ ಪ್ರಸಿದ್ಧ ಟೆಕ್ ಸಂಸ್ಥೆಯಾಗಿರುವ ಇನ್ಫೋಸಿಸ್ ಆದಾಯ, ಲಾಭ ಏರಿಕೆ
Team Udayavani, Apr 14, 2022, 6:45 AM IST
ಭಾರತದ ಪ್ರಸಿದ್ಧ ಟೆಕ್ ಸಂಸ್ಥೆಯಾಗಿರುವ ಇನ್ಫೋಸಿಸ್ 2021-22ರ ನಾಲ್ಕನೇ ತ್ತೈಮಾಸಿಕದ ವರದಿ ಬಿಡುಗಡೆ ಮಾಡಿದೆ.
ಜ. 1ರಿಂದ ಮಾ. 31ರವರೆಗಿನ ತ್ತೈಮಾಸಿಕದಲ್ಲಿ ಸಂಸ್ಥೆಯು 5,686 ಕೋಟಿ ರೂ. ಲಾಭ ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಶೇ. 12 ಹೆಚ್ಚಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 5,076 ಕೋಟಿ ರೂ. ಲಾಭ ದಾಖಲಾಗಿತ್ತು. ಸಂಸ್ಥೆಯು 2021-22ರ 4ನೇ ತ್ತೈಮಾಸಿಕದಲ್ಲಿ 32,376 ಕೋಟಿ ರೂ. ಆದಾಯ ಕಂಡಿದೆ.
ಅದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 23 ಹೆಚ್ಚಾಗಿದೆ.ಒಟ್ಟಾರೆಯಾಗಿ ಮಾ.31ರಂದು ಅಂತ್ಯವಾದ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 1.21 ಟ್ರಿಲಿಯನ್ ರೂ. ಆದಾಯ ಗಳಿಸಿದ್ದು, ಅದರಲ್ಲಿ 22,110 ಕೋಟಿ ರೂ. ಲಾಭವಾಗಿದೆ. 2020-21ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಅದು ಶೇ. 21 ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market; ರೇಖಾ ಜುಂಜುನ್ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
GST ಎಪ್ರಿಲ್ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ !
Godrej: ಜನಪ್ರಿಯ ಗೋದ್ರೆಜ್ ಸಮೂಹ ಇಬ್ಭಾಗ: ಜಮ್ಶೆಡ್, ನಾದಿರ್ ನೂತನ ಮುಖ್ಯಸ್ಥರು
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?