ಬೆಂಗಳೂರು ವರ್ಸಸ್‌ ಅಗರ್ವಾಲ್‌! ಆರ್‌ಸಿಬಿ ಅದೃಷ್ಟ ಬದಲಿಸಿಯಾರೇ ಡು ಪ್ಲೆಸಿಸ್‌?

Team Udayavani, Mar 27, 2022, 7:55 AM IST

ಬೆಂಗಳೂರು ವರ್ಸಸ್‌ ಅಗರ್ವಾಲ್‌! ಆರ್‌ಸಿಬಿ ಅದೃಷ್ಟ ಬದಲಿಸಿಯಾರೇ ಡು ಪ್ಲೆಸಿಸ್‌?

ನವೀ ಮುಂಬಯಿ: ಕಳೆದ 14 ವರ್ಷಗಳಿಂದ ಐಪಿಎಲ್‌ ಪಟ್ಟವೇರಲು ವಿಫ‌ಲ ಪ್ರಯತ್ನ ಮಾಡುತ್ತಲೇ ಇರುವ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ಮತ್ತೊಮ್ಮೆ ಅದೃಷ್ಟದ ಹುಡುಕಾಟಕ್ಕಿಳಿಯಲಿವೆ. ರವಿವಾರ ರಾತ್ರಿಯ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.

ಬೆರಳೆಣಿಕೆಯಷ್ಟೂ ಕನ್ನಡಿಗ ಕ್ರಿಕೆಟಿಗರನ್ನು ಹೊಂದಿಲ್ಲ ದಿದ್ದರೂ ಕನ್ನಡಿಗರ ನೆಚ್ಚಿನ ತಂಡವಾಗಿಯೇ ಉಳಿದಿರುವ ರಾಯಲ್ಸ್‌ ಚಾಲೆಂಜರ್ ಬೆಂಗಳೂರು ತಂಡ ಈ ಬಾರಿ ನೂತನ ನಾಯಕನನ್ನು ಕಂಡಿದೆ. ವಿರಾಟ್‌ ಕೊಹ್ಲಿ ಬದಲು ದಕ್ಷಿಣ ಆಫ್ರಿಕಾದ ಹೊಡಿಬಡಿ ಆಟಗಾರ, ಕಳೆದ ಸಲದ ಚೆನ್ನೈ ತಂಡದ ಗೆಲುವಿನ ರೂವಾರಿ ಫಾ ಡು ಪ್ಲೆಸಿಸ್‌ ಆರ್‌ಸಿಬಿಯನ್ನು ಮುನ್ನಡೆಸಲಿದ್ದಾರೆ. ಅವರಿಗೆ ಇದು ಐಪಿಎಲ್‌ ನಾಯಕತ್ವದ ಮೊದಲ ಆನುಭವ. ಇವರ ಸಾರಥ್ಯದಲ್ಲಿ ಆರ್‌ಸಿಬಿ ಅದೃಷ್ಟ ಬದಲಾದೀತೇ ಎಂಬುದೊಂದು ಕುತೂಹಲ.

ಅತ್ತ ಪಂಜಾಬ್‌ ಕಿಂಗ್ಸ್‌ ಕೂಡ ನೂತನ ನಾಯಕನನ್ನು ಕಾಣುತ್ತಿದೆ. ಕೆ.ಎಲ್‌. ರಾಹುಲ್‌ ನೂತನ ಲಕ್ನೋ ಫ್ರಾಂಚೈಸಿಗೆ ತೆರಳಿದ್ದರಿಂದ ಕರ್ನಾಟಕದ ಮತ್ತೋರ್ವ ಆಟಗಾರ ಮಾಯಾಂಕ್‌ ಅಗರ್ವಾಲ್‌ಗೆ ಪಂಜಾಬ್‌ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದೆ. ಅಗರ್ವಾಲ್‌ “ಫ‌ುಲ್‌ ಟೈಮ್‌ ಕ್ಯಾಪ್ಟನ್‌’ ಆಗುತ್ತಿರುವುದು ಇದೇ ಮೊದಲು. ಹೀಗೆ ಬೆಂಗಳೂರು ವರ್ಸಸ್‌ ಅಗರ್ವಾಲ್‌ ನಡುವಿನ ಕಾಳಗ ತೀವ್ರ ಕೌತುಕ ಮೂಡಿಸಿದೆ.

ಆರ್‌ಸಿಬಿ ಕಾಂಬಿನೇಶನ್‌
ಎಲ್ಲರಿಗೂ ಕುತೂಹಲ ಇರುವುದು ಆರ್‌ಸಿಬಿಯ ಟೀಮ್‌ ಕಾಂಬೆನೇಶನ್‌ ಬಗ್ಗೆ. ಎಡಗೈ ಆರಂಭಕಾರ ದೇವದತ್ತ ಪಡಿಕ್ಕಲ್‌, 360 ಡಿಗ್ರಿ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್, ಯಜುವೇಂದ್ರ ಚಹಲ್‌ ಗೈರು ತಂಡಕ್ಕೆ ಎದುರಾಗಿರುವ ದೊಡ್ಡ ಹೊಡೆತ. ಆಸ್ಟ್ರೇಲಿಯದ ಸ್ಟಾರ್‌ ಆಟಗಾರರಾದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೋಶ್‌ ಹ್ಯಾಝಲ್‌ವುಡ್‌ ಇನ್ನೂ ತಂಡವನ್ನು ಸೇರದಿರುವುದು ಮತ್ತೂಂದು ಹಿನ್ನಡೆ. ಮೊದಲ ಸಲ ಆರ್‌ಸಿಬಿಯನ್ನು ಪ್ರತಿನಿಧಿಸುತ್ತಿರುವ ಕೀಪರ್‌ ದಿನೇಶ್‌ ಕಾರ್ತಿಕ್‌ ಹೆಚ್ಚಿನ ಬ್ಯಾಟಿಂಗ್‌ ಜವಾಬ್ದಾರಿ ವಹಿಸಬೇಕಿದೆ. ಲಂಕೆಯ ಬಹುಕೋಟಿ ಆಟಗಾರ ವನಿಂದು ಹಸರಂಗ ಈ ಸಲವಾದರೂ ಮಂದಹಾಸ ಮೂಡಿಸಬೇಕಿದೆ!

ಇದನ್ನೂ ಓದಿ:ಐಪಿಎಲ್‌: ಕೆಕೆಆರ್‌ ಸೂಪರ್‌ ಶೋ; ಚೆನ್ನೈಗೆ ಸೋಲು

ಆರ್‌ಸಿಬಿ ಬೌಲಿಂಗ್‌ ಕೂಡ ಹೊಸಬರಿಂದ ಕೂಡಿದೆ. ಹಿಂದಿನ ಸಲದ ಬೌಲರ್ಗಳಾದ ಹರ್ಷಲ್‌ ಪಟೇಲ್‌, ಸಿರಾಜ್‌, ಶಾಬಾಜ್‌ ಜತೆಗೆ ಡೇವಿಡ್‌ ವಿಲ್ಲಿ, ಕರ್ಣ್ ಶರ್ಮಾ, ಮೊದಲ ಸಲ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.

ಪಂಜಾಬ್‌ ಹೆಚ್ಚು ಬಲಿಷ್ಠ
ಪಂಜಾಬ್‌ ತಂಡಕ್ಕೂ ಕೆಲವು ಸ್ಟಾರ್‌ ಆಟಗಾರರ ಕೊರತೆ ಕಾಡುತ್ತಿದೆ. ಜಾನಿ ಬೇರ್‌ಸ್ಟೊ, ಕಾಗಿಸೊ ರಬಾಡ ಇವರಲ್ಲಿ ಪ್ರಮುಖರು. ಇದರ ಹೊರತಾಗಿಯೂ ಪಂಜಾಬ್‌ ಪ್ರಚಂಡ ಪಡೆಯನ್ನೇ ಹೊಂದಿದೆ. ಧವನ್‌, ಆರ್ಷದೀಪ್‌, ಶಾರೂಖ್‌ ಖಾನ್‌, ಲಿವಿಂಗ್‌ಸ್ಟೋನ್‌, ರಾಜ್‌ ಭಾವ, ಸಂದೀಪ್‌ ಶರ್ಮ, ರಾಹುಲ್‌ ಚಹರ್‌ ಅವರನ್ನಿಲ್ಲಿ ಹೆಸರಿ ಸಬಹುದು. ತಂಡದ ಬೌಲಿಂಗ್‌ ವಿಭಾಗವೂ ಹೆಚ್ಚು ಘಾತಕ ಹಾಗೂ ವೈವಿಧ್ಯಮಯ. ರವಿ ಬಿಷ್ಣೋಯಿ ಲಕ್ನೋ ಪಾಲಾದುದೊಂದೇ ಕೊರತೆ.

ಇಂದಿನ ಪಂದ್ಯಗಳು

ಮುಂಬೈ vs ಡೆಲ್ಲಿ
ಆರಂಭ: 3.30 ಸ್ಥಳ: ಮುಂಬಯಿ

ಆರ್‌ಸಿಬಿ vs ಪಂಜಾಬ್‌
ಆರಂಭ: 7.30 ಸ್ಥಳ: ಮುಂಬಯಿ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

1-wtwtw

ಆರೆಂಜ್ ಕ್ಯಾಪ್ ವಿಜೇತ ಜೋಸ್ ಬಟ್ಲರ್ ಗೆ ತೀವ್ರ ನಿರಾಸೆ ತಂದಿಟ್ಟ ಫೈನಲ್ ಸೋಲು

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

1-sad-dad

ಐಪಿಎಲ್‌ ಫೈನಲ್‌: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್‌ ರಾಯಲ್ಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.