ಪೊಲೀಸರ ಭರ್ಜರಿ ಕಾರ್ಯಾಚರಣೆ : 23 ಆರೋಪಿಗಳ ಬಂಧನ, 1ಕೋಟಿಗೂ ಅಧಿಕ ಮೌಲ್ಯದ ಸೊತ್ತು ವಶ
Team Udayavani, Jun 9, 2022, 8:50 PM IST
ಮಹದೇವಪುರ : ವೈಟ್ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 23 ಆರೋಪಿಗಳ ಸಹಿತ 1ಕೋಟಿಗೂ ಅಧಿಕ ಮೌಲ್ಯದ ಕಳವು ಮಾಲುಗಳನ್ನು ವಶಕ್ಕೆ ಪಡೆದಿದ್ದಾರೆ.
ವಿವಿಧ ಕಳ್ಳತನ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 23 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 1.70 ಕೋಟಿ ರೂ. ಮೌಲ್ಯದ ಕಳವು ಮಾಡಿದ್ದ ಮಾಲು ಜಪ್ತಿ ಮಾಡಲಾಗಿದೆ.
ಇದರಲ್ಲಿ 9 ಕಾರು, 45 ಬೈಕ್ಗಳು, 135 ಮೊಬೈಲ್ಗಳು, 5 ಕ್ಯಾಮರಾ, 1 ಲ್ಯಾಪ್ಟಾಪ್, 150 ಗ್ರಾಂ ಚಿನ್ನ ಒಳಗೊಂಡಿದೆ.
ವಶಕ್ಕೆ ಪಡೆದ ಮಾಲುಗಳು ಹೆಚ್ಎಎಲ್, ಕಾಡುಗುಡಿ, ಬೆಳ್ಳಂದೂರು, ಮಾರತ್ತಹಳ್ಳಿ, ವೈಟ್ಫೀಲ್ಡ್ ಕೆಆರ್ ಪುರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳಾಗಿವೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.