ಕಾಣದಂತೆ ಮಾಯವಾದ ಮೈಪಾಲ ಕೆರೆ! ನಿರ್ಲಕ್ಷಕ್ಕೆ ಒಳಗಾಗಿರುವ ಪುರಸಭೆ ವ್ಯಾಪ್ತಿಯ ಕೆರೆ

Team Udayavani, Feb 14, 2021, 4:40 AM IST

ಕಾಣದಂತೆ ಮಾಯವಾದ ಮೈಪಾಲ ಕೆರೆ! ನಿರ್ಲಕ್ಷಕ್ಕೆ ಒಳಗಾಗಿರುವ ಪುರಸಭೆ ವ್ಯಾಪ್ತಿಯ ಕೆರೆ

ಕಾರ್ಕಳ: ಆಧುನಿಕ ಪ್ರವೃತ್ತಿಗಳಿಂದ ಇಂದು ಪುರಾತನ ಕೆರೆಗಳು ಕಣ್ಮರೆಯಾಗುತ್ತಿವೆ. ಈ ಪಟ್ಟಿಗೆ ನಗರದ ಮೈಪಾಲದ ಬೃಹತ್‌ ಕೆರೆಯೂ ಸೇರಿದೆ. ಪುರಸಭೆ ವ್ಯಾಪ್ತಿಯ 1ನೇ ವಾರ್ಡ್‌ನಲ್ಲಿ ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ದೊಡ್ಡ ಕೆರೆಯೊಂದು ಇತ್ತು. ಅದು ಮೈಪಾಲ ಕೆರೆ ಎಂದೇ ಪ್ರಸಿದ್ಧಿªಯೂ ಪಡೆದಿತ್ತು. ಕೆರೆ ಹೆಸರಿನಿಂದಲೇ ಊರನ್ನು ಈಗಲೂ ಕರೆಯಲಾಗುತ್ತದೆ.

ಮೈಪಾಲ ಕೆರೆ ಸುಮಾರು ಅರ್ಧ ಎಕರೆ ಭೂಪ್ರದೇಶದಲ್ಲಿದೆ. ಆದರೇ ಕೆರೆ ಕಣ್ಮರೆಯಾಗಿದೆ. ಇಲ್ಲೊಂದು ಕೆರೆ ಇತ್ತು ಎನ್ನುವುದನ್ನೇ ಜನರು ನಂಬಲಸಾಧ್ಯ ಎನ್ನುವಂತಿದೆ. ಕೆರೆಯಲ್ಲಿ ಹೂಳು ತುಂಬಿದ್ದು, ಅದರ ಮೇಲೆ ಮತ್ತು ಸುತ್ತಲೂ ಗಿಡಗಂಟಿ, ಮರಗಳು ಬೆಳೆದು, ಕೆರೆಯ ಕುರುಹೂ ಇಲ್ಲದಂತಾಗಿದೆ.

ಇನ್ನು ಹಳ್ಳಿ ಸೊಬಗು ಹೊಂದಿರುವ ಈ ವಾರ್ಡ್‌ ತೆಂಗು, ಕಂಗಿನ ತೋಟಗಳು, ಭತ್ತದ ಗದ್ದೆಯನ್ನು ಹೊಂದಿದೆ. ಇನ್ನು ಕೃಷಿ ಚಟುವಟಿಕೆಗಳು ಈ ಭಾಗದಲ್ಲಿವೆ. ಇದು ಸುಮಾರು 300ಕ್ಕೂ ಅಧಿಕ ಮಂದಿ ವಾಸವಿರುವ ಜನವಸತಿ ಪ್ರದೇಶವಾಗಿದೆ.

ಕೆರೆಯ ನೀರು ಜೀವ ಜಲವಾಗಿತ್ತು
ಬಾವಿಗಳಿಲ್ಲದೆ ನೀರಿಗಾಗಿ ಪರಿತಪಿಸುತ್ತಿದ್ದ ಅಂದಿನ ಕಾಲದಲ್ಲಿ ಮೈಪಾಲ, ಹಿರ್ಗಾನ, ಪತ್ತೋಂಜಿಕಟ್ಟೆಯ ಹಲವು ಕೃಷಿ ಅಧಾರಿತ ಕುಟುಂಬಗಳಿಗೆ ನೀರಿನ ಆಶ್ರಯ ತಾಣವಾಗಿತ್ತು ಇದೇ ಮೈಪಾಲ ಕೆರೆ. ಇದು ದಾಹ ತೀರಿಸುವುದರ ಜತೆಗೆ ಕೃಷಿ ಚಟುವಟಿಕೆಗಳಿಗೆ ಈ ಕೆರೆಯ ನೀರು ಜೀವ ಜಲವಾಗಿತ್ತು.

ಮಹತ್ವ ಮರೆತ ಪರಿಣಾಮ
ಕೆರೆಯಲ್ಲಿ ದಟ್ಟವಾಗಿ ನೀರು ಸಂಗ್ರಹವಾಗುತ್ತಿದ್ದ ರಿಂದ ಪರಿಸರದಲ್ಲಿ ಅಂತರ್ಜಲ ಮಟ್ಟ ಸಾಕಷ್ಟು ಮೇಲ್ಮಟ್ಟದಲ್ಲೇ ಇತ್ತು. ಬೇಸಗೆಯಲ್ಲೂ ನೀರಿನ ಅಭಾವ ಇರಲಿಲ್ಲ. ಆದರೆ ನಿರ್ಲಕ್ಷಿಸಿದ್ದರಿಂದ ಕೆರೆ ನೇಪಥ್ಯಕ್ಕೆ ಸರಿದಿದೆ.

ಹೂಳು ತೆಗೆದರೆ ಸಮೃದ್ಧ ನೀರು!
ಹಿರಿಯ ತಲೆಮಾರಿನವರು ಇರುವಷ್ಟು ದಿನ ಕೆರೆಯನ್ನು ಸದುದ್ದೇಶಕ್ಕೆ ಬಳಸಿ ಕೊಂಡರು. ಅನಂತರದಲ್ಲಿ ಕೆರೆಯ ನಿರ್ಲಕ್ಷ ವಹಿಸುತ್ತ ಬರಲಾಗಿದೆ. ಕೆರೆ ಪಕ್ಕದಲ್ಲೇ ಪುರಸಭೆಯಿಂದ ಬಾವಿ ನಿರ್ಮಿಸಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಬಳಕೆಯಾಗುತ್ತಿದೆ. ಇದರಲ್ಲಿ ಸಮೃದ್ಧವಾಗಿ ನೀರಿದೆ. ಇದು ಕೆರೆಯ ತಳಭಾಗದಲ್ಲಿ ಸಮೃದ್ಧ ನೀರು ಈಗಲೂ ಇದೆ ಎನ್ನುವುದನ್ನು ಸೂಚಿಸುತ್ತದೆ.

ಕ್ರಮ ಕೈಗೊಳ್ಳಲಾಗುವುದು
ಕೆರೆ ಅಭಿವೃದ್ಧಿ ವಿಚಾರವನ್ನು ನನ್ನ ಗಮನಕ್ಕೆ ಯಾರೂ ತಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು
-ನೀತಾ, ಕೌನ್ಸಿಲರ್‌, 1ನೇ ವಾರ್ಡ್‌

ಅಲೆದಾಡಿದರೂ ಪ್ರಯೋಜನವಾಗಿಲ್ಲ
ಪುರಾತನ ಕೆರೆಯನ್ನು ಅಭಿವೃದ್ಧಿಗೊಳಿಸಬೇಕು, ಹೂಳು ತೆಗೆಯಬೇಕು ಎಂದು ಸಂಬಂಧಿಸಿದ ಇಲಾಖೆಗೆ ಅನೇಕ ಪತ್ರ ವ್ಯವಹಾರ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಗಳಿಂದ ಪುರಸಭೆಗೆ ಪರಿಶೀಲಿಸಿ ಕ್ರಮಕ್ಕೆ ಸೂಚನೆಗಳು ಬಂದಿವೆ. ಪುರಸಭೆ ಇದು ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಡಿ ಬರುತ್ತದೆ ಎಂದು ಹಿಂಬರಹ ನೀಡಿದೆ. ಕೆರೆಯ ಸ್ಥಿತಿ ಇಂದಿಗೂ ಬದಲಾಗಲಿಲ್ಲ. ಯಾವ ಇಲಾಖೆಯಾದರೂ ಸರಿ ಕೆರೆ ಅಭಿವೃದ್ಧಿಗೊಳಿಸಿದರೆ ಒಳಿತು ಎಂದು ಸ್ಥಳಿಯ ನಿವಾಸಿ ಸಂತೋಷ್‌ ವಿ.ಕೋಟ್ಯಾನ್‌ ಹೇಳುತ್ತಾರೆ.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.