ಮಟ್ಕಾ ಜುಗಾರಿ: ಹಲವರು ಪೋಲಿಸ್ ವಶಕ್ಕೆ
Team Udayavani, Mar 8, 2023, 5:14 AM IST
ಉಡುಪಿ: ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದ ಹಲವಾರು ಮಂದಿಯನ್ನು ಉಡುಪಿ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಡಿಯಾಳಿ ಬಳಿಯ ಮೀನು ಮಾರುಕಟ್ಟೆ ಸಮೀಪ ಹಾರಾಡಿಯ ಗಣಪತಿ (46), ಆದಿಉಡುಪಿ ಎಪಿಎಂಸಿ ಮಾರುಕಟ್ಟೆ ಬಳಿ ಅಂಬಲಪಾಡಿಯ ಮಂಜುನಾಥ (38), ಕೊಡವೂರಿನ ಪಾಂದಾರಿ ಪ್ರಸಾದ್ (49)ನನ್ನು ಬಂಧಿಸಿ ಸಾವಿರಾರು ರೂ. ನಗದು ಹಾಗೂ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.