ಕೋವಿಡ್-19 ಹಿನ್ನೆಲೆ: ಸೆಪ್ಟಂಬರ್ನಲ್ಲಿ ನೀಟ್ ಪರೀಕ್ಷೆ
Team Udayavani, Jul 4, 2020, 6:20 AM IST
ಹೊಸದಿಲ್ಲಿ: ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾನವ ಸಂಪದಭಿವೃದ್ಧಿ ಸಚಿವಾಲಯವು ವೈದ್ಯಕೀಯ ಕಾಲೇಜು ಪ್ರವೇಶದ ನೀಟ್ ಮತ್ತು ಎಂಜಿನಿಯರಿಂಗ್ ಪ್ರವೇಶಕ್ಕಾಗಿ ಇರುವ ಜೆಇಇ ಪರೀಕ್ಷೆಗಳನ್ನು ಸೆಪ್ಟಂಬರ್ಗೆ ಮುಂದೂಡಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀಟ್ ಪರೀಕ್ಷೆ ಸೆ.13ರಂದು ನಡೆಯಲಿದೆ ಎಂದು ಮಾನವ ಸಂಪದಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.
ಜೆಇಇ ಮುಖ್ಯ ಪರೀಕ್ಷೆ ಸೆ.1ರಿಂದ 6ರ ನಡುವೆ ನಡೆಯಲಿದೆ. ಜೆಇಇ ಅಡ್ವಾನ್ಸ್ ಪರೀಕ್ಷೆ ಸೆಪ್ಟಂಬರ್ 27ರಂದು ನಡೆಯಲಿದೆ ಎಂದಿದ್ದಾರೆ.
ಈ ಮಧ್ಯೆ, ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗುತ್ತಿರುವುದರಿಂದ ಐಸಿಎಸ್ಇ ತನ್ನ ಪಠ್ಯಕ್ರಮವನ್ನು ಶೇ.25 ಕಡಿಮೆ ಮಾಡಲು ನಿರ್ಧರಿಸಿದೆ. ಇದು 2020-21ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಯಲ್ಲಿ ಇರಲಿದೆ.