ನಗರಪ್ರಜ್ಞೆಯ ಆಧುನಿಕ ಪ್ರತಿಮೆಗಳನ್ನು ಕನ್ನಡಕ್ಕೆ ತಂದವರು ನಿಸಾರ್ ಅಹಮದ್: ಜಯಂತ್ ಕಾಯ್ಕಿಣಿ

ನಿಸಾರ್ ಅಹಮದ್ ರನ್ನು ಕೇವಲ ನಿತ್ಯೋತ್ಸವಕ್ಕೆ ಸೀಮಿತಗೊಳಿಸಬಾರದು, ಕೇವಲ ಒಂದು ಟೊಂಗೆ ಮಾತ್ರ ನಿತ್ಯೋತ್ಸವ

Team Udayavani, May 3, 2020, 6:42 PM IST

ನಗರಪ್ರಜ್ಞೆಯ ಆಧುನಿಕ ಪ್ರತಿಮೆಗಳನ್ನು ಕನ್ನಡ ತಂದವರು ನಿಸಾರ್ ಅಹಮದ್: ಜಯಂತ್ ಕಾಯ್ಕಿಣಿ

ಮಣಿಪಾಲ:” ಕನ್ನಡ ಸಾಂಸ್ಕೃತಿಕ ಲೋಕದ ಹಿರಿಯ ಕವಿ ನಿಸಾರ್ ಅಹಮದ್ ನಮ್ಮನ್ನು ಅಗಲಿದ್ದಾರೆ. ಆದರೆ ನಮಗೆ ನಿಸಾರ್ ಅಂದ ಕೂಡಲೇ ನೆನಪಿಗೆ ಬರುವುದೇ ನಿತ್ಯೋತ್ಸವದ ನಿಸಾರ್ ಅಹಮದ್ ಅಂತ ಕರೆಯುವುದು ಒಂದು ವಾಡಿಕೆಯಾಗಿದೆ. ಆದರೆ ನಿಸಾರ್ ಅವರನ್ನು ನಾವು ಕೇವಲ ನಿತ್ಯೋತ್ಸವಕ್ಕೆ ಸೀಮಿತಗೊಳಿಸಬಾರದು. ಅವರ ಜೀವನವನ್ನು ಒಂದು ವೃಕ್ಷ ಅಂತ ತೆಗೆದುಕೊಂಡರೆ ಅದರ ಕೇವಲ ಒಂದು ಟೊಂಗೆ ಮಾತ್ರ ನಿತ್ಯೋತ್ಸವ”.

1978ರಲ್ಲಿ ನಿತ್ಯೋತ್ಸವ ಕವನದ ಕ್ಯಾಸೆಟ್ ಬಂದ ಮೇಲೆ ಬಹಳ ಜನಪ್ರಿಯವಾಯಿತು ಸತ್ಯ. ಭಾವಗೀತೆ ಪ್ರಕಾರಗಳಲ್ಲಿ ಪ್ರತಿ ಜನರ ಮನೆ, ಮನೆಗೆ ತಲುಪಿಸುವಲ್ಲಿ ಒಂದು ಹೊಸ ಪ್ರಕಾರಕ್ಕೆ ನಾಂದಿ ಹಾಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಮುಖ್ಯ ಕೊಡುಗೆಗಳು ಮುಖ್ಯಧಾರೆಯ ಕವಿತೆಗಳು. ಬರೇ ಸುಗಮ ಸಂಗೀತಕ್ಕೆ, ಗೀತ ಸಾಹಿತ್ಯಕ್ಕೆ ಕೊಟ್ಟಿದ್ದಲ್ಲ. ಅವರ ಎಂಟು ಪ್ರಮುಖ ಕವನ ಸಂಕಲನಗಳಿವೆ. ಉದಾಹರಣೆಗೆ ಸಂಜೆ ಐದರ ಮಳೆ, ನಾನೆಂಬ ಪರಕೀಯ,ಅನಾಮಿಕ ಆಂಗ್ಲರು, ಸ್ವಯಂ ಸೇವೆಯ ಗಿಳಿಗಳು, ಮನಸ್ಸು ಗಾಂಧಿ ಬಜಾರು, ಸುಮಹೂರ್ತ, ನೆನದವರ ಮನದಲ್ಲಿ ಇಂತಹ ಮಹತ್ವದ ಕವನ ಸಂಕಲನಗಳನ್ನು ಬರೆದಿದ್ದರು. ನವೋದಯದಿಂದ ನವ್ಯ ಬಂದು, ನವ್ಯದಿಂದ ಸಮಾಜಮುಖಿ ಕಾವ್ಯದ ಕಡೆಗೆ ಹೋಗುವ ಕಾಲ ಅದು. 1960, 70, 80ರ ದಶಕ
ಅದಾಗಿದೆ. ಆ ಮೂರು ದಶಕಗಳಲ್ಲಿ ಬಂದಂತಹ ಬಹಳ ಮಹತ್ವದ ಕವನ ಸಂಕಲನವಾಗಿದೆ.

ಆಮೇಲೆ ಅವರು ನಗರಪ್ರಜ್ಞೆಯ ಆಧುನಿಕ ಪ್ರತಿಮೆಗಳನ್ನು ಕನ್ನಡ ತಂದವರು ನಿಸಾರ್ ಅಹಮದ್. ಅಂದರೆ “ಕುರಿಗಳು ಸಾರ್ ಕುರಿಗಳು” ಆ ಅಭಿವ್ಯಕ್ತಿಯೇ ಎಷ್ಟು ಆಧುನಿಕವಾಗಿದೆ ನೋಡಿ. ಕ್ಯಾಕ್ಟಸ್(ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿತ್ತು) ಮೇಲೆಯೇ ಒಂದು ಪದ್ಯ ಬರೆದಿದ್ದರು. ಎಲ್ಲರೂ ಮಲ್ಲಿಗೆ, ಸಂಪಿಗೆ ಮೇಲೆ ಪದ್ಯ ಬರೆಯುತ್ತಿದ್ದರೆ, ಇವರು ಕ್ಯಾಕ್ಟಸ್ ಮೇಲೆ ಬರೆದಿದ್ದರು. ಅಂದರೆ ಒಂದು ಬಯಲುಸೀಮೆಯ ಮರುಭೂಮಿಯಲ್ಲಿ ಬೆಳೆಯುವ ಕ್ಯಾಕ್ಟಸ್ ಅನ್ನು ನಗರದ ಜನ ತಮ್ಮ ಬಾಲ್ಕನಿಯಲ್ಲಿ ತಂದು ಬೆಳೆಸುವ ಹವ್ಯಾಸ ಮಾಡಿಕೊಂಡಿದ್ದರ ವೈರುಧ್ಯದ ಬಗ್ಗೆ ಬರೆದಿದ್ದ ಕವನ ಅದಾಗಿತ್ತು.

ಅನಾಮಿಕ ಆಂಗ್ಲರು ಅದು ಬಹಳ ಮಹತ್ವದ ಕವಿತೆ. ಒಂದಾನೊಂದು ಕಾಲದಲ್ಲಿ ಇಲ್ಲಿ ಬ್ರಿಟಿಷರಿದ್ದರು. ಆಗ ತೀರಿಕೊಂಡವರನ್ನು ಇಲ್ಲೇ ಹೂತಿರುತ್ತಾರೆ. ಅದನ್ನು ನೆನಪಿಸಿಕೊಂಡು ಬರೆದ ಸುಂದರ ರೂಪಕವಾಗಿತ್ತು. ಆಮೇಲೆ ರಾಮನ್ ಸತ್ತ ಸುದ್ದಿ ಎಂಬ ಕವಿತೆ…ಒಬ್ಬ ರೈತನಿಗೆ ಸಿವಿ ರಾಮನ್ ಸತ್ತ ಸುದ್ದಿ ಹೇಳಿದರೆ ಅದರ ಅರ್ಥ ಏನು ಎಂಬುದು ಅವರ ಜಿಜ್ಞಾಸೆಯಾಗಿತ್ತು. ಹೀಗೆ ಈ ಥರದ ಆಧುನಿಕ ವಿಚಾರಗಳ ಮೇಲೆ ಚಿಂತನಶೀಲ ತನ್ಮಯತೆ ಬೆಳೆಸಿಕೊಂಡಿದ್ದರು. ಒಬ್ಬ ಒಳ್ಳೆಯ ಲೇಖಕನಿಗೆ ಇರಬೇಕಾಗಿದ್ದು ಚಿಂತನಶೀಲ ತನ್ಮಯತೆ. ಬರೇ ಚಿಂತನೆಯಾದರೆ ಅದು ಶುಷ್ಕ ಪಾಂಡಿತ್ಯವಾಗುತ್ತದೆ. ಅವೆರಡರ ಭಿನ್ನವಾದ ಪಾಕ ಚಿಂತನಶೀಲ
ತನ್ಮಯತೆಯಾಗಿದೆ. ಅದು ನಿಸಾರ್ ಅಹಮದ್ ಅವರಲ್ಲಿತ್ತು.

ಇಡೀ ಸಮಾಜವನ್ನೇ ಒಂದು ಕುಟುಂಬ ಎಂದು ತಿಳಿದವರು ಅವರು. ತುಂಬಾ ಲವಲವಿಕೆಯ ಮತ್ತು ಜೀವನ ಪ್ರೀತಿಯ ಮನುಷ್ಯ ನಿಸಾರ್ ಅಹಮದ್. ಈ ನಿಟ್ಟಿನಲ್ಲಿ ಅವರ ಜೀವನಪ್ರೀತಿ ತುಂಬಿದ, ಚಿಂತನಶೀಲದಿಂದ ಕೂಡಿದ್ದ ಕಾವ್ಯವನ್ನು ಓದೋಣ ಅದೇ ನಾವು ಅವರಿಗೆ ನೀಡುವ ಗೌರವವಾಗಲಿದೆ.

ಜಯಂತ್ ಕಾಯ್ಕಿಣಿ
ಖ್ಯಾತ ಕವಿ, ಸಾಹಿತಿ

(ನಿರೂಪಣೆ: ನಾಗೇಂದ್ರ ತ್ರಾಸಿ)

ಟಾಪ್ ನ್ಯೂಸ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.