ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡಬೇಕು: ಬಿಜೆಪಿ ಮುಖಂಡ ನೈನಾರ್
ನಾನು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ
Team Udayavani, Jul 7, 2022, 10:45 AM IST
ಚೆನ್ನೈ: ತಮಿಳುನಾಡಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ ಎಂದು ಡಿಎಂಕೆ ಮುಖಂಡ ಎ.ರಾಜಾ ಹೇಳಿಕೆ ನೀಡಿದ ಬೆನ್ನಲ್ಲೇ, ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡುವ ಬಗ್ಗೆ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ವಿಧಾನಸಭೆಯಲ್ಲಿ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಚಾಮುಂಡಿ ಬೆಟ್ಟದ ಮೂಲಸೌಕರ್ಯಕ್ಕೆ ಸಿದ್ದು ಸರಕಾರ ಕೊಟ್ಟಿದ್ದು ಹುಂಡಿ ದುಡ್ಡಾ?
ಡಿಎಂಕೆ ರಾಜಾ ಅವರ ಭಾಷಣ ಕೇಳಿದ ನಂತರ ನನಗೆ ಈ ಉಪಾಯ ಹೊಳೆದಿರುವುದಾಗಿ ತಿಳಿಸಿರುವ ನೈನಾರ್, ಒಂದು ವೇಳೆ ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡಿದಲ್ಲಿ, ನಮಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತರಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಬಿಜೆಪಿ ಅಧಿಕಾರಕ್ಕೆ ಬಂದರೆ, ಹೆಚ್ಚಿನ ಅನುದಾನ ಲಭ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಾಗೂ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳನ್ನು ಉದ್ದೇಶಿಸಿ ಕೇಂದ್ರ ಮಾಜಿ ಸಚಿವ, ಡಿಎಂಕೆ ಮುಖಂಡ ರಾಜಾ ಅವರು ಸ್ವಾಯತ್ತತೆ ಕುರಿತು ಮಾತನಾಡಿದ್ದು, ನಾನು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಮುಖ್ಯಮಂತ್ರಿ ಅಣ್ಣಾ ಅವರ ಹಾದಿಯಲ್ಲಿ ಸಾಗುತ್ತಾರೆ, ನಮ್ಮನ್ನು ಪೆರಿಯಾರ್ ದಾರಿಗೆ ತಳ್ಳಬೇಡಿ. ನಾವು ಪ್ರತ್ಯೇಕ ದೇಶದ ಬೇಡಿಕೆ ಇಡುತ್ತಿಲ್ಲ. ನಮಗೆ ಸಂಪೂರ್ಣ ಸ್ವಾಯತ್ತತೆ ನೀಡಿ ಎಂದು ತಿಳಿಸಿದ್ದರು.
ತಮಿಳುನಾಡಿನಾದ್ಯಂತ 38 ಜಿಲ್ಲೆಗಳಿದ್ದು 234 ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ. ರಾಜ್ಯವನ್ನು ಇಬ್ಭಾಗ ಮಾಡಿ ಎಂಬ ಬಗ್ಗೆ ರಾಜಕೀಯ ಬೇಡಿಕೆಯಾಗಲಿ ಅಥವಾ ಜನರು ಈ ಬಗ್ಗೆ ಹೋರಾಟವನ್ನು ನಡೆಸುತ್ತಿಲ್ಲ ಎಂದು ರಾಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ
ಭಾರತದಲ್ಲಿ 24ಗಂಟೆಯಲ್ಲಿ 16,047 ಕೋವಿಡ್ ಸೋಂಕು ಪ್ರಕರಣ ಪತ್ತೆ, 54 ಮಂದಿ ಸಾವು
ಪುಲ್ವಾಮಾ: ತಪ್ಪಿದ ಭಾರೀ ದುರಂತ-30 ಕೆಜಿ ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಿದ ಸೇನೆ
ಪಶ್ಚಿಮ ಬಂಗಾಳದಲ್ಲಿ ಭೀಕರ ರಸ್ತೆ ಅಪಘಾತ : ಎಂಟು ಮಹಿಳೆಯರು ಸೇರಿ 9 ಮಂದಿ ಸಾವು
ಭಾರತದಲ್ಲಿ ಮಹಿಳಾ ಪೈಲಟ್ ಪ್ರಮಾಣ ಅಮೆರಿಕಕ್ಕಿಂತ ಹೆಚ್ಚು!