ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಕ್ರಿಯಾ ಯೋಜನೆ: ಓಂ ಬಿರ್ಲಾ

Team Udayavani, Sep 26, 2021, 12:35 AM IST

ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಕ್ರಿಯಾ ಯೋಜನೆ: ಓಂ ಬಿರ್ಲಾ

ಬೆಂಗಳೂರು : ಪಂಚಾಯತ್‌ ನಿಂದ ಸಂಸತ್ತಿನವರೆಗಿನ ಎಲ್ಲ ಚುನಾಯಿತ ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಪಾರ್ಲಿಮೆಂಟ್‌ನ “ಪ್ರಜಾ ಪ್ರಭುತ್ವಕ್ಕಾಗಿ ಸಂಸದೀಯ ಸಂಶೋ ಧನೆ ಮತ್ತು ತರಬೇತಿ ಸಂಸ್ಥೆ’ (ಪ್ರೈಡ್‌) ಮೂಲಕ ಕ್ರಿಯಾ ಯೋಜನೆ ರೂಪಿಸ ಲಾಗುತ್ತಿದೆ ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ಮಾತನಾಡಿದ ಅವರು, ಚುನಾಯಿತ ಜನಪ್ರತಿನಿಧಿಗಳ ಕಾರ್ಯಕ್ಷಮತೆ ಹೆಚ್ಚಿಸಿದರೆ ಶಾಸನ ಸಭೆಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡು ಜನರ ಆಶೋತ್ತರಗಳಿಗೆ ಪರಿಣಾಮಕಾರಿ ಮತ್ತು ಉತ್ತರದಾಯಿಗಳಾಗಿ ಸ್ಪಂದಿ ಸಲು ಸಾಧ್ಯವಾಗಲಿದೆ ಎಂದರು.

ದೇಶದ ವಿಧಾನಮಂಡಲಗಳ ಪೀಠಾಸೀನಾಧಿಕಾರಿಗಳ ಸಮ್ಮೇಳನಕ್ಕೆ ನೂರು ವರ್ಷ ತುಂಬಿದೆ. ದೇಶ ಸ್ವಾತಂತ್ರ್ಯಪಡೆದು 75 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ದೇಶಾದ್ಯಂತ “ಆಜಾದಿ ಕಾ ಅಮೃತ್‌ ಮಹೋತ್ಸವ’ ಸಹ ಆಚರಿಸಲಾಗುತ್ತಿದೆ. ಇವೆರಡರ ಪ್ರಯುಕ್ತ ಪ್ರಜಾತಾಂತ್ರಿಕ ವ್ಯವಸ್ಥೆ ಮತ್ತು ಶಾಸನ ಸಭೆಗಳ ಗುಣಮಟ್ಟ ಹಾಗೂ ಘನತೆ ಹೆಚ್ಚಿಸುವ, ಪಂಚಾಯತ್‌ನಿಂದ ಸಂಸತ್ತಿನವರೆಗಿನ ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ದೇಶಾದ್ಯಂತ ವಿವಿಧ ಬಗೆಯ 75 ಕಾರ್ಯ ಕ್ರಮ ಗಳನ್ನು ಆಯೋಜಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರು ಮತ್ತು ಯುವಕರ ಸಕ್ರಿಯ ಭಾಗವಹಿಸುವಿಕೆಯನ್ನು ಖಾತರಿಪಡಿಸಲು ಯುವ ಸಂಸತ್ತು, ಯುವ ಜನಪ್ರತಿನಿಧಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ, ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜನಪ್ರತಿನಿಧಿಗಳಿಗಾಗಿ ವಿವಿಧ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಕ್ಟೋಬರ್‌ನಲ್ಲಿ ಸಮ್ಮೇಳನ
ವಿಧಾನಮಂಡಲಗಳ ಪೀಠಾಸೀನಾಧಿಕಾರಿಗಳ ಪ್ರಥಮ ಸಮ್ಮೇಳನ 1921ರಲ್ಲಿ ಶಿಮ್ಲಾದಲ್ಲಿ ನಡೆದಿತ್ತು. ಶತಮಾನೋತ್ಸವ ಸಮ್ಮೇಳನವೂ ಶಿಮ್ಲಾದಲ್ಲಿ ನಡೆಯಲಿದ್ದು, ಅಕ್ಟೋಬರ್‌ 26, 27 ಮತ್ತು 28 ಪ್ರಸ್ತಾವಿತ ದಿನಾಂಕಗಳೆಂದು ನಿಗದಿಪಡಿಸಲಾಗಿದೆ. ಪೀಠಾಸೀನಾಧಿಕಾರಿಗಳ ಜತೆಗೆ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು, ರಾಜಕೀಯ ಪಕ್ಷಗಳ ಪ್ರಮುಖ ರನ್ನೂ ಆಹ್ವಾನಿಸಲಾಗುತ್ತಿದೆ. ಶಾಸನ ಸಭೆಗಳ ಚರ್ಚೆಯ ಗುಣಮಟ್ಟ, ಕಾರ್ಯವೈಖರಿ ಜತೆಗೆ ಅವುಗಳ ಘನತೆಯನ್ನು ಕಾಪಾಡುವುದರ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು. ಸಂಸದೀಯ ವ್ಯವಸ್ಥೆಯ ಬಲವರ್ಧನೆಗೆ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಬಗೆಯ 75 ಕಾರ್ಯಕ್ರಮಗಳ ಪ್ರಸ್ತಾವನೆ ಗಳಿಗೆ ಅನುಮೋದನೆ ನೀಡಲಾಗುವುದು ಎಂದು ಸ್ಪೀಕರ್‌ ಓಂ ಬಿರ್ಲಾ ಅವರು ತಿಳಿಸಿದರು.

ಟಾಪ್ ನ್ಯೂಸ್

ಕೋಳಿ ಕೊಡದ್ದಕ್ಕೆ ಕಾಲು ಮುರಿದ! ಸಿಂಘು ಗಡಿಯಲ್ಲಿ ಮತ್ತೊಂದು ಕೃತ್ಯ

ಕೋಳಿ ಕೊಡದ್ದಕ್ಕೆ ಕಾಲು ಮುರಿದ! ಸಿಂಘು ಗಡಿಯಲ್ಲಿ ಮತ್ತೊಂದು ಕೃತ್ಯ

ಆಸ್ಟ್ರೇಲಿಯ-ದ. ಆಫ್ರಿಕಾ ಮೊದಲ ಫೈಟ್‌; 6ನೇ ಟಿ20 ವಿಶ್ವಕಪ್‌ ಸಡಗರ

ಆಸ್ಟ್ರೇಲಿಯ-ದ. ಆಫ್ರಿಕಾ ಮೊದಲ ಫೈಟ್‌; 6ನೇ ಟಿ20 ವಿಶ್ವಕಪ್‌ ಸಡಗರ

ಜಿಲ್ಲೆಗೊಂದು ಮಾದರಿ ಎಂಜಿನಿಯರಿಂಗ್‌ ಕಾಲೇಜು

ಜಿಲ್ಲೆಗೊಂದು ಮಾದರಿ ಎಂಜಿನಿಯರಿಂಗ್‌ ಕಾಲೇಜು

ಹಡಿಲು ಭೂಮಿ ಕೃಷಿ ಕಟಾವಿಗೆ ಸಿದ್ಧ: 1,000 ಟನ್‌ ಉತ್ಪಾದನೆ ನಿರೀಕ್ಷೆ

ಹಡಿಲು ಭೂಮಿ ಕೃಷಿ ಕಟಾವಿಗೆ ಸಿದ್ಧ: 1,000 ಟನ್‌ ಉತ್ಪಾದನೆ ನಿರೀಕ್ಷೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಲ್ಲೆಗೊಂದು ಮಾದರಿ ಎಂಜಿನಿಯರಿಂಗ್‌ ಕಾಲೇಜು

ಜಿಲ್ಲೆಗೊಂದು ಮಾದರಿ ಎಂಜಿನಿಯರಿಂಗ್‌ ಕಾಲೇಜು

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

siddaramaiah

ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

police

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಕೋಳಿ ಕೊಡದ್ದಕ್ಕೆ ಕಾಲು ಮುರಿದ! ಸಿಂಘು ಗಡಿಯಲ್ಲಿ ಮತ್ತೊಂದು ಕೃತ್ಯ

ಕೋಳಿ ಕೊಡದ್ದಕ್ಕೆ ಕಾಲು ಮುರಿದ! ಸಿಂಘು ಗಡಿಯಲ್ಲಿ ಮತ್ತೊಂದು ಕೃತ್ಯ

ಆಸ್ಟ್ರೇಲಿಯ-ದ. ಆಫ್ರಿಕಾ ಮೊದಲ ಫೈಟ್‌; 6ನೇ ಟಿ20 ವಿಶ್ವಕಪ್‌ ಸಡಗರ

ಆಸ್ಟ್ರೇಲಿಯ-ದ. ಆಫ್ರಿಕಾ ಮೊದಲ ಫೈಟ್‌; 6ನೇ ಟಿ20 ವಿಶ್ವಕಪ್‌ ಸಡಗರ

ಮುರದಮೇಲುವಿನಲ್ಲಿ ಇಂದು ಲೋಕಾರ್ಪಣೆ

ಮುರದಮೇಲುವಿನಲ್ಲಿ ಇಂದು ಲೋಕಾರ್ಪಣೆ

ಪುತ್ತೂರು ಎಪಿಎಂಸಿ ರಸ್ತೆ: ಅಂಡರ್‌ಪಾಸ್‌ ನಿರ್ಮಾಣ ಶೀಘ್ರ ಅಂತಿಮ ಮುದ್ರೆ: ನಳಿನ್‌

ಪುತ್ತೂರು ಎಪಿಎಂಸಿ ರಸ್ತೆ: ಅಂಡರ್‌ಪಾಸ್‌ ನಿರ್ಮಾಣ ಶೀಘ್ರ ಅಂತಿಮ ಮುದ್ರೆ: ನಳಿನ್‌

ಜಿಲ್ಲೆಗೊಂದು ಮಾದರಿ ಎಂಜಿನಿಯರಿಂಗ್‌ ಕಾಲೇಜು

ಜಿಲ್ಲೆಗೊಂದು ಮಾದರಿ ಎಂಜಿನಿಯರಿಂಗ್‌ ಕಾಲೇಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.