ಎಂಟು ಪಂದ್ಯ ಗೆದ್ದ ಡೆಲ್ಲಿಗೆ ಮತ್ತೆ ಅಗ್ರಸ್ಥಾನ

Team Udayavani, Sep 26, 2021, 12:17 AM IST

ಎಂಟು ಪಂದ್ಯ ಗೆದ್ದ ಡೆಲ್ಲಿಗೆ ಮತ್ತೆ ಅಗ್ರಸ್ಥಾನ

ಅಬುಧಾಬಿ : ಗೆಲುವಿನ ಓಟವನ್ನು ಎಂಟಕ್ಕೆ ಏರಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಜತೆಗೆ ಮುಂದಿನ ಸುತ್ತಿನ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ. ಶನಿವಾರದ ಮೊದಲ ಮುಖಾಮುಖೀಯಲ್ಲಿ ಪಂತ್‌ ಪಡೆ 33 ರನ್ನುಗಳಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಉರುಳಿಸಿ ಈ ಎತ್ತರ ತಲುಪಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಗಳಿಸಿದ್ದು 6 ವಿಕೆಟಿಗೆ 154 ರನ್ನುಗಳ ಸಾಮಾನ್ಯ ಮೊತ್ತ. ಜವಾಬಿತ್ತ ರಾಜಸ್ಥಾನ್‌ ಇನ್ನಷ್ಟು ಕಳಪೆ ಪ್ರದರ್ಶನ ನೀಡಿ 6 ವಿಕೆಟಿಗೆ ಕೇವಲ 121 ರನ್‌ ಮಾಡಿ 5ನೇ ಸೋಲನುಭವಿಸಿತು.

ರಾಜಸ್ಥಾನ್‌ ನಾಯಕ ಸಂಜು ಸ್ಯಾಮ್ಸನ್‌ ಏಕಾಂಗಿಯಾಗಿ ಹೋರಾಡಿ ಅಜೇಯ 70 ರನ್‌ ಬಾರಿಸಿದರು (53 ಎಸೆತ, 8 ಬೌಂಡರಿ, 1 ಸಿಕ್ಸರ್‌). ಎರಡಂಕೆಯ ರನ್‌ ದಾಖಲಿಸಿದ ಮತ್ತೋರ್ವ ಆಟಗಾರ ಮಹಿಪಾಲ್‌ ಲೊನ್ರೋರ್‌ (10). ನೋರ್ಜೆ, ರಬಾಡ, ಅಶ್ವಿ‌ನ್‌, ಅಕ್ಷರ್‌, ಆವೇಶ್‌ ಬಿಗಿಯಾದ ಬೌಲಿಂಗ್‌ ಸಂಘಟಿಸಿ ರಾಜಸ್ಥಾನಕ್ಕೆ ಕಡಿವಾಣ ಹಾಕಿದರು.

ಮೊದಲ ಓವರ್‌ನಲ್ಲೇ ಲಿವಿಂಗ್‌ಸ್ಟೋನ್‌, ದ್ವಿತೀಯ ಓವರ್‌ನಲ್ಲಿ ಜೈಸ್ವಾಲ್‌ ವಿಕೆಟ್‌ ಕಳೆದುಕೊಂಡ ರಾಜಸ್ಥಾನ ತೀವ್ರ ಒತ್ತಡಕ್ಕೆ ಸಿಲುಕಿತು. ಮಿಲ್ಲರ್‌, ಪರಾಗ್‌ ಕೂಡ ಪರದಾಡಿದರು.

ಡೆಲ್ಲಿ ಆರಂಭಿಕ ಕುಸಿತ
ಬಿಗ್‌ ಹಿಟ್ಟರ್‌ಗಳಾದ ಶಿಖರ್‌ ಧವನ್‌ (8) ಮತ್ತು ಪೃಥ್ವಿ ಶಾ (8) 21 ರನ್‌ ಆಗುವಷ್ಟರಲ್ಲಿ ನಿರ್ಗಮಿಸಿದ್ದರಿಂದ ಪವರ್‌ ಪ್ಲೇಯಲ್ಲಿ ಡೆಲ್ಲಿಗೆ ದೊಡ್ಡ ಮೊತ್ತ ಪೇರಿಸಲಾಗಲಲ್ಲ. ಕಾರ್ತಿಕ್‌ ತ್ಯಾಗಿ ತಮ್ಮ ಮೊದಲ ಎಸೆತದಲ್ಲೇ ಧವನ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಶಾ ವಿಕೆಟ್‌ ಸಕಾರಿಯ ಪಾಲಾಯಿತು.

ಮಾಜಿ-ಹಾಲಿ ನಾಯಕರಾದ ಶ್ರೇಯಸ್‌ ಅಯ್ಯರ್‌-ರಿಷಭ್‌ ಪಂತ್‌ ಜತೆಗೂಡಿದ ಬಳಿಕ ಡೆಲ್ಲಿ ರನ್‌ರೇಟ್‌ ಏರತೊಡಗಿತು. 7.3 ಓವರ್‌ ನಿಭಾಯಿಸಿದ ಈ ಜೋಡಿ 3ನೇ ವಿಕೆಟಿಗೆ 62 ರನ್‌ ಪೇರಿಸಿತು. 32 ಎಸೆತಗಳಿಂದ 43 ರನ್‌ ಬಾರಿಸಿದ ಆಯ್ಯರ್‌ ಡೆಲ್ಲಿ ಸರದಿಯ ಟಾಪ್‌ ಸ್ಕೋರರ್‌ (1 ಬೌಂಡರಿ, 3 ಸಿಕ್ಸರ್‌). ತೇವಟಿಯಾ ಎಸೆತವನ್ನು ಮುನ್ನುಗ್ಗಿ ಬಾರಿಸುವ ಅವಸರದಲ್ಲಿ ಅಯ್ಯರ್‌ ಸ್ಟಂಪ್ಡ್ ಆದರು. ಪಂತ್‌ ಗಳಿಕೆ ಎಸೆತಕ್ಕೊಂದರಂತೆ 24 ರನ್‌ (2 ಫೋರ್‌).

ಶಿಮ್ರನ್‌ ಹೆಟ್‌ಮೈರ್‌ ಬ್ಯಾಟಿಂಗ್‌ ಎಂದಿನ ಹೊಡಿಬಡಿ ಶೈಲಿಯಲ್ಲಿತ್ತು. 16 ಎಸೆತಗಳಿಂದ 28 ರನ್‌ ಬಾರಿಸಿದರು. ಸಿಡಿಸಿದ್ದು 5 ಬೌಂಡರಿ. ಇವರನ್ನು ಮುಸ್ತಫಿಜುರ್‌ 17ನೇ ಓವರ್‌ನಲ್ಲಿ ಕೆಡವಿ ರಾಜಸ್ಥಾನಕ್ಕೆ ಮೇಲುಗೈ ಒದಗಿಸಿದರು. ಇದಕ್ಕೂ ಮುನ್ನ ಮುಸ್ತಫಿಜುರ್‌ ಡೆಲ್ಲಿ ಕಪ್ತಾನನನ್ನೂ ಕ್ಲೀನ್‌ಬೌಲ್ಡ್‌ ಮಾಡಿದ್ದರು. ಪಂತ್‌-ಹೈಟ್‌ಮೈರ್‌ ಇನ್ನಷ್ಟು ಹೊತ್ತು ಕ್ರೀಸಿನಲ್ಲಿದ್ದರೆ ಡೆಲ್ಲಿ 175ರ ಗಡಿ ದಾಟುವ ಎಲ್ಲ ಸಾಧ್ಯತೆ ಇತ್ತು.

ರಾಜಸ್ಥಾನ್‌ ಪರ ಮುಸ್ತಫಿಜುರ್‌ 22ಕ್ಕೆ 2, ಸಕಾರಿಯ 33ಕ್ಕೆ 2 ವಿಕೆಟ್‌ ಉರುಳಿಸಿದರು.

ಸ್ಕೋರ್‌ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಲಿವಿಂಗ್‌ಸ್ಟೋನ್‌ ಬಿ ಸಕಾರಿಯ 10
ಶಿಖರ್‌ ಧವನ್‌ ಬಿ ಕಾರ್ತಿಕ್‌ ತ್ಯಾಗಿ 8
ಅಯ್ಯರ್‌ ಸ್ಟಂಪ್ಡ್ ಸ್ಯಾಮ್ಸನ್‌ ಬಿ ತೇವಟಿಯಾ 43
ರಿಷಭ್‌ ಪಂತ್‌ ಬಿ ಮುಸ್ತಫಿಜುರ್‌ 24
ಹೆಟ್‌ಮೈರ್‌ ಸಿ ಸಕಾರಿಯ ಬಿ ಮುಸ್ತಫಿಜುರ್‌ 28
ಲಲಿತ್‌ ಯಾದವ್‌ ಔಟಾಗದೆ 14
ಅಕ್ಷರ್‌ ಪಟೇಲ್‌ ಸಿ ಮಿಲ್ಲರ್‌ ಬಿ ಸಕಾರಿಯ 12 ಆರ್‌. ಅಶ್ವಿ‌ನ್‌ ಔಟಾಗದೆ 6
ಇತರ 9
ಒಟ್ಟು(6 ವಿಕೆಟಿಗೆ) 154
ವಿಕೆಟ್‌ ಪತನ: 1-18, 2-21, 3-83, 4-43, 5-121, 6-142.

ಬೌಲಿಂಗ್‌;
ಮುಸ್ತಫಿಜುರ್‌ ರೆಹಮಾನ್‌ 4-0-22-2
ಮಹಿಪಾಲ್‌ ಲೊನ್ರೋರ್‌ 1-0-5-0
ಚೇತನ್‌ ಸಕಾರಿಯ 4-0-33-2
ಕಾರ್ತಿಕ್‌ ತ್ಯಾಗಿ 4-0-40-1
ತಬ್ರೇಜ್‌ ಶಂಸಿ 4-0-34-0
ರಾಹುಲ್‌ ತೇವಟಿಯಾ 3-0-17-1

ರಾಜಸ್ಥಾನ್‌ ರಾಯಲ್ಸ್‌
ಲಿವಿಂಗ್‌ಸ್ಟೋನ್‌ ಸಿ ಪಂತ್‌ ಬಿ ಆವೇಶ್‌ 1
ಯಶಸ್ವಿ ಜೈಸ್ವಾಲ್‌ ಸಿ ಪಂತ್‌ ಬಿ ನೋರ್ಜೆ 5
ಸಂಜು ಸ್ಯಾಮ್ಸನ್‌ ಔಟಾಗದೆ 70
ಡೇವಿಡ್‌ ಮಿಲ್ಲರ್‌ ಸ್ಟಂಪ್ಡ್ ಪಂತ್‌ ಬಿ ಅಶ್ವಿ‌ನ್‌ 7
ಲೊನ್ರೋರ್‌ ಸಿ ಅವೇಶ್‌ ಬಿ ರಬಾಡ 19
ರಿಯಾನ್‌ ಪರಾಗ್‌ ಬಿ ಅಕ್ಷರ್‌ 2
ತೇವಟಿಯಾ ಸಿ ಹೆಟ್‌ಮೈರ್‌ ಬಿ ನೋರ್ಜೆ 9
ತಬ್ರೇಜ್‌ ಶಂಸಿ ಔಟಾಗದೆ 2
ಇತರ 6
ಒಟ್ಟು(6 ವಿಕೆಟಿಗೆ) 121
ವಿಕೆಟ್‌ ಪತನ: 1-6, 2-6, 3-17, 4-48, 5-55, 6-99.

ಬೌಲಿಂಗ್‌;
ಆವೇಶ್‌ ಖಾನ್‌ 4-0-29-1
ಅನ್ರಿಚ್‌ ನೋರ್ಜೆ 4-0-18-2
ಆರ್‌. ಅಶ್ವಿ‌ನ್‌ 4-0-20-1
ಕಾಗಿಸೊ ರಬಾಡ 4-0-26-1
ಅಕ್ಷರ್‌ ಪಟೇಲ್‌ 4-0-27-1

ಪಂದ್ಯಶ್ರೇಷ್ಠ: ಶ್ರೇಯಸ್‌ ಅಯ್ಯರ್‌

ಟಾಪ್ ನ್ಯೂಸ್

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.