ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾದ ಟ್ರೈಲರ್ ಬಿಡುಗಡೆ; ಉತ್ತಮ ಪ್ರತಿಕ್ರಿಯೆ
ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾದ ಬಗ್ಗೆ ಸಿನಿ ಪ್ರಿಯರಿಗೆ ಮತ್ತಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.
Team Udayavani, May 10, 2022, 12:08 PM IST
ಮಂಗಳೂರು: ಬಹು ನಿರೀಕ್ಷಿತ ತುಳು ಸಿನಿಮಾ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾ ಮೇ 20ರಂದು ತೆರೆಕಾಣುತ್ತಿದೆ.
ಇದನ್ನೂ ಓದಿ:ಮೇ 13 ರಂದು ಜೆಡಿಎಸ್ ನ ಜನತಾ ಜಲಧಾರೆ ಸಮಾರೋಪ: 4 ಲಕ್ಷ ಜನ ಸೇರುವ ನಿರೀಕ್ಷೆ; ಎಚ್ ಡಿಕೆ
ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾವನ್ನು ವೈಭವ್ ಫ್ಲಿಕ್ಸ್ ಅವರು ಮ್ಯಾಂಗೋ ಪಿಕ್ಕಲ್ ಎಂಟರ್ ಟೈನ್ಮೆಂಟ್ ಸಹಯೋಗದೊಂದಿಗೆ ಪ್ರಸ್ತುತಪಡಿಸುತ್ತಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಈಗಾಗಲೇ ಟ್ರೈಲರ್ ಮೂಲಕ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ.
3 ನಿಮಿಷ 5 ಸೆಕೆಂಡುಗಳ ಕಾಲದ ಟ್ರೈಲರ್ ಅದ್ಭುತವಾಗಿ ಮೂಡಿಬಂದಿದ್ದು, ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾದ ಬಗ್ಗೆ ಸಿನಿ ಪ್ರಿಯರಿಗೆ ಮತ್ತಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.
ಈಗಾಗಲೇ ಅರವಿಂದ್ ಬೋಳಾರ್ ಇಂಟ್ರೋ ಟೀಸರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿ ಅಪಾರ ಮೆಚ್ಚುಗೆ ಗಳಿಸಿತ್ತು. ನಾಯಕ ನಟ ವಿ.ಜಿ. ವಿನೀತ್ ಸಿನಿಮಾಕ್ಕೆ ಕಥೆ, ಚಿತ್ರಕಥೆ ಕೂಡಾ ಬರೆದಿದ್ದಾರೆ. ರಾಹುಲ್ ಅಮೀನ್ ಸಿನಿಮಾನವನ್ನು ನಿರ್ದೇಶಿಸಿದ್ದಾರೆ.
ಸಿನಿಮಾವನ್ನು ಆನಂದ್ ಎಂ ನಿರ್ಮಿಸಿದ್ದು, ಬಿ.ಅಶೋಕ್ ಕುಮಾರ್, ಸೀತಾರಾಮ್ ಶೆಟ್ಟಿ, ಅಜಯ್ ಬಾಳಿಗಾ, ಸುಹಾನ್ ಪ್ರಸಾದ್, ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ ಮತ್ತು ಅರ್ಪಿತ್ ಅಡ್ಯಾರ್ ಸಹ ನಿರ್ಮಾಪಕರಾಗಿದ್ದಾರೆ.
ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾಕ್ಕೆ ಪಡ್ಡಾಯಿ ಖ್ಯಾತಿಯ ಪ್ರಸಾದ್ ಪಿ. ಕ್ಯಾಮರಾ ಸೆರೆಹಿಡಿದಿದ್ದಾರೆ. ಜೇಕಬ್ ಜಾನ್ಸನ್ ಸಹಕಾರ ನೀಡಿದ್ದು, ಗಿರ್ಗಿಟ್ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಭೋಜ್ ರಾಜ್ , ಕರೀಷ್ಮಾ ಅಮೀನ್, ಯಶಾ ಶಿವಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ.
ಚಿತ್ರದ ಹಾಡುಗಳನ್ನು ಸೃಜನ್ ಕುಮಾರ್ ತೋನ್ಸೆ ಸಂಯೋಜಿಸಿದ್ದು, ಪ್ಲ್ಯಾಂಗಲ್ ಸ್ಟುಡಿಯೋ ಸಂಕಲನ, ಚಿತ್ರದ ಸಾಹಸ ದೃಶ್ಯಗಳನ್ನು ಚೇತನ್ ಡಿಸೋಜಾ ನಿರ್ವಹಿಸಿದ್ದಾರೆ. ನವೀನ್ ಶೆಟ್ಟಿ ಆರ್ಯನ್ ನೃತ್ಯ ಸಂಯೋಜನೆ ಮಾಡಿರುವುದಾಗಿ ಚಿತ್ರತಂಡ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…