ಬಂದಾನಾ ಸ್ಟೈಲ್‌ನ ಹತ್ತಿ ಮಾಸ್ಕ್ ಗಳೇ ಪರಿಣಾಮಕಾರಿ ; ಉಟಾ ವಿವಿ ಸಂಶೋಧಕರ ಪ್ರತಿಪಾದನೆ
ಕೆಮ್ಮಿದಾಗ, ಸೀನಿದಾಗ ಡ್ರಾಪ್‌ಲೆಟ್‌ಗಳನ್ನು ತಡೆಯುವಲ್ಲಿ ಹೆಚ್ಚು ಶಕ್ತ
Team Udayavani, Jul 2, 2020, 8:50 AM IST
ನ್ಯೂಯಾರ್ಕ್: ಮನೆಗಳಲ್ಲಿ ತಯಾರಿಸಬಹುದಾದ “ನಾನ್ ಮೆಡಿಕಲ್ ಗ್ರೇಡ್’ ಮಾಸ್ಕ್ ಗೆಳಿಗೆ ಹತ್ತಿಯ ಬಟ್ಟೆಯೇ ಹೆಚ್ಚು ಸೂಕ್ತ ಎಂದು ಅಮೆರಿಕ ವಿಜ್ಞಾನಿಗಳು ತಿಳಿಸಿದ್ದಾರೆ. ಹಾಸಿಗೆ ತಯಾರಿಕೆಗೆ ಬಳಸುವ ನಯವಾದ ಹತ್ತಿಯ ಎರಡು ಪದರಗಳಿಂದ, ಬಂದಾನಾ ಮಾದರಿಯ ಫೇಸ್ ಮಾಸ್ಕ್ ಗಳು, ಕೋವಿಡ್ ಹರಡುವುದನ್ನು ತಡೆಯಲು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ ಎಂದು ಅವರು ಹೇಳಿದ್ದಾರೆ.
ಮಾಸ್ಕ್ ಗಳ ತಯಾರಿಕೆಗೆ ಸೂಕ್ತ ಕಚ್ಚಾ ವಸ್ತು ಯಾವುದು ಎಂಬುದರ ಬಗ್ಗೆ ಹಲವಾರು ದಿನಗಳಿಂದ ಸಂಶೋಧನೆ ನಡೆಸಲಾಗುತ್ತಿದ್ದು, ಹಲವಾರು ಸಾಮಗ್ರಿ ಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆ ಎಲ್ಲಾ ಪರೀಕ್ಷೆ ಗಳ ತರುವಾಯ, ಮಾಸ್ಕ್ ತಯಾರಿಕೆಗೆ ಹತ್ತಿಯೇ ಸೂಕ್ತವಾದ ಸಾಮಗ್ರಿ ಎಂದು “ಫಿಸಿಕ್ಸ್ ಆಫ್ ಫ್ಲೋಯಿಡ್ಸ್’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ವಿವರಿಸಲಾಗಿದೆ. ಸೋಂಕಿತರು, ಕೆಮ್ಮಿದಾಗ ಹಾಗೂ ಸೀನಿದಾಗ ಅವರಿಂದ ಹರಡುವ ಸೂಕ್ಷ್ಮಕಣಗಳನ್ನು ತಡೆಯುವಲ್ಲಿ ಅದು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕು ಹರಡುತ್ತಿದ್ದಂತೆ, ಜಗತ್ತಿನೆಲ್ಲೆಡೆ ಫೇಸ್ ಮಾಸ್ಕ್ ಗಳನ್ನು ಕಡ್ಡಾಯವಾಗಿ ಬಳಸುವಂತೆ ಎಲ್ಲೆಡೆ ಸೂಚಿಸಲಾಗುತ್ತಿತ್ತು. ಮೊದಲಿಗೆ, ಬಳಸಿ ಬಿಸಾಡುವಂಥ ಮಾಸ್ಕ್ ಗಳನ್ನು ಉಪಯೋಗಿಸಲಾಗುತ್ತಿತ್ತು. ಆದರೆ, ಬರಬರುತ್ತಾ ಮರು-ಬಳಕೆಯ ಮಾಸ್ಕ್ ಗೆಳು ಹೆಚ್ಚು ಜನಪ್ರಿಯವಾದವು. ಅದೂ ಮುಗಿದ ಅನಂತರ, ಹೊಸ ಸಾಮಗ್ರಿಗಳ, ಹೊಸ ವಿನ್ಯಾಸಗಳ ಮಾಸ್ಕ್ ಗಳು ಮಾರುಕಟ್ಟೆಗೆ ಬಂದವು ಎಂದು ಫ್ಲಾರಿಡಾ ಅಟ್ಲಾಂಟಿಕ್ ವಿವಿ ಸಂಶೋಧಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
MUST WATCH
ಹೊಸ ಸೇರ್ಪಡೆ