ಉಕ್ರೇನ್ ಸೇನೆ ಸೇರಿದ ತಮಿಳುನಾಡು ಯುವಕ
Team Udayavani, Mar 9, 2022, 7:55 AM IST
ಉಕ್ರೇನ್ ಸರಕಾರ ವಿದೇಶಿ ನಾಗರಿಕರನ್ನು ತಮ್ಮ ಸೇನೆಗೆ ಆಹ್ವಾನಿಸಿರುವ ಬೆನ್ನಲ್ಲೇ ಭಾರತದ ತಮಿಳುನಾಡಿನ ಯುವಕನೊಬ್ಬ ಉಕ್ರೇನ್ ಸೇನೆ ಸೇರಿದ್ದಾನೆ. ಆ ದೇಶದ ಪರ ಹೋರಾಟ ಮಾಡುವ ಸಂಘಟನೆ ಜಾರ್ಜಿಯನ್ ನ್ಯಾಶನಲ್ ಲೀಜನ್ (Georgian National Legion) ಎಂಬುದಕ್ಕೆ ಸೇರಿದ್ದಾನೆ.
ಉಕ್ರೇನ್ನ ಖಾರ್ಕಿವ್ ಏವಿಯೇ ಶನ್ ಇನ್ಸ್ಟಿಟ್ಯೂಟ್ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಕ್ಕೆಂದು ತೆರಳಿದ್ದ ಕೊಯಮತ್ತೂರಿನ ಥುಡಲಿಯೂರಿನ 21 ವರ್ಷದ ಯುವಕ ಸೈನಿಕೇಶ್ ರವಿಚಂದ್ರನ್ ಉಕ್ರೇನ್ ಸೇನೆಗೆ ಸೇರಿರುವುದಾಗಿ ಹೆತ್ತವರಿಗೆ ತಿಳಿಸಿದ್ದಾನೆ.
ಸೈನಿಕೇಶ್ ರವಿಚಂದ್ರನ್ಗೆ ಸೇನೆಯ ಬಗ್ಗೆ ಹೆಚ್ಚು ಆಸಕ್ತಿಯಿದ್ದು ಭಾರತೀಯ ಸೇನೆ ಸೇರುವುದಕ್ಕೆಂದು 2 ಬಾರಿ ಅರ್ಜಿ ಸಲ್ಲಿಸಿದ್ದ. ಆದರೆ ಎತ್ತರ ಕಡಿಮೆ ಎನ್ನುವ ಕಾರಣಕ್ಕೆ ತಿರಸ್ಕೃತಗೊಂಡಿದ್ದ. ಹಾಗೆಯೇ ಅಮೆರಿಕ ಸೇನೆ ಯಿಂದಲೂ ತಿರಸ್ಕೃತಗೊಂಡಿದ್ದ ಎಂದು ಆತನ ತಾಯಿ ಝಾನ್ಸಿ ಲಕ್ಷ್ಮೀಬಾಯಿ ಹೇಳಿದ್ದಾರೆ. ಐದು ದಿನಗಳ ಹಿಂದೆ ಆತನ ಜತೆಗೆ ಫೋನ್ನಲ್ಲಿ ಮಾತನಾಡಿದ್ದೆ.
ಯುದ್ಧ ಆರಂಭವಾದ ಮೇಲೆ ಆತನೊಂದಿಗೆ ಸಂಪರ್ಕವೇ ಕಡಿತಗೊಂಡಿತ್ತು. ಅನಂತರ ಆತನೇ ಕರೆ ಮಾಡಿ ಸೇನೆ ಸೇರಿದ್ದಾಗಿ ಹೇಳಿದ್ದಾನೆ. ಭಾರತಕ್ಕೆ ವಾಪಸು ಬರಲು ಒಪ್ಪುತ್ತಿಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !