ಉಡುಪಿ ಜಿಲ್ಲೆಯಲ್ಲಿ ಮುಚ್ಚಿವೆ 12 ಶಾಲೆ; ಶಿಕ್ಷಕ- ವಿದ್ಯಾರ್ಥಿ ಅನುಪಾತದಲ್ಲಿ ಅಜಗಜಾಂತರ

Team Udayavani, Jan 15, 2022, 7:50 AM IST

ಉಡುಪಿ ಜಿಲ್ಲೆಯಲ್ಲಿ ಮುಚ್ಚಿವೆ 12 ಶಾಲೆ;  ಶಿಕ್ಷಕ- ವಿದ್ಯಾರ್ಥಿ ಅನುಪಾತದಲ್ಲಿ ಅಜಗಜಾಂತರ

ಉಡುಪಿ: ಕೊರೊನಾದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗುವ ಜತೆಗೆ ಖಾಸಗಿ ಶಾಲೆಗಳಿಗೆ ಒಂದಷ್ಟು ಪೆಟ್ಟು ಬಿದ್ದಿದೆ. ಈ ಮಧ್ಯೆ ಜಿಲ್ಲೆಯಲ್ಲಿ ತಲಾ 3 ಸರಕಾರಿ ಶಾಲೆ ಹಾಗೂ ಖಾಸಗಿ (ಅನುದಾನ ರಹಿತ) ಶಾಲೆಗಳು ಮತ್ತು 6 ಅನುದಾನಿತ ಶಾಲೆಗಳು ಬಂದ್‌ ಆಗಿವೆ.

ಬ್ರಹ್ಮಾವರದ 4, ಬೈಂದೂರು, ಕಾರ್ಕಳ, ಉಡುಪಿ ಹಾಗೂ ಕುಂದಾಪುರದ ತಲಾ 2 ಶಾಲೆಗಳು ಸೇರಿವೆ. ಇದರಲ್ಲಿ ಬಹುತೇಕ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು. ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಸುಮಾರು 60 ಸಾವಿರ, ಖಾಸಗಿ ಶಾಲೆಗಳಲ್ಲಿ 75 ಸಾವಿರ ಹಾಗೂ ಅನುದಾನಿತ ಶಾಲೆಗಳಲ್ಲಿ 22 ಸಾವಿರ ಸೇರಿದಂತೆ ಒಟ್ಟು ಸುಮಾರು 1.50 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸರಕಾರಿ ಶಾಲೆ: 473 ಹುದ್ದೆ ಖಾಲಿ
ಜಿಲ್ಲೆಯ 650ಕ್ಕೂ ಅಧಿಕ ಸರಕಾರಿ ಶಾಲೆಗಳಲ್ಲಿ 473 ಸಹಾಯಕ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಇದರಲ್ಲಿ ಪ್ರೌಢಶಾಲಾ ವಿಭಾಗ ಬೇರೆ ಇರುವುದಿಂದ ಪ್ರೌಢಶಾಲೆಯಲ್ಲಿ ವಿಷಯವಾರು ಇಂಗ್ಲಿಷ್‌, ವಿಜ್ಞಾನ, ಗಣಿತ ಮೊದಲಾದ ಶಿಕ್ಷಕರ ಹುದ್ದೆಯೂ ಖಾಲಿಯಿದೆ. ಹುದ್ದೆ ಭರ್ತಿಗೆ ರಾಜ್ಯ ಸರಕಾರದಿಂದಲೇ ಕ್ರಮವಾಗಬೇಕು. ಸದ್ಯಕ್ಕೆ ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.

ವೇತನ ಕಡಿಮೆ ಇರುವುದರಿಂದ ವರ್ಷದಿಂದ ವರ್ಷಕ್ಕೆ ಅತಿಥಿ ಶಿಕ್ಷಕರು ಬದಲಾಗುತ್ತಿರುತ್ತಾರೆ. ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೂ ಪ್ರಭಾವ ಬೀರುತ್ತದೆ.

30-40 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ
ಶಿಕ್ಷಕರ ಕೊರತೆ ಜತೆಗೆ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತದಲ್ಲೂ ಅಜಗಜಾಂತರವಿದೆ. ಸರಕಾರದ ನಿಯಮದಂತೆ 18ರಿಂದ 22 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ ಇರಬೇಕು. ಆದರೆ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ 30ರಿಂದ 40 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರಿದ್ದಾರೆ. 583 ಸರಕಾರಿ ಪ್ರಾಥಮಿಕ ಶಾಲೆಗಳ ಪೈಕಿ 127ರಲ್ಲಿ ಮಾತ್ರ ಸರಕಾರದ ನಿಯಮದಂತೆ ಶಿಕ್ಷಕರಿದ್ದಾರೆ. 106 ಪ್ರೌಢ ಶಾಲೆಗಳ ಪೈಕಿ ಬಹುತೇಕ ಎಲ್ಲಡೆ ನಿಯಮದಂತೆ ಶಿಕ್ಷಕರಿದ್ದಾರೆ.

ಮಾಹಿತಿ ಸಂಗ್ರಹ
ಜಿಲ್ಲೆಯ ಪ್ರೌಢ ಶಾಲಾ ವಿಭಾಗದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ಚೆನ್ನಾಗಿದೆ. ಪ್ರಾಥಮಿಕ ವಿಭಾಗದಲ್ಲಿ ಸ್ವಲ್ಪ ಕಡಿಮೆಯಿದೆ. ಹೊಸ ಶಿಕ್ಷಕರ ನೇಮಕಾತಿಯಿಂದ ಇದು ಸರಿಯಾಗಲಿದೆ. ಶಾಲೆ ಮುಚ್ಚಿರುವ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ..
-ಮಲ್ಲೇಸ್ವಾಮಿ,
ಡಿಡಿಪಿಐ, ಉಡುಪಿ

– ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

ಕೋವಿಡ್‌ ನಿಯಮ ಉಲ್ಲಂಘನೆ ಆರೋಪ: ರಾಜ್ಯ ಕಾಂಗ್ರೆಸ್‌ ಮುಖಂಡರ ವಿರುದ್ಧದ ಚಾರ್ಜ್‌ಶೀಟ್‌ಗೆ ತಡೆ

ಕೋವಿಡ್‌ ನಿಯಮ ಉಲ್ಲಂಘನೆ ಆರೋಪ: ರಾಜ್ಯ ಕಾಂಗ್ರೆಸ್‌ ಮುಖಂಡರ ವಿರುದ್ಧದ ಚಾರ್ಜ್‌ಶೀಟ್‌ಗೆ ತಡೆ

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ಬೆಳ್ವೆ : ಪೆಟ್ರೋಲ್‌ ಬಂಕ್‌ನಿಂದ ನಗದು ಕಳವು, ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ

ಬೆಳ್ವೆ : ಪೆಟ್ರೋಲ್‌ ಬಂಕ್‌ನಿಂದ ನಗದು ಕಳವು, ಆರೋಪಿಗಾಗಿ ಪೊಲೀಸರ ಶೋಧ ಕಾರ್ಯ

ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌: ಪ್ರಣಯ್‌, ಸಾತ್ವಿಕ್‌-ಚಿರಾಗ್‌ ಮುನ್ನಡೆ

ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌: ಪ್ರಣಯ್‌, ಸಾತ್ವಿಕ್‌-ಚಿರಾಗ್‌ ಮುನ್ನಡೆ

vitlaವಿಟ್ಲ : ವಿವಾಹಿತ ಮಹಿಳೆ ಕೊಲೆ ಪ್ರಕರಣ : ಪೂರ್ವ ದ್ವೇಷವೇ ಕೊಲೆಗೆ ಹೆತುವಾಯಿತೇ ?

ವಿಟ್ಲ : ವಿವಾಹಿತ ಮಹಿಳೆ ಕೊಲೆ ಪ್ರಕರಣ : ಪೂರ್ವ ದ್ವೇಷವೇ ಕೊಲೆಗೆ ಹೆತುವಾಯಿತೇ ?

ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ವಿರುದ್ಧ ದ.ಆಫ್ರಿಕಾದ ಆಲ್‌ರೌಂಡರ್‌ ಮರಿಝಾನೆ ಕ್ಯಾಪ್‌ ಶತಕ

ಟೆಸ್ಟ್‌ ಪಂದ್ಯ: ಇಂಗ್ಲೆಂಡ್‌ ವಿರುದ್ಧ ದ.ಆಫ್ರಿಕಾದ ಆಲ್‌ರೌಂಡರ್‌ ಮರಿಝಾನೆ ಕ್ಯಾಪ್‌ ಶತಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ : ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ 10 ವರ್ಷ ಜೈಲು

ಉಡುಪಿ : ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ 10 ವರ್ಷ ಜೈಲು

ಪಡುಬಿದ್ರಿಯಲ್ಲಿ ಕೊನೆಗೂ ಹೆದ್ದಾರಿ ‘ದೀಪ ಮೋಕ್ಷ’

ಪಡುಬಿದ್ರಿಯಲ್ಲಿ ಕೊನೆಗೂ ಹೆದ್ದಾರಿ ‘ದೀಪ ಮೋಕ್ಷ’

ಉಡುಪಿ: ಪೋಷಕರಲ್ಲಿ ಅಪಹರಣದ ನಾಟಕವಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಮಗ: ಕೊನೆಗೆ ಆಗಿದ್ದೇ ಬೇರೆ

ಉಡುಪಿ: ಪೋಷಕರಲ್ಲಿ ಅಪಹರಣದ ನಾಟಕವಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಮಗ: ಕೊನೆಗೆ ಆಗಿದ್ದೇ ಬೇರೆ

ಕಾಪು ಶಾಸಕ ಲಾಲಾಜಿ‌ ಆರ್. ಮೆಂಡನ್ ಅವರಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ

ಕಾಪು ಶಾಸಕ ಲಾಲಾಜಿ‌ ಆರ್. ಮೆಂಡನ್ ಅವರಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ

4

ಗುಜರಿ ಕೊಂಪೆಯಾದ ಗಾಂಧಿ ಪಾರ್ಕ್‌

MUST WATCH

udayavani youtube

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು

udayavani youtube

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ : ಸುಟ್ಟು ಕರಕಲಾಯ್ತು ಮನೆ

udayavani youtube

ಭಾಗಮಂಡಲ ಸೇರಿದಂತೆ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವ

udayavani youtube

ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ

udayavani youtube

ಮಣ್ಣೆತ್ತಿನ ಅಮಾವಾಸ್ಯೆ : ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ

ಹೊಸ ಸೇರ್ಪಡೆ

ಕೋವಿಡ್‌ ನಿಯಮ ಉಲ್ಲಂಘನೆ ಆರೋಪ: ರಾಜ್ಯ ಕಾಂಗ್ರೆಸ್‌ ಮುಖಂಡರ ವಿರುದ್ಧದ ಚಾರ್ಜ್‌ಶೀಟ್‌ಗೆ ತಡೆ

ಕೋವಿಡ್‌ ನಿಯಮ ಉಲ್ಲಂಘನೆ ಆರೋಪ: ರಾಜ್ಯ ಕಾಂಗ್ರೆಸ್‌ ಮುಖಂಡರ ವಿರುದ್ಧದ ಚಾರ್ಜ್‌ಶೀಟ್‌ಗೆ ತಡೆ

ಹಂಡೀರು: ಪಾತ್ರೆಗಳ ಕಳವು ಪ್ರಕರಣ : ಓರ್ವ ಆರೋಪಿ ಬಂಧನ

ಹಂಡೀರು: ಪಾತ್ರೆಗಳ ಕಳವು ಪ್ರಕರಣ : ಓರ್ವ ಆರೋಪಿ ಬಂಧನ

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

2019ರ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌ ನಿವೃತ್ತಿ

ತೆಕ್ಕಟ್ಟೆ : ಶಾಲಾ ವಾಹನಕ್ಕೆ ಕಾರು ಢಿಕ್ಕಿ, ಓರ್ವನಿಗೆ ಗಂಭೀರ ಗಾಯ

ತೆಕ್ಕಟ್ಟೆ : ಶಾಲಾ ವಾಹನಕ್ಕೆ ಕಾರು ಢಿಕ್ಕಿ, ಓರ್ವನಿಗೆ ಗಂಭೀರ ಗಾಯ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

ವಿಂಬಲ್ಡನ್‌ ಟೆನಿಸ್‌: ಇಗಾ ಸ್ವಿಯಾಟೆಕ್‌, ಮರಿಯಾ ಸಕ್ಕರಿ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.