ಹಣ ದೋಚಲು “ವೀಡಿಯೋ ಕರೆ’ ತಂತ್ರ!

Team Udayavani, Feb 13, 2023, 7:15 AM IST

ಹಣ ದೋಚಲು “ವೀಡಿಯೋ ಕರೆ’ ತಂತ್ರ!

ಮುಂಗಳೂರು: ಸೈಬರ್‌ ವಂಚಕರು ಬೆದರಿಸಿ ಹಣ ದೋಚಲು “ವೀಡಿಯೋ ಕಾಲ್‌’ ತಂತ್ರವನ್ನು ಹೆಚ್ಚಾಗಿ ಅನುಸರಿಸುತ್ತಿದ್ದು ನಗರ, ಗ್ರಾಮಾಂತರವೆನ್ನದೆ ವಿದ್ಯಾರ್ಥಿಗಳ ಸಹಿತ ನಿತ್ಯ ನೂರಾರು ಮಂದಿ ಖೆಡ್ಡಾಕ್ಕೆ ಬೀಳುತ್ತಿದ್ದಾರೆ. ವಿದ್ಯಾವಂತರೇ ಹೆಚ್ಚಾಗಿರುವುದು ವಿಶೇಷ. ವಂಚನೆಗೆ ಒಳಗಾದ ಅನೇಕ ಮಂದಿ ಹಣ, ಇನ್ನು ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಮೊದಲು ಯುವತಿ, ಅನಂತರ ಪೊಲೀಸ್‌ !
ವೀಡಿಯೋ ಕಾಲ್‌ ಅಸ್ತ್ರದಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು ಮಹಿಳೆ ಮತ್ತು ಪೊಲೀಸ್‌ ತಂತ್ರ. ಮೊದಲು ಯುವತಿಯೋರ್ವಳು ಕರೆ ಮಾಡುತ್ತಾಳೆ. ರಾತ್ರಿ ವೇಳೆ ಹೆಚ್ಚು. ಕರೆ ಸ್ವೀಕರಿಸಿದರೆ ಮೋಹಕವಾಗಿ ಆಕರ್ಷಕವಾಗಿ ಮಾತನಾಡುತ್ತಾಳೆ. ಅನಂತರ ಕರೆ ಕಡಿತವಾಗುತ್ತದೆ. ಒಂದೆರಡು ದಿನದಲ್ಲಿ “ಪೊಲೀಸ್‌ ಅಧಿಕಾರಿ’ಯ ವಾಯ್ಸ ಕಾಲ್‌ ಬರುತ್ತದೆ. “ನಾನು ಡೆಲ್ಲಿ ಪೊಲೀಸ್‌ ಕ್ರೈಂ ವಿಭಾಗದ ಅಧಿಕಾರಿ ಮಾತನಾಡುತ್ತಿದ್ದೇನೆ. ನೀವು ಕೆಲವು ದಿನದ ಹಿಂದೆ ವೀಡಿಯೋ ಕಾಲ್‌ನಲ್ಲಿ ಯುವತಿಯೊಬ್ಬಳ ಜತೆ ಅಶ್ಲೀಲವಾಗಿ ಮಾತನಾಡಿದ್ದೀರಿ. ನೀವು ಅರೆನಗ್ನವಾಗಿದ್ದು ಅಸಭ್ಯವಾಗಿ ವರ್ತಿಸಿದ್ದೀರಿ. ಆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾಳೆ. ನಿಮ್ಮನ್ನು ಅರೆಸ್ಟ್‌ ಮಾಡದೇ ಇರಬೇಕಾದರೆ ಕೂಡಲೇ ನಾವು ಹೇಳುವ ಖಾತೆಗೆ ಹಣ ವರ್ಗಾಯಿಸಿ’ ಎನ್ನುತ್ತಾನೆ. ಇದನ್ನು ನಂಬಿ ಅನೇಕರು ಹಣ ವರ್ಗಾಯಿಸಿದ್ದಾರೆ.

ಡಿಲೀಟ್‌ ಮಾಡಲು ಕರೆ ಮಾಡಿ
ವಂಚಕರ ಇನ್ನೊಂದು ತಂತ್ರವೆಂದರೆ – ವೀಡಿಯೋ ಕರೆ ಮಾಡುವ ಅಪರಿಚಿತರು ಕೆಲವು ದಿನಗಳ ಅನಂತರ ಕರೆ ಮಾಡಿ “ನಿಮ್ಮ ಅಶ್ಲೀಲ ವೀಡಿಯೋ ಯೂ ಟ್ಯೂಬ್‌ಗ ಅಪ್‌ಲೋಡ್‌ ಆಗಿದೆ. ನಿಮ್ಮ ಮೇಲೆ 24 ಗಂಟೆಯೊಳಗೆ ಎಫ್ಐಆರ್‌ ದಾಖಲಾಗುತ್ತದೆ. ಅದನ್ನು ಡಿಲೀಟ್‌ ಮಾಡಬೇಕಾದರೆ ನಾವು ಕಳುಹಿಸುವ ನಂಬರ್‌ಗೆ ಕರೆ ಮಾಡಿ ಎನ್ನುತ್ತಾರೆ. ಕರೆ ಮಾಡಿದರೆ ಹಲವು ರೀತಿಯಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಲಾಗುತ್ತದೆ.

ಬೇಕಾದಂತೆ ಎಡಿಟ್‌
ಇನ್ನೊಂದು ರೀತಿಯಲ್ಲಿಯೂ ವಂಚಿಸಲಾಗುತ್ತಿದೆ. ವೀಡಿಯೋ ಕರೆ ಸ್ವೀಕರಿಸಿದವರ ಫೋಟೋ, ವೀಡಿಯೋವನ್ನು ಸೆರೆ ಹಿಡಿಯಲಾಗುತ್ತದೆ. ಅನಂತರ ಬೇಕಾದಂತೆ ಎಡಿಟ್‌ ಮಾಡಿ ಕಳುಹಿಸಿ ಬ್ಲ್ಯಾಕ್‌ವೆುàಲ್‌ ಮಾಡಲಾಗುತ್ತದೆ.

ಕಾಲ್‌ನಲ್ಲೇ ತಪ್ಪೊಪ್ಪಿಗೆ!
ಡ್ರಗ್ಸ್‌ ಹೆಸರಿನಲ್ಲಿ ಹೆದರಿಸಿ ಹಣ ಪೀಕಿಸುವುದು ಹೊಸದಾಗಿ ಸೇರಿರುವ ವಂಚನಾ ವಿಧಾನ. ಅಪರಿಚಿತನೋರ್ವ ಕರೆ ಮಾಡಿ “ನಾನು ಕೊರಿಯರ್‌ ಕಂಪೆನಿಯಿಂದ ಮಾತನಾಡುತ್ತಿದ್ದೇನೆ. ನಿಮ್ಮ ಹೆಸರು, ವಿಳಾಸಕ್ಕೆ ಡ್ರಗ್ಸ್‌ ಬಂದಿದೆ. ನೀವು ತಪ್ಪೊಪ್ಪಿಗೆ ಹೇಳಿಕೆಯನ್ನು ವೀಡಿಯೋ ಮಾಡಿ ಕಳುಹಿಸಿ ಎನ್ನುತ್ತಾರೆ. ಬಳಿಕ ಹಣಕ್ಕೆ ಬೇಡಿಕೆ ಇಡುತ್ತಾರೆ.

ಸೈಬರ್‌ ಭದ್ರತಾ ತಜ್ಞರು, ಪೊಲೀಸರ ಸಲಹೆ
– ಅಪರಿಚಿತರಿಂದ ವೀಡಿಯೋ ಕರೆ ಬಂದರೆ ಸ್ವೀಕರಿಸದಿರಿ
– ಸ್ವೀಕರಿಸಿದರೂ ನಿಮ್ಮ ಮುಖ ಅಥವಾ ದೇಹ ಕಾಣದಂತೆ ಮೊಬೈಲ್‌ ಹಿಡಿದಿರಬೇಕು
– ಕೆಮರಾ ಕವರ್‌ ಬಳಸಬೇಕು. ಫೋಟೋ ತೆಗೆಯುವಾಗ ಮಾತ್ರ ತೆರೆಯಬೇಕು
– ಯಾವುದೇ ರೀತಿಯಲ್ಲಿ ಬೆದರಿಕೆ ಹಾಕಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ

ಯುವ ಸಮುದಾಯವೇ ವೀಡಿಯೋ ಕರೆಗೆ ಹೆಚ್ಚಾಗಿ ಬಲಿಯಾಗುತ್ತಿದೆ. ಇದರಲ್ಲಿ ಲೈಂಗಿಕವಾಗಿ ಪ್ರಚೋದಿಸಿ ವಂಚಿಸುವುದೂ ಸೇರಿದೆ. ಕೆಲವರು ತಮಗೆ ಬಂದಿರುವುದು ಯಾವ ವಿಧದ ಕರೆ ಎಂದು ತಿಳಿಯದೆ ಸ್ವೀಕರಿಸುವುದರಿಂದಲೂ ಸುಲಭವಾಗಿ ವಂಚನೆಗೆ ಈಡಾಗುತ್ತಾರೆ.
– ಡಾ| ಅನಂತ ಪ್ರಭು ಜಿ.,
ಸೈಬರ್‌ ಭದ್ರತಾ ತಜ್ಞರು, ಮಂಗಳೂರು

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.