ಯಶ್‌ ಧುಲ್‌ ಸಾಧನೆಗೆ ಕೋಚ್‌ ಫುಲ್‌ ಖುಷ್‌!

Team Udayavani, Feb 8, 2022, 6:20 AM IST

ಯಶ್‌ ಧುಲ್‌ ಸಾಧನೆಗೆ ಕೋಚ್‌ ಫುಲ್‌ ಖುಷ್‌!

ಹೊಸದಿಲ್ಲಿ: ತಂಡದ ನಾಯಕನ ಯಶಸ್ಸು ಸಹಜ ವಾಗಿಯೇ ಆತನ ಕೋಚ್‌ಗೆ ಅತ್ಯಂತ ಖುಷಿ ಕೊಡುತ್ತದೆ. ಅದು ಕೋಚಿಂಗ್‌ ಬಾಳ್ವೆಯ ಸಾರ್ಥಕ ಹಾಗೂ ಸ್ಮರಣೀಯ ಕ್ಷಣಗಳು.

ಈಗಾ ಭಾರತದಲ್ಲಿ ಇಂಥದೊಂದು ಸಂಭ್ರ ಮದಲ್ಲಿ ತೇಲಾಡುತ್ತಿರುವವರು ರಾಜೇಶ್‌ ನಾಗರ್‌. ಇವರು ಅಂಡರ್‌-19 ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಯಶ್‌ ಧುಲ್‌ ಅವರ ಕೋಚ್‌.

“ಮುಜೇ ವಿರಾಟ್‌ ಭಯ್ಯಾ ಜೈಸೆ ಕ್ರಿಕೆಟರ್‌ ಬನಾನಾ ಹೈ.. (ನಾನು ವಿರಾಟ್‌ ಕೊಹ್ಲಿಯಂಥ ಕ್ರಿಕೆಟರ್‌ ಆಗಬೇಕು) ಎಂದು ಶಾಲಾ ದಿನಗಳಲ್ಲಿ ಯಶ್‌ ಧುಲ್‌ ಹೇಳುತ್ತಲೇ ಇರುತ್ತಿದ್ದ. ಅವನ ಅಭಿಲಾಷೆಯೀಗ ಈಡೇರುವ ಹಂತದಲ್ಲಿದೆ’ ಎಂದು ರಾಜೇಶ್‌ ನಾಗರ್‌ ಹೇಳುತ್ತಾರೆ.

“ಯಶ್‌ ಧುಲ್‌ ಭಾರತಕ್ಕಾಗಿ ಖಂಡಿತ ವಿಶ್ವಕಪ್‌ ಗೆದ್ದು ತರಬಲ್ಲರು ಎಂಬ ನಂಬಿಕೆ ನನ್ನಲ್ಲಿತ್ತು. ಅವನದ್ದು ಯಾವತ್ತೂ ಗೆಲುವಿನ ಹಸಿವು. ಆತನ ಈ ಯಶಸ್ಸು ಎಲ್ಲರಲ್ಲೂ ಹೆಮ್ಮೆ ಮೂಡಿಸಿದೆ. ಅವರ ಕೋಚ್‌ ಆಗಿರುವ ನನಗೂ ಇದು ಹೆಮ್ಮೆಯ ಕ್ಷಣ. ನಮ್ಮದು ಕೂಟದಲ್ಲೇ ಅತ್ಯಂತ ಬಲಿಷ್ಠ ತಂಡವಾಗಿತ್ತು’ ಎಂದು ನಾಗರ್‌ ಹೇಳಿದರು.

ಕೊಹ್ಲಿ ರೋಲ್‌ ಮಾಡೆಲ್‌
“ಯಶ್‌ಗೆ ವಿರಾಟ್‌ ಕೊಹ್ಲಿಯೇ ರೋಲ್‌ ಮಾಡೆಲ್‌. ಕೊಹ್ಲಿಯ ಆಕ್ರ ಮಣಕಾರಿ ಬ್ಯಾಟಿಂಗ್‌ ಶೈಲಿಯನ್ನು ಈತನಲ್ಲೂ ಕಾಣಬಹುದು. ಅಷ್ಟೇ ಉತ್ತಮ ಫೀಲ್ಡರ್‌ ಕೂಡ. ಆದರೆ ನಾಯಕತ್ವದಲ್ಲಿ ಧೋನಿಯ ಛಾಯೆ ಇದೆ. ಕಾಮ್‌ ಆ್ಯಂಡ್‌ ಕೂಲ್‌. ಆಟಗಾರರನ್ನು ಬೆಂಬಲಿಸುವಲ್ಲಿ, ಕೆಲವು ದಿಟ್ಟ ನಿರ್ಧಾರ ತೆಗೆದು ಕೊಳ್ಳುವುದರಲ್ಲಿ ಯಶ್‌ ಯಾವತ್ತೂ ಮುಂದು. ಇಂತಿಂಥ ಆಟಗಾರರು ತಂಡದಲ್ಲಿರಬೇಕು ಎಂದರೆ ಅವರು ಬೇಕೇ ಬೇಕು. ಇಲ್ಲವಾದರೆ ಜಗಳಕ್ಕೇ ನಿಲ್ಲುತ್ತಿದ್ದ. ಬಹುಶಃ ಈ ವಿಷಯದಲ್ಲಿ ಸೌರವ್‌ ಗಂಗೂಲಿಯೇ ಮಾದರಿ…’ ಎಂದರು.

“ಯಶ್‌ ಅತ್ಯುತ್ತಮ ಲೀಡರ್‌. ಓರ್ವ ಅತ್ಯುತ್ತಮ ಲೀಡರ್‌ ಯಾವತ್ತೂ ಉತ್ತಮ ನಾಯಕ ನಾಗಬಲ್ಲ. ಆದರೆ ಅತ್ಯುತ್ತಮ ನಾಯಕ ಯಾವತ್ತೂ ಉತ್ತಮ ಲೀಡರ್‌ ಆಗಲಾರ…’ ಎಂದು ಶಿಷ್ಯನ ಕುರಿತು ರಾಜೇಶ್‌ ನಾಗರ್‌ಅಭಿಪ್ರಾಯಪಡುತ್ತಾರೆ.

ಅಜ್ಜನೊಂದಿಗೆ ಆಗಮನ
“ಯಶ್‌ ಧುಲ್‌ 9 ವರ್ಷದ ಬಾಲಕನಾಗಿದ್ದಾಗ ಅಜ್ಜ ಆತನನ್ನು ಹೊಸದಿಲ್ಲಿಯ ದ್ವಾರಕಾದಲ್ಲಿರುವ ಬಾಲಭವನ್‌ ಸ್ಕೂಲ್‌ ಕ್ರಿಕೆಟ್‌ ಅಕಾಡೆಮಿಗೆ ಕರೆತಂದಿದ್ದರು. ಎಲ್ಲ ಬಾಲಕರಂತೆ ಇದ್ದ. ಆದರೆ ಆತನ ಬ್ಯಾಟಿಂಗ್‌ ಟೆಕ್ನಿಕ್‌ ಗಮನ ಸೆಳೆಯಿತು. ಎಷ್ಟೇ ಕಠಿನ ಎಸೆತಗಳನ್ನೂ ದಿಟ್ಟ ರೀತಿಯಲ್ಲಿ ಬಡಿದಟ್ಟುತ್ತಿದ್ದ. ಕೂಡಲೇ ಟೂರ್ನಿಯೊಂದರಲ್ಲಿ ಆಡುವ ಅವಕಾಶ ನೀಡಿದೆ. ಜತೆಗೆ, ಇಲ್ಲಿ ಉತ್ತಮ ಸ್ಕೋರ್‌ ದಾಖಲಿಸಿದರೆ ನಿನ್ನನ್ನು ಅಕಾಡೆಮಿಗೆ ಸೇರಿಸಿಕೊಳ್ಳುವೆ ಎಂದೆ. ಆತ ಶತಕವನ್ನೇ ಬಾರಿಸಿದ. ಮುಂದಿನದು ಇತಿಹಾಸ…’ ಎಂದು ಶಿಷ್ಯನ ಸಾಹಸವನ್ನು ನೆನಪಿಸಿಕೊಂಡರು ರಾಜೇಶ್‌ನಾಗರ್‌.

ಟಾಪ್ ನ್ಯೂಸ್

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.