20 ಕೋಟಿ ಖರ್ಚು: ಕನ್ನಡ ಶಾಲೆಗಳು ಪುನಶ್ಚೇತನವಾಗಲಿ;ಸರಕಾರಕ್ಕೆ ಅರಳಿ ನಾಗರಾಜ್

ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

Team Udayavani, Mar 6, 2022, 7:36 PM IST

1-dsads

ಕುಷ್ಟಗಿ: ಪ್ರಸಕ್ತ ಬಜೆಟ್ ನಲ್ಲಿ ಸರಕಾರ ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯ ಸಮ್ಮೇಳನಕ್ಕಾಗಿ 20 ಕೋಟಿ ರೂ. ಅನುದಾನ ಪ್ರಕಟಿಸಿದ್ದಾರೆ. ಈ 20 ಕೋಟಿಯನ್ನು ಮೂರು ದಿನಗಳ ಜಾತ್ರೆಗೆ ಖರ್ಚು ಮಾಡಿ, ಕನ್ನಡ ಶಾಲೆಗಳು ಅಲ್ಲೇ ಉಳಿದರೇ ನಾವು ಸಾಧಿಸಿರುವುದಾದರೂ ಏನು? ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಕಸಾಪ ಬೈಲಾ ತಿದ್ದುಪಡಿ ಸಮಿತಿ ಅಧ್ಯಕ್ಷ ಅರಳಿ ನಾಗರಾಜ್ ಪ್ರಶ್ನಿಸಿದರು.

ಭಾನುವಾರ, ಇಲ್ಲಿನ ಹಳೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಶಾಲೆಗಳು ಪುನಶ್ಚೇತನಕ್ಕಾಗಿ ಪ್ರತ್ಯೇಕ ಆ್ಯಪ್ ತಯಾರಿಸಲು ಉದ್ದೇಶಿಸಲಾಗಿದೆ.ಕನ್ನಡ ಸಾಹಿತ್ಯ ಮೌಲ್ಯಗಳನ್ನು ಉಳಿಸಲು ಕನ್ನಡ ಶಾಲೆಗಳ ಪುಶ್ಚೇತನವನ್ನು ಆದ್ಯತೆಯಾಗಿ ಕೆಲಸ ಮಾಡಬೇಕಿದೆ. ಚುನಾವಣೆ, ನೊಂದಣಿ ಆ್ಯಪ್ ತಯಾರಿಸಲು ಬೈಲಾ ತಿದ್ದುಪಡಿಯಂತೆ, ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಆ್ಯಪ್ ತಯಾರಿಸುವಂತೆ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಅವರಿಗೆ ಸಲಹೆ ನೀಡಿರುವೆ ಎಂದ ಅವರು ಜಿಲ್ಲಾ, ತಾಲೂಕಾ ಹಾಗೂ ಹೋಬಳಿ ಘಟಕಗಳ ಮೂಲಕ ಕನ್ನಡ ಶಾಲೆಗಳ ಪುನಶ್ಚೇತನದ ವಾಸ್ತವಿಕ ಸ್ಥಿತಿಗತಿಯನ್ನು ಆ್ಯಪ್ ಮೂಲಕ ಸಮೀಕ್ಷಿಸಿ, ವಿಸ್ತೃತ ವರದಿ ತಯಾರಿಸಿ ಸಕರ್ಾರಕ್ಕೆ ಸಲ್ಲಿಸಿ ಇಂತಿಷ್ಟು ಅವಧಿಯೊಳಗೆ ಅನುದಾನ ಬಿಡುಗಡೆ ಮಾಡಿ ಈ ಶಾಲೆಗಳ ಪುನಶ್ಚೇತನಕ್ಕೆ ಕ್ರಮಕೈಗೊಳ್ಳುವುದು ಮೊದಲಾದ್ಯತೆಯಾಗಿದೆ ಎಂದರು.

ಕನ್ನಡ ಶಾಲೆಗಳು ಪುನಶ್ಚೇತನಗೊಂಡು, ಅಲ್ಲಿ ಗುಣಮಟ್ಟದ ಶಿಕ್ಷಣ ಸಿಕ್ಕರೆ ಮಾತ್ರ ಸಾಹಿತಿಗಳ ಬರೆದ ಪುಸ್ತಕಗಳ ಓದುಗರು ಸಿಗಲು ಸಾದ್ಯವಿದೆ. ಓದುಗರ ಅಭಾವ ಸೃಷ್ಟಿಯಾದರೆ ಸಾಹಿತಿಗಳಿಗೆ ನಿರಾಸೆಯಾಗಲಿದೆ. ಮುಂದಿನ ದಿನಮಾನಗಳಲ್ಲಿ ಬರಹಗಾರರು ಬರಹ ನಿಲ್ಲಿಸುತ್ತಾರೆ. ಬರೆದು ಪುಸ್ತಕಗಳು ಖಚರ್ಾಗದೇ ಇದ್ದರೆ ಪ್ರಕಾಶಕರು ಮುಂದೆ ಬರುವುದಿಲ್ಲ. ಹಡರ್ೇಕರ ಮಂಜಪ್ಪ, ಫ.ಗು. ಹಳಕಟ್ಟಿ, ಬಸವಾದಿ ಶರಣರ ವಚನಗಳನ್ನು ಮುದ್ರಿಸಿದ್ದರಿಂದಲೇ ಓದುಗರನ್ನು ಸೃಷ್ಟಿಸಿತು ಬಸವಾದಿ ಶರಣರ ವಚನಗಳು ಇಂದಿಗೂ ಜೀವಂತವಾಗಲು ಸಾಧ್ಯವಾಯಿತು ಎಂದರು.

ಗೊತ್ತು ಗುರಿ ಇಲ್ಲದ ಗೊತ್ತುವಳಿಗಳು
ಅದೇಷ್ಟೋ ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡಿಸಿರುವ ಗೊತ್ತುವಳಿಗಳು, ಗೊತ್ತುವಳಿಗಳಾಗಿ ಉಳಿದಿದ್ದು ಅನುಷ್ಠಾನಕ್ಕೆ ಬಂದಿಲ್ಲ. ಸಾಹಿತ್ಯ ಪರಿಷತ್ ಗೆ ಹೆಚ್ಚು ಪರಿಚಯವಿದ್ದವರು ಹೇಳಲಿ ಈ ಬಗ್ಗೆ ಹೇಳಲಿ ನೋಡೋಣ? ಎಂದವರು, ಇಲ್ಲಿಯವರೆಗೂ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಮಂಡನೆಯಾಗಿರುವ ಗೊತ್ತುವಳಿಗಳು ಅನುಷ್ಠಾನಗೊಂಡಿರುವ ಗೊತ್ತುವಳಿಗಳನ್ನು ಪ್ರತ್ಯೇಕಿಸಿ, ಅನುಷ್ಠಾನಕ್ಕೆ ಯೋಗ್ಯವಿರುವ ಗೊತ್ತುವಳಿಗಳನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದರು.ನಾಡು, ನುಡಿ, ಜಲ, ಗಡಿ ಇತ್ಯಾಧಿ ವಿಷಯಗಳ ಗೊತ್ತುವಳಿಗಳು ಹೋಬಳಿ ಸಮ್ಮೇಳನದಿಂದ ಅಖಿಲ ಭಾರತ ಸಮ್ಮೇಳನದವರೆಗೆ ಗೊತ್ತುವಳಿಗಳು ಅನುಷ್ಠಾನಗೊಳಿಸಬೇಕಿದ್ದು ಇಲ್ಲವಾದರೆ ಗೊತ್ತುವಳಿಗಳಿಗೆ ಅರ್ಥವೇ ಇರುವುದಿಲ್ಲ ಎಂದರು.

ಗ್ರಂಥ ದಾಸೋಹ
ಪರಿಷ್ಕೃತ ಬೈಲಾದಲ್ಲಿ ಗ್ರಂಥ ದಾಸೋಹ ಕಲ್ಪನೆ ಹಿನ್ನೆಲೆಯಲ್ಲಿ ತಾಲೂಕಾ, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಯಾರದರೂ ಗ್ರಂಥ ದಾಸೋಹಕ್ಕೆ ನಿಧಿ ನೀಡಿದರೆ, ಗ್ರಂಥ ದಾನಿಗಳ ಭಾವಚಿತ್ರ ಮುದ್ರಿಸಿ ಪುಸ್ತಕ ಪ್ರಕಟಿಸಿ ಕಸಾಪ ಮೂಲಕ ಅರ್ಧ ಬೆಲೆಗೆ ಮಾರಾಟ ಮಾಡಲು ಸಾದ್ಯವಿದ್ದು ಓದುಗರಿಗೆ ಕಡಿಮೆ ಬೆಲೆಗೆ ಪುಸ್ತಕಗಳು ಲಭಿಸಲಿವೆ ಎಂದ ಅವರು ಖಾಸಗಿ ಪ್ರಕಾಶಕರಿಗೆ ಮೊರೆ ಹೋಗುವ ಪರಿಸ್ಥಿತಿ ಬರುವುದಿಲ್ಲ ಎಂದರು. ಕಸಾಪ ರಾಜ್ಯ ಘಟಕದ ಸಂಘ ಸಂಸ್ಥೆ ಪ್ರತಿನಿಧಿ ನಭಿಸಾಬ್ ಕುಷ್ಟಗಿ, ಮೋಹನಲಾಲ್ ಜೈನ್ ಮೊದಲಾದವರಿದ್ದರು.

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.