Koo ನಿಂದ ಶೇ.30 ಉದ್ಯೋಗ ಕಡಿತ
Team Udayavani, Apr 21, 2023, 7:49 AM IST
ನವದೆಹಲಿ: ಟ್ವಿಟರ್ನ ಪ್ರತಿಸ್ಪರ್ಧಿ ಬೆಂಗಳೂರು ಮೂಲದ ಕೂ ಸಂಸ್ಥೆ ಒಟ್ಟು ಉದ್ಯೋಗಿಗಳ ಪೈಕಿ ಶೇ.30 ಮಂದಿಯನ್ನು ತೆಗೆದುಹಾಕುವ ಬಗ್ಗೆ ತೀರ್ಮಾನ ಕೈಗೊಂಡಿದೆ ಬ್ಲೂಮ್ ಬರ್ಗ್ ಸಂಸ್ಥೆ ವರದಿ ಮಾಡಿದೆ. ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಇತ್ತೀಚಿನ ತಿಂಗಳಲ್ಲಿ 260 ಉದ್ಯೋಗಿಗಳನ್ನು ಸಂಸ್ಥೆ ವಜಾಗೊಳಿಸಿದೆ. ಕಳೆದ ವರ್ಷ ಕೂಡ ಕಂಪನಿ ಶೇ.15 ಮಂದಿಯನ್ನು ತೆಗೆದು ಹಾಕಿತ್ತು. ಟ್ವಿಟರ್ ಕೂಡ ಇತ್ತೀಚೆಗೆ 7 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಸದ್ಯಕ್ಕೆ ಸಂಸ್ಥೆಯಲ್ಲಿ ಕೇವಲ 1,500 ಉದ್ಯೋಗಿಗಳಿದ್ದಾರೆಂದು ಎಲಾನ್ಮಸ್ಕ್ ತಿಳಿಸಿದ್ದರು.