ಅಂಜನಾದ್ರಿ ಅಭಿವೃದ್ಧಿ ಕಾರ್ಯಕ್ಕೆ ಅಮಿತ್ ಶಾರಿಂದ ಚಾಲನೆ : ಸಚಿವ ಆನಂದ ಸಿಂಗ್

ಹಂಪಿ ಉತ್ಸವ ಚಾಲನೆಗೆ ಸಿಎಂ ಬೊಮ್ಮಾಯಿ

Team Udayavani, Jan 26, 2023, 5:08 PM IST

1-sadsadas

ಕೊಪ್ಪಳ: ಅಂಜನಾದ್ರಿಯ ಅಭಿವೃದ್ಧಿ ಕಾರ್ಯಗಳಿಗೆ ಫೆ.15 ರಂದು ಅಡಿಗಲ್ಲು ನೆರವೇರಿಸಲು ಸಿದ್ದತೆ ನಡೆಸಿದ್ದು, ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿದ್ದೇವೆ. ಸಿಎಂ ದಿನಾಂಕ ಅಧೀಕೃತ ಮಾಡಬೇಕಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಕೊಡಿಸಬೇಕೆನ್ನುವ ಚಿಂತನೆಯು ಇದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ ವಿಚಾರ ನನಗೆ ಗೊತ್ತಿಲ್ಲ. ಅವರು ದೊಡ್ಡ ನಾಯಕರು. ಅಮಿತ್ ಶಾ ಅವರು ಬರುವ ಸಾಧ್ಯತೆಯಿದೆ. ಸಿಎಂ ಅವರು ಈ ಕುರಿತು ಹೇಳಿದ್ದಾರೆ.ಒಂದು ವೇಳೆ ಶಾ ಅವರು ಬರದಿದ್ದರೆ ಸಿಎಂ ಅವರಿಂದ ಚಾಲನೆ ಕೊಡಿಸಲಿದ್ದೇವೆ. ಅಂಜಿನಾದ್ರಿ ಟೆಂಡರ್ ಕರೆಯುವ ಜೊತೆಗೆ ರೂಪ್ ವೇ, ಪ್ರದಕ್ಷಣ ಪಥ, ಶೌಚಾಲಯ, ಪಾರ್ಕಿಂಗ್ ಸೇರಿ ಇತರೆ ಕಾರ್ಯಗಳಿಗೆ ಚಾಲನೆ ನೀಡಲಿದ್ದೇವೆ. ನಂದಿ ಬೆಟ್ಟಕ್ಕೂ ರೂಪ್ ವೇ ನಿರ್ಮಾಣಕ್ಕೂ ಒಪ್ಪಂದ ಆಗಿದೆ. ಅದಕ್ಕೂ ಕೇಂದ್ರ ನಾಯಕರ ಆಹ್ವಾನಕ್ಕೆ ಸಿಎಂ ಅವರ ಗಮನಕ್ಕೆ ತಂದಿದ್ದೇವೆ ಎಂದರು.

ಅಂಜನಾದ್ರಿಗೆ ಕೇಬಲ್ ಕಾರ್ ಕುರಿತಂತೆ ಚರ್ಚೆಯಾಗಿದೆ. ಇದೊಂದು ಒಳ್ಳೆಯ ಯೋಚನೆ. ನಿತಿನ್ ಗಡ್ಕರಿ ಅವರು ದೂರದೃಷ್ಟಿಯ ನಾಯಕರಾಗಿದ್ದಾರೆ. ಎಲ್ಲವೂ ಹೇಳಿದಾಕ್ಷಣ ಮಾಡಲು ಆಗಲ್ಲ. ನುರಿತ ತಜ್ಞರನ್ನು ಆಹ್ವಾನಿಸಿ ಕೇಬಲ್ ಕಾರ್ ನಿರ್ಮಾಣದ ಕುರಿತು ಅಧ್ಯಯನ ನಡೆಸಲಿದ್ದೇವೆ. ಈ ಕೇಬಲ್ ಕಾರ್ ಅನ್ನು ಮುಂದೆ ಹಂಪಿಗೆ ಸಂಪರ್ಕವನ್ನ ಕಲ್ಪಿಸುವಂತೆಯೂ ಸಲಹೆ ನೀಡಿದ್ದಾರೆ. ಪ್ರಾಚ್ಯ ವಸ್ತು ಇಲಾಖೆಯು ಇದಕ್ಕೆಲ್ಲಾ ಅನುಮತಿ ಕೊಡಬೇಕಾಗುತ್ತದೆ. ಇದೆಲ್ಲ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಂಪಿ ಗೋಪುರದ ಬಳಿ ಬೆಂಕಿಗೆ ಆಹುತಿಯಾದ ೯೦ ಸುಟ್ಟ ಮನೆಗಳಿಗೆ ಪುನರ್‌ವಸತಿ ಕಲ್ಪಿಸಲು ಚಿಂತನೆ ನಡೆದಿದೆ. ಕೇಂದ್ರ, ರಾಜ್ಯದ ಸಹಯೋಗದಲ್ಲಿ ಪುನರ್ ವಸತಿ ವೆಚ್ಚ ಭರಿಸುವ ಚಿಂತನೆಯಿದೆ. ಆದರೆ ನಿಖರವಾಗಿ ಏಷ್ಟೆನ್ನುವುದು ಈಗಲೇ ಹೇಳಲು ಸಾಧ್ಯವಿಲ್ಲ. ಜನತಾ ಪ್ಲಾಟ್‌ನಿಂದ ನಿಂತು ನೋಡಿದರೆ ಹಂಪಿ ಗೋಪುರ ನೋಡಲು ಮನಮೋಹಕ ಎಂದೆನಿಸುತ್ತದೆ. ಹಾಗಾಗಿ ಅಲ್ಲಿನ ೯೦ ಕುಟುಂಬಗಳು ಬೇರೆಡೆ ಪುನರ್ ವಸತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಪ್ರಾಚ್ಯವಸ್ತು ಇಲಾಖೆ ಒಪ್ಪಿದೆ. ವಿಶೇಷ ಜೋನ್‌ನಲ್ಲಿ ಜಮೀನು ಖರೀದಿಸಿ ಆ ಕುಟುಂಬಕ್ಕೆ ನಿವೇಶನ ಕೊಡುವ ಯೋಜನೆಯಿದೆ.ಹಂಪಿಗೆ ಕೇಬಲ್ ಕಾರ್ ನಿರ್ಮಾಣಕ್ಕೂ ಮೊದಲು ಪ್ರಾಚ್ಯವಸ್ತು ಇಲಾಖೆ ಗಮನಕ್ಕೆ ತರಲು ಅವರು ಹೇಳಿದ್ದಾರೆ ಎಂದರು.

ಮಾರ್ಚ್ ಅಂತ್ಯಕ್ಕೆ ಚುನಾವಣಾ ಅಧಿಸೂಚನೆ ಸಾಧ್ಯತೆ
ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ವಿಧಾನ ಸಭಾ ಚುನಾವಣಾ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಅದರೊಳಗೆ ಎಲ್ಲ ಕಾಮಗಾರಿಗಳಿಗೆ ಚಾಲನೆ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಹಂಪಿ ಉತ್ಸವ ಚಾಲನೆಗೆ ಸಿಎಂ ಬೊಮ್ಮಾಯಿ
ಹಂಪಿ ಉತ್ಸವ ಸಂಭ್ರಮದಿಂದ ಆಚರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜ.27 ರಂದು ಉತ್ಸವಕ್ಕೆ ಚಾಲನೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ನಾಲ್ಕು ಮುಖ್ಯ ವೇದಿಕೆಯಲ್ಲಿ ಉತ್ಸವವು ಸಂಭ್ರಮ ಸಡಗರದಿಂದ ನಡೆಯಲಿದೆ. ರಾಜ್ಯದಲ್ಲಿನ ಉತ್ಸವಗಳನ್ನು ಗಮನಿಸಿದ್ದೇನೆ. ಬೇರೆ ಉತ್ಸವಕ್ಕೂ ನಮ್ಮ ಉತ್ಸವಗಳಿಗೂ ಕೆಲ ವ್ಯತ್ಯಾಸಗಳಿವೆ. ಹಂಪಿ ಉತ್ಸವ ಅತ್ಯಂತ ವೈಭವ ಮಾಡಲು ನಿರ್ಧರಿಸಿದ್ದೇವೆ ಎಂದರು.

ಹಂಪಿಯಲ್ಲಿ ಸ್ಥಳದ ಕೊರತೆಯಿದೆ. ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು ನೋಡಿದ್ದೇವೆ. ಹಂಪಿಯಲ್ಲಿ ಎದುರು ಬಸವಣ್ಣ, ಗಾಯಿತ್ರಿ ಪೀಠ, ಸಾಸಿವೆಕಾಳು ಗಣಪತಿ, ಆನೆಸಾಲು ಒಂಟೆ ಸಾಲು ಸ್ಥಳದಲ್ಲಿ ಉತ್ಸವ ಆಚರಣೆ ಮಾಡಲು ಮುಂದಾಗಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಒಂಬತ್ತು ದಿನ ನಡೆಯಲಿದೆ ಎಂದರು.

ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ
ಉತ್ಸವಕ್ಕೆ ಸಿನಿಮಾ ತಾರೆಗಳನ್ನು ಆಹ್ವಾನಿಸಿ ಆಕರ್ಷಣೆ ಮಾಡಲು ಮುಂದಾಗಿಲ್ಲ. ಸ್ಥಳೀಯ ಕಲಾವಿದರನ್ನು ಆಹ್ವಾನಿಸಿ ಅವರಿಗೆ ವೇದಿಕೆ ನೀಡಿ ಜನರ ಆಕರ್ಷಣೆ ಮಾಡಲು ಮುಂದಾಗಿದೆ. ನಮ್ಮ ಸಂಸ್ಕೃತಿ, ಕಲೆ, ಕಲಾವಿದರಿಗೆ ಅವಕಾಶವನ್ನು ನೀಡಿ ಈ ಬಾರಿಯ ಉತ್ಸವದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದೇವೆ. ಗಾಯಕರಾದ ಅರ್ಜುನ್ ಜನ್ಯಾ, ವಿಜಯ ಪ್ರಕಾಶ ಸೇರಿ ನಾಲ್ವರು ಮಾತ್ರ ಆಹ್ವಾನ ಮಾಡಿದ್ದೇವೆ. ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ದೀಪಾಲಂಕಾರ ಮಾಡಿದ್ದೇವೆ.

ನಾಯಕ ಎಂ.ಪಿ.ಪ್ರಕಾಶ ಅವರ ಶ್ರಮದಿಂದ ಪುರಂದರ ದಾಸರ ಸಣ್ಣ ಮಂಟಪದಲ್ಲಿ ಮೊದಲು ಹಂಪಿ ಉತ್ಸವವು ನಡೆಯುತ್ತಿದ್ದವು. ಈಗ ದೊಡ್ಡದಾಗಿ ಮಾಡಲಾಗುತ್ತಿದೆ. ನವರಾತ್ರಿ ಮೈಸೂರು ದಸರಾ ನಡೆದ ಬಳಿಕ ಹಂಪಿ ಉತ್ಸವ ಮಾಡಬೇಕು ಎನ್ನುವ ಅಭಿಪ್ರಾಯ ಬಂದಿದೆ. ಮೈಸೂರು ನೋಡಲು ಬರುವ ಜನರು ನಂತರದಲ್ಲಿ ಹಂಪಿಗೆ ಬರುತ್ತಾರೆ. ಇದರಿಂದ ಒಂದು ಸರ್ಕ್ಯೂಟ್ ಆಗಲಿದೆ. ಈ ಕುರಿತಂತೆಯೂ ಚರ್ಚೆ ಮಾಡಲಾಗುತ್ತಿದೆ ಎಂದರು

ಆನೆಗೊಂದಿ, ಕೊಪ್ಪಳ ರಜತ ಮಹೋತ್ಸವ ಮಾಡ್ತೇವೆ
ಕೊಪ್ಪಳ: ಕೊಪ್ಪಳ ರಜತ ಮಹೋತ್ಸವ ಹಾಗೂ ಆನೆಗೊಂದಿ ಉತ್ಸವವನ್ನು ನಾವು ಮಾಡಲಿದ್ದೇವೆ. ಮೊದಲು ಕೊಪ್ಪಳ ರಜತ ಮಹೋತ್ಸವ ಮಾಡಲಿದ್ದು, ನನ್ನ ಪ್ರವಾಸೋಧ್ಯಮ ಇಲಾಖೆಯಿಂದ 50 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿ ಆದೇಶವನ್ನು ತಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.

ಕೊಪ್ಪಳ ರಜತ ಮಹೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನಕ್ಕೆ ಮನವಿ ಮಾಡಿದ್ದೇನೆ. ಜಿಲ್ಲೆಯ ಜನಪ್ರತಿನಿಧಿಗಳು ಯಾವ ದಿನಾಂಕ ಎಂದು ನಿಗಧಿ ಮಾಡಲಿದ್ದಾರೆ. ಆನೆಗುಂದಿ ಉತ್ಸವಕ್ಕೆ 1 ಕೋಟಿ ರೂ. ನನ್ನ ಇಲಾಖೆಯಿಂದ ಬಿಡುಗಡೆ ಮಾಡಲಿದ್ದೇನೆ. ವಿಜಯನಗರ ಮೂಲ ರಾಜಧಾನಿ ಆನೆಗುಂದಿಯಾಗಿದ್ದು, ಅದರ ಉತ್ಸವವೂ ನಡೆಯಲಿದೆ ಎಂದರು.

ಟಾಪ್ ನ್ಯೂಸ್

arrest 3

ಹೆತ್ತವರನ್ನೇ ಹತ್ಯೆಗೈದಿದ್ದ 15ರ ಬಾಲಕಿ ಖಾಕಿ ಬಲೆಗೆ

1-asdssa-dsa

ತೆನೆ ಹೊತ್ತ ಹೆಚ್.ಆರ್.ಚನ್ನಕೇಶವ ; ಗಂಗಾವತಿಯಿಂದ ಕಣಕ್ಕೆ

1-fsadsdsd

ಉಪನಾಮ ವಿವಾದ:ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರ ಹಾಕಿದ ಲಲಿತ್ ಮೋದಿ

tdy-19

ಉಳ್ಳಾಲ: ಹೆಜ್ಜೇನು ದಾಳಿಗೆ ಬಾವಿಯಲ್ಲಿ ಅಡಗಿ ಕುಳಿತ 79 ರ ವೃದ್ಧ

TDY-18

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ

Arjun Tendulkar To Debut For Mumbai Indians In IPL 2023?

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

1-asd-adas-d

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

2–gadaga

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

ಶಿಕ್ಷಕರ ವರ್ಗಾವಣೆ ಚೆಂಡು ಚುನಾವಣ ಆಯೋಗದ ಅಂಗಣಕ್ಕೆ

ಶಿಕ್ಷಕರ ವರ್ಗಾವಣೆ ಚೆಂಡು ಚುನಾವಣ ಆಯೋಗದ ಅಂಗಣಕ್ಕೆ

ಚುನಾವಣ ಆಯೋಗವೇ “ಸೂಪರ್‌ ಪವರ್‌’; ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿ

ಚುನಾವಣ ಆಯೋಗವೇ “ಸೂಪರ್‌ ಪವರ್‌’; ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1-csa-dsasad

ಮಿಸ್ಟರ್ ಹಾಲಪ್ಪ… ಅಭಿವೃದ್ಧಿ ಸಂಬಂಧ ಬಹಿರಂಗ ಚರ್ಚೆ; ಬೇಳೂರು ಸವಾಲು

arrest 3

ಹೆತ್ತವರನ್ನೇ ಹತ್ಯೆಗೈದಿದ್ದ 15ರ ಬಾಲಕಿ ಖಾಕಿ ಬಲೆಗೆ

madhu

ತಮಿಳಿನತ್ತ ಮಧು ಗುರುಸ್ವಾಮಿ; ಮಫ್ತಿ ರೀಮೇಕ್‌ ನಲ್ಲಿ ನಟನೆ

1-asdssa-dsa

ತೆನೆ ಹೊತ್ತ ಹೆಚ್.ಆರ್.ಚನ್ನಕೇಶವ ; ಗಂಗಾವತಿಯಿಂದ ಕಣಕ್ಕೆ

ಬೆಳ್ತಂಗಡಿ: ಸವಣಾಲು ಬಳಿ ಎರಡು ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಸಾವು

ಬೆಳ್ತಂಗಡಿ: ಸವಣಾಲು ಬಳಿ ಎರಡು ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಸಾವು