ಕೋವಿಡ್ ಪರೀಕ್ಷಾ ಕಿಟ್ ದುರ್ಬಳಕೆ : ಔಷಧ ಮಾರಾಟಗಾರರಿಗೆ ಸರಕಾರದ ಎಚ್ಚರಿಕೆ
Team Udayavani, Jan 17, 2022, 4:21 PM IST
ಬೆಂಗಳೂರು : ಕೋವಿಡ್ ಪರೀಕ್ಷೆಗೆ ಬಳಸುವ ಆರ್‌ಟಿಪಿಸಿಆರ್, ರ‍್ಯಾಟ್ ಹಾಗೂ ಹೋಮ್ ಸೇಫ್ ಕಿಟ್‌ಗಳ ದುರ್ಬಳಕೆ ಬಗ್ಗೆ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಈ ಸಂಬಂಧ ರಾಜ್ಯದ ಎಲ್ಲ ಔಷಧ ಮಾರಾಟಗಾರರಿಗೆ ಎಚ್ಚರಿಕೆಯ ಸುತ್ತೋಲೆ ನೀಡಿದೆ.
ಔಷಧ ಮಳಿಗೆಗಳಲ್ಲಿ ಕೋವಿಡ್ ಪರೀಕ್ಷಾ ಕಿಟ್ ಮಾರಾಟ ಮಾಡಲಾಗುತ್ತಿದೆ. ಆದರೆ ಇದನ್ನು ಯಾರಿಗೆ ಮಾರಾಟ ಮಾಡಿದ್ದೇವೆ ? ಆ ಪೈಕಿ ಎಷ್ಟು ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ? ಸುರಕ್ಷಿತಾ ಕ್ರಮಗಳ ಪಾಲನೆ ಏನು ? ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸುತ್ತಿಲ್ಲ. ಇದರಿಂದ ಕೋವಿಡ್ ಅಂಕೆ-ಸಂಖ್ಯೆ ನಿಖರವಾಗಿ ಲಭ್ಯವಾಗುತ್ತಿಲ್ಲ.
ಈ ಸಂಬಂಧ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ. ಇನ್ನು ಮುಂದೆ ಇಂಥ ಕಿಟ್‌ಗಳನ್ನು ಮಾರಾಟ ಮಾಡುವ ಮಳಿಗೆಗಳು ಗ್ರಾಹಕರ ವಿಳಾಸ ಹಾಗೂ ಪರೀಕ್ಷಾ ವರದಿಯನ್ನು ಸಮೀಪದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಸರಕಾರ ಆರಂಭಿಸಿರುವ ಆಪ್‌ಗೆ ಸಲ್ಲಿಕೆ ಮಾಡಬೇಕು. ನಿಗದಿತ ನಮೂನೆಯಲ್ಲಿ ವಿವರಗಳನ್ನು ದಾಖಲಿಸಿ ಪ್ರತಿ ದಿನ ಸರಕಾರಕ್ಕೆ ಸಲ್ಲಿಸಬೇಕು.
ಈ ನಿಯಮವನ್ನು ಮೀರುವ ಔಷಧ ಮಳಿಗೆಗಳು ಹಾಗೂ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ
ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ
ಪಿಎಸ್ಐ ನೇಮಕಾತಿ ಅಕ್ರಮ : ಮತ್ತಿಬ್ಬರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ವಿಜಯಪುರ : ಸಿಡಿಲಿಗೆ 14 ಕುರಿಗಳು ಸಾವು : ಸೂಕ್ತ ಪರಿಹಾರಕ್ಕೆ ಒತ್ತಾಯ