ದೇಶದಲ್ಲಿ ಕೋಟಿ ಕ್ರೆಡಿಟ್‌ ಕಾರ್ಡ್‌ಗಳು


Team Udayavani, Jun 28, 2023, 7:44 AM IST

CREDIT CARDS

ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ ಫೇಸ್‌(ಯುಪಿಐ) ಮೂಲಕ ವಹಿವಾಟು, ವ್ಯವಹಾರ ಹೆಚ್ಚುತ್ತಿರುವ ಜತೆ ಜತೆಗೆ ಕ್ರೆಡಿಟ್‌ ಕಾರ್ಡ್‌ಗಳ ಸಂಖ್ಯೆ ಯಲ್ಲೂ ಏರಿಕೆ ಕಾಣುತ್ತಿದ್ದು, ಇದು ಈ ವರ್ಷ 10 ಕೋಟಿಯ ಗಡಿಯನ್ನು ಮೀರುವ ನಿರೀಕ್ಷೆಯಿದೆ. ಈ ವರ್ಷದ ಎಪ್ರಿಲ್‌ ವೇಳೆಗೆ ದೇಶದಲ್ಲಿ 8.65 ಕೋಟಿ ಕ್ರೆಡಿಟ್‌ ಕಾರ್ಡ್‌ಗಳು ಸಕ್ರಿಯವಾಗಿದ್ದು , ಇದು ಈವರೆಗಿನ ಗರಿಷ್ಠ ದಾಖಲೆಯಾಗಿದೆ. ಇನ್ನು ಆರ್‌ಬಿಐ ಅಂಕಿಅಂಶಗಳನ್ನು ಉಲ್ಲೇಖೀಸಿ ಬ್ಯಾಂಕ್‌ ಬಜಾರ್‌ ಪ್ರಕಟಿಸಿರುವ ವರದಿ ಪ್ರಕಾರ 2022ರ ಎಪ್ರಿಲ್‌ನಲ್ಲಿ ದೇಶದಲ್ಲಿ 7.5 ಕೋಟಿ ಕ್ರೆಡಿಟ್‌ ಕಾರ್ಡ್‌ಗಳು ಬಳಕೆ ಯಲ್ಲಿದ್ದರೆ ಒಂದು ವರ್ಷದ ಅವಧಿ ಯಲ್ಲಿ ಶೇ.15ರಷ್ಟು ಹೆಚ್ಚಳ ಕಂಡಿದೆ.

2023ರ ಎಪ್ರಿಲ್‌ನಲ್ಲಿ ಡೆಬಿಟ್‌ ಕಾರ್ಡ್‌ಗಳಿಗಿಂತ ಕ್ರೆಡಿಟ್‌ ಕಾರ್ಡ್‌ಗಳ ಬಳಕೆ ಹೆಚ್ಚಾಗಿದೆ. 2022ರ ಎಪ್ರಿಲ್‌ನಲ್ಲಿ 22 ಕೋಟಿ ವಹಿವಾಟು ನಡೆದಿದ್ದವು. 2023ರ ಎಪ್ರಿಲ್‌ನಲ್ಲಿ 25 ಕೋಟಿ ವಹಿವಾಟುಗಳು ನಡೆದಿದೆ. ಶಾಪಿಂಗ್‌, ಪ್ರಯಾಣ, ಎಲೆಕ್ಟ್ರಾನಿಕ್‌ ವಸ್ತುಗಳ ಖರೀದಿ ವೇಳೆ ಗ್ರಾಹಕರು ಹೆಚ್ಚಾಗಿ ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

ಆಕ್ಸಿಸ್‌ ಬ್ಯಾಂಕ್‌ನ ಬಳಕೆದಾರರು ಅಧಿಕ
ಮಾರುಕಟ್ಟೆ ಪಾಲುದಾರಿಕೆಯಲ್ಲಿ 2023ರ ಎಪ್ರಿಲ್‌ನಲ್ಲಿ ಆಕ್ಸಿಸ್‌ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ಹೆಚ್ಚಾಗಿದ್ದಾರೆ. ಆಕ್ಸಿಸ್‌ ಬ್ಯಾಂಕ್‌ ಸಿಟಿ ಬ್ಯಾಂಕ್‌ ಅನ್ನು ಸ್ವಾಧೀನಕ್ಕೆ ಪಡೆದುಕೊಂಡ ಅನಂತರ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ಹೆಚ್ಚಾಗಿದ್ದಾರೆ. ಈಗಾಗಲೇ ಬಳಕೆಯಲ್ಲಿರುವ ಕ್ರೆಡಿಟ್‌ ಕಾರ್ಡ್‌ಗಳ ಪೈಕಿ ಎಚ್‌ಡಿಎಫ್ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ ಹಾಗೂ ಆಕ್ಸಿಸ್‌ ಬ್ಯಾಂಕ್‌ ಶೇ.71ರಷ್ಟು ಪಾಲನ್ನು ಹೊಂದಿದೆ. ಎಪ್ರಿಲ್‌ ಕಾರ್ಡ್‌ಗಳ ಮೂಲಕ ನಡೆಸಿದ ಪ್ರತಿಯೊಂದೂ ವಹಿವಾಟಿನಲ್ಲಿ ನಡೆಸಲಾದ ವ್ಯವಹಾರದ ಸರಾಸರಿ ಮೊತ್ತ 5,120ರೂ. ಗಳಾಗಿತ್ತು.

ಡೆಬಿಟ್‌ ಕಾರ್ಡ್‌ ಸಂಖ್ಯೆಹೆಚ್ಚಳ: ವ್ಯವಹಾರ ಕುಸಿತ

ಈ ವರ್ಷದ ಎಪ್ರಿಲ್‌ ವೇಳೆಗೆ ದೇಶದಲ್ಲಿ ಒಟ್ಟು 4.6 ಕೋಟಿ ಡೆಬಿಟ್‌ ಕಾರ್ಡ್‌ಗಳು ಹೊಸದಾಗಿ ಸೇರ್ಪಡೆಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಬಳಕೆಯಲ್ಲಿರುವ ಡೆಬಿಟ್‌ ಕಾರ್ಡ್‌ಗಳ ಸಂಖ್ಯೆ 96 ಕೋಟಿಗಳನ್ನು ತಲುಪಿದೆ. ಆದರೆ ಕಳೆದೊಂದು ವರ್ಷದ ಅವಧಿಯಲ್ಲಿ ಡೆಬಿಟ್‌ ಕಾರ್ಡ್‌ನ ಮೂಲಕ ನಡೆಸಿದ ಒಟ್ಟಾರೆ ವ್ಯವಹಾರದ ಮೊತ್ತ 55,000 ಕೋ.ರೂ.ಗಳಷ್ಟಾಗಿದ್ದು ಶೇ.16ರಷ್ಟು ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಡೆಬಿಟ್‌ ಕಾರ್ಡ್‌ ವಹಿವಾಟು 23 ಕೋಟಿಗಳಾಗಿದ್ದು ಶೇ.30ರಷ್ಟು ಕಡಿಮೆಯಾಗಿತ್ತು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.