
ಡೈಲಿ ಡೋಸ್: ಬಸ್‌ನೊಳಗೆ ಹೋಗಿ ಕುಳಿತುಕೊಳ್ಳಲು ಬಾಗಿಲು ಓಕೆ, ಕಿಟಕಿಗೇಕೆ ಟೀಕೆ?
Team Udayavani, Mar 14, 2023, 7:33 AM IST

ಊರಿಗೆ ಇರುವ ಒಂದೇ ಬಸ್ ನಲ್ಲಿ ಕುಳಿತು ಹೋಗಲಿಕ್ಕೆ ಏನು ಮಾಡಬೇಕು? ಬಸ್ಸಿನ ಸಮಯಕ್ಕಿಂತ ಅರ್ಧಗಂಟೆ ಮೊದಲೇ ಹೋಗಿ ಕಾಯಬೇಕು.”ಅರ್ಧ ಗಂಟೆ ಸಾಕೇ? ಇರು ವುದು 30 ಸೀಟುಗಳು. ಜನ ಹೆಚ್ಚಿದ್ದರೆ? ಕನಿಷ್ಠ ಒಂದು ಗಂಟೆ ಮೊದಲು ಬೇಡವೇ?
ಒಂದು ಗಂಟೆ ಮೊದಲೇ ನಿಲ್ದಾಣಕ್ಕೆ ಆತ ಬಂದ. ಬಸ್ಸು ಬಂದೇ ಇಲ್ಲ, ನಿಲ್ದಾಣದ ತುಂಬಾ ಜನ.
ಒಬ್ಬನಿಗೆ ಕೇಳಿದರೆ, ನಿಮಗಿಂತ ಐದು ನಿಮಿಷ ಮೊದಲು ಬಂದೆ ಎಂದ. ಮತ್ತೂಬ್ಬ ಅರ್ಧ ಗಂಟೆ ಎಂದ. ಅಷ್ಟರಲ್ಲಿ ಬಸ್ಸು ಬಂದೇ ಬಿಟ್ಟಿತು. ನಿರ್ವಾಹಕ ಬಾಗಿಲು ತೆಗೆದನಷ್ಟೇ. ಎಲ್ಲರೂ ಒಳನುಗ್ಗ ತೊಡಗಿದರು.
ಹಿಂದೆ ಇದ್ದ ಒಬ್ಬ, “ರೀ, ನಾನು ಎರಡು ಗಂಟೆ ಮೊದಲೇ ಬಂದಿದ್ದೇನೆ. ಅಲ್ಲಿ ನೋಡಿ, ಈಗ ಬಂದವ ಹೇಗೆ ನುಗ್ತಾ ಇದ್ದಾನೆ’ ಎಂದು ಬೊಬ್ಬೆ ಹಾಕಿದ. ಮತ್ತಷ್ಟು ಜನ ಧ್ವನಿ ಸೇರಿಸಿದ್ದಷ್ಟೇ ಅಲ್ಲ, ಅವನನ್ನು ಹಿಡಿದೆಳೆಯತೊಡಗಿದರು.
ಪರಸ್ಪರ ಗದ್ದಲದ ಗೂಡಾಯಿತು. ಒಳನುಗ್ಗಲು ಯತ್ನಿಸಿದವನೂ “ನೋಡಿ, ನೀವೂ ಹೋಗಿ, ನನಗೆ ಹೋಗಬೇಡಿ’ ಎನ್ನೋದಿಕ್ಕೆ ನೀವ್ಯಾರು ಎಂದು ಅಬ್ಬರಿಸಿದ. ಅದಕ್ಕೆ ಮತ್ತೂಬ್ಬ “ನೀನು ಈಗ ಬಂದವ, ನಮ್ಮ ಹಿಂದೆ ಬಾ’ ಎಂದ. ಅದಕ್ಕೆ ಆತ “ಎಷ್ಟು ಹೊತ್ತಿಗೆ ಬಂದಿದ್ದೀರಿ ಅನ್ನೋದು ಮುಖ್ಯವಲ್ಲ, ಸೀಟು ಹಿಡಿಯೋದಷ್ಟೇ ಮುಖ್ಯ” ಎಂದು ಮತ್ತೆ ನುಗ್ಗಿದ.
ಅಂತೂ ನೂಕು ನುಗ್ಗಲು ದಾಟಿ ಒಳ ನುಗ್ಗಿ ದಂಗಾದ. ಎಲ್ಲ ಆಸನಗಳೂ ಭರ್ತಿಯಾಗಿವೆ ! ಬಸ್ಸಿನ ಒಳನುಗ್ಗಲಿಕ್ಕೆ ಬಾಗಿಲೇ ಏಕೆ ಬೇಕು? ಕಿಟಕಿ ಇಲ್ಲವೇ? ಎಂದು ಸೀಟಿನಲ್ಲಿ ಕುಳಿತವನೊಬ್ಬ ಕೇಳಿದ.
ಅಂದ ಹಾಗೆ, ಮುಂಬರುವ ವಿಧಾನಸಭೆ ಚುನಾ ವಣೆಗೆ ಟಿಕೆಟ್ ಆಕಾಂಕ್ಷಿಗಳ ಹೋರಾಟ ಪಕ್ಷಗಳಲ್ಲಿ ಸಿಕ್ಕಾಪಟ್ಟೆ ನಡೆಯುತ್ತಿದೆ. ನಮಗೊಂದು, ನಮ್ಮವರಿಗೆ ಇನ್ನೊಂದು ಎನ್ನುವ ಹಾಗೆ. ಬಾಗಿಲ ಮೂಲಕ ಯಾರು? ಕಿಟಕಿ ಮೂಲಕ ಇನ್ಯಾರು? ಕೆಲವೇ ದಿನಗಳಲ್ಲಿ ಸಿನೆಮಾ ಬಿಡುಗಡೆ !
~ಡಾ. ಗಣಪತಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?