ರಾಜ್ಯದಲ್ಲಿ ಇಂದೂ 40 ಸಾವಿರ ದಾಟಿದ ಕೋವಿಡ್ ಕೇಸ್ : 21 ಸಾವು
Team Udayavani, Jan 19, 2022, 7:10 PM IST
ಬೆಂಗಳೂರು : ಕರ್ನಾಟಕದಲ್ಲಿ ಇಂದು ಹೊಸ ಕೋವಿಡ್ ಪ್ರಕರಣಗಳು 40 ಸಾವಿರದ ಗಡಿ ದಾಟಿದ್ದು, ನೈಟ್ ಕರ್ಫ್ಯೂ ಹಿಂಪಡೆಯುವ ಕುರಿತು ಅನುಮಾನ ಮೂಡಿಸಿದೆ.
ರಾಜ್ಯದಲ್ಲಿ ಇಂದು ಒಟ್ಟು 40,499 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ 24,135 ಪ್ರಕರಣಗಳ ವರದಿಯಾಗಿದೆ.
ರಾಜ್ಯದ ಪಾಸಿಟಿವಿಟಿ ದರ 18.80% ಆಗಿದ್ದು, 23,209 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 2,67,650 ಸಕ್ರಿಯ ಪ್ರಕರಣಗಲಿದ್ದು,ಬೆಂಗಳೂರಿನಲ್ಲಿ ಅತೀ ಹೆಚ್ಚು 1ಲಕ್ಷದ 84 ಸಾವಿರ ಪ್ರಕರಣಗಳು ಇವೆ ರಾಜ್ಯದಲ್ಲಿ ಇಂದು 21 ಸೋಂಕಿತರು ಸಾವನ್ನಪ್ಪಿದ್ದು, ಆ ಪೈಕಿ 05 ಮಂದಿ ಬೆಂಗಳೂರಿನವರಾಗಿದ್ದಾರೆ.ಇಂದು 2,15,312 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ.