ಭಾರತದಲ್ಲೂ ಡಿಜಿಟಲ್ ಕರೆನ್ಸಿ? ಆರ್‌ಬಿಐ ನೇತೃತ್ವದಲ್ಲಿ ಜಾರಿ
Team Udayavani, Jan 31, 2021, 6:50 AM IST
ಹೊಸದಿಲ್ಲಿ/ಮುಂಬಯಿ: ವಿದೇಶಿ ಮತ್ತು ಖಾಸಗಿ ಮೂಲದ ಡಿಜಿಟಲ್ ಕರೆನ್ಸಿ ನಿಷೇಧಕ್ಕಾಗಿ ಕೇಂದ್ರ ಸರಕಾರ ಮಸೂದೆ ಜಾರಿಗೆ ತರಲು ಮುಂದಾಗಿದೆ. ದೇಶೀ ಡಿಜಿಟಲ್ ಕರೆನ್ಸಿ ಪರಿಚಯಕ್ಕೂ ಮುಂದಾಗಿದ್ದು, ಇದಕ್ಕೆ ಅಗತ್ಯ ಚೌಕಟ್ಟು ರೂಪಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸೂಚಿಸಿದೆ.
ಈ ಬಜೆಟ್ ಅಧಿವೇಶನದಲ್ಲೇ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಆರ್‌ಬಿಐ ವತಿಯಿಂದಲೇ ಕ್ರಿಪ್ಟೋ ಕರೆನ್ಸಿ ಜಾರಿಯಾದರೆ ಖಾಸಗಿ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಕಾರ್ಯಾಚರಿಸುವಂತಿಲ್ಲ. 2018ರಲ್ಲಿ ಆರ್‌ಬಿಐ ಕ್ರಿಪ್ಟೋ ಕರೆನ್ಸಿಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 2020ರಲ್ಲಿ ಸು. ಕೋರ್ಟ್, ಆರ್‌ಬಿಐ ನಿರ್ಧಾರವನ್ನು ತೆಗೆದುಹಾಕಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಟ್‌ಕಾಯಿನ್- ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ಆದ “ವಝೀರ್ ಎಕ್ಸ್’ ಸಂಸ್ಥಾಪಕ ನಿಶ್ಚಲ್ ಶೆಟ್ಟಿ, “ಇದೊಂದು ವಿಕೇಂದ್ರೀಕೃತ ಮತ್ತು ಸಾರ್ವಜನಿಕ ವ್ಯವಸ್ಥೆ. ರೂಪಾಯಿ ವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂದು ಡಿಜಿಟಲ್ ವ್ಯವಸ್ಥೆಗೆ ಧಕ್ಕೆ ತರುವುದು ಹಾಸ್ಯಾಸ್ಪದ’ ಎಂದಿದ್ದಾರೆ.
ಏನಿದು ಡಿಜಿಟಲ್ ಕರೆನ್ಸಿ?
ಇದು ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ರೂಪದಲ್ಲಿ ಮಾತ್ರ ಇರುತ್ತದೆ. ಇದನ್ನು ಎಲೆಕ್ಟ್ರಾನಿಕ್ ಮನಿ, ಎಲೆಕ್ಟ್ರಾನಿಕ್ ಕರೆನ್ಸಿ ಅಥವಾ ಸೈಬರ್ ಕ್ಯಾಶ್ ಎಂದೂ ಕರೆಯಲಾಗುತ್ತದೆ. ಇದನ್ನು ಕೇವಲ ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ವಸ್ತು ಖರೀದಿಸಲು, ಸೇವೆಗಳಿಗೆ ಹಣ ಪಾವತಿ ಮಾಡಲು ಬಳಕೆ ಮಾಡಬಹುದು. ಗೇಮಿಂಗ್ ಸೈಟ್‌ಗಳು, ಜೂಜು ವೆಬ್‌ಸೈಟ್ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಖರೀದಿಗೂ ಬಳಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ