ಕೋವಿಡ್ ವಿರುದ್ಧ ರಾಮ, ಸೀತೆಯರಂತೆ ಗೆದ್ದು ಬರೋಣ ಎಂದ ಇಂಗ್ಲೆಂಡ್ ಪ್ರಧಾನಿ
Team Udayavani, Nov 7, 2020, 10:19 PM IST
ಲಂಡನ್: “ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಮ, ಸೀತೆಯಂತೆ ವಿಜಯಶಾಲಿಗಳಾಗಿ ಬರೋಣ’ ಎಂದು ಯು.ಕೆ. ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ವರ್ಚುವಲ್ ದೀಪಾವಳಿ ಹಿನ್ನೆಲೆಯಲ್ಲಿ ಮಾತನಾಡಿದ ಬೋರಿಸ್, “ರಾವಣನನ್ನು ಸೋಲಿಸಿದ ನಂತರ ಭಗವಾನ್ ರಾಮ ಮತ್ತು ಆತನ ಪತ್ನಿ ಸೀತೆ ಮರಳುವ ಹಾದಿಯಲ್ಲಿ ಲಕ್ಷಾಂತರ ಹಣತೆಗಳು ಬೆಳಗಿದ್ದವು. ನಾವು ಕೂಡ ಕೊರೊನಾವನ್ನು ಸೋಲಿಸಿ, ನಮ್ಮ ಬದುಕಿನ ಹಾದಿಯಲ್ಲಿ ಗೆಲುವಿನ ಬೆಳಕು ಕಾಣೋಣ’ ಎಂದಿದ್ದಾರೆ.
“ನಮ್ಮ ಮುಂದಿನ ಹಾದಿಗಳ ತುಂಬಾ ದೊಡ್ಡ ಸವಾಲುಗಳೇ ಇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಅವುಗಳನ್ನು ಯಶಸ್ವಿಯಾಗಿ ಎದುರಿಸುತ್ತೇವೆಂಬ ನಂಬಿಕೆ ನನಗಿದೆ. ದೀಪಾವಳಿ ನಮಗೆ ಈ ಸಂದೇಶ ರವಾನಿಸುತ್ತದೆ. ಕತ್ತಲೆ ವಿರುದ್ಧ ಬೆಳಕು, ಕೆಟ್ಟದವರ ವಿರುದ್ಧ ಒಳ್ಳೆಯತನ, ಅಜ್ಞಾನದ ವಿರುದ್ಧ ಜ್ಞಾನ ಗೆದ್ದೇ ಗೆಲ್ಲುತ್ತದೆ’ ಎಂದಿದ್ದಾರೆ. ಕೊರೊನಾ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡಿನಲ್ಲಿ 2ನೇ ಲಾಕ್ಡೌನ್ ಘೋಷಿಸಲಾಗಿದೆ.
ಇದನ್ನೂ ಓದಿ:ತುಮಕೂರು :ತನಿಖೆಯ ವೇಳೆ ಪೋಲೀಸರ ಮೇಲೆ ಮಚ್ಚಿನಿಂದ ದಾಳಿ ನಡೆಸಿದ ಆರೋಪಿ ಕಾಲಿಗೆ ಗುಂಡಿನ ಏಟು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ