‘ಗೇಮ್ ಓವರ್’, ‘ಗೇಮ್ ಸ್ಟಾರ್ಟ್’ ಮದುವೆಯಲ್ಲಿ ಗಮನ ಸೆಳೆದ ಬರಹ !!


Team Udayavani, Dec 1, 2021, 5:58 PM IST

1-g

ಮುದ್ದೇಬಿಹಾಳ: ಕೆಲವೊಮ್ಮೆ ಮದುವೆಗಳಲ್ಲಿ ವಿಶೇಷ ಘಟನಾವಳಿಗಳು ನಡೆದು ಮದುವೆಯ ನೆನಪನ್ನು ಶಾಸ್ವತವಾಗಿಸುವುದರ ಜೊತೆಗೆ ಜೀವನದ ಪಾಠವನ್ನು ಮುಂಚಿತವಾಗಿಯೇ ಕಲಿಸಿಕೊಡುತ್ತವೆ. ಗಂಡು ಅಥವಾ ಹೆಣ್ಣಿನ ಕಡೆಯ ಸ್ನೇಹಿತರ ಬಳಗ ಹಾಸ್ಯಕ್ಕಾಗಿ ನಡೆಸುವ ಪ್ರಯತ್ನಗಳೂ ಸಹಿತ ಮುದ ನೀಡುವುದರ ಜೊತೆಗೆ ಜೀವನದ ಸತ್ಯ ತಿಳಿಸಿಕೊಡುತ್ತವೆ ಅನ್ನುವುದಕ್ಕೆ ಒಂದು ಜ್ವಲಂತ ಉದಾಹರಣೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ಶ್ರೀ ಶಂಕರಾನಂದ ಅವಧೂತರ ಮಂಗಲ ಕಾರ್ಯಾಲಯದಲ್ಲಿ ಕಸ್ತೂರಿಬಾಯಿ ಮತ್ತು ಸಂಗಪ್ಪ ಸಂಗಮ ದಂಪತಿಗಳ ಪುತ್ರರಾದ ಕೆಎಸ್ಆರ್ ಟಿಸಿ ನೌಕರರಾಗಿರುವ ಸಂತೋಷ ಕುಮಾರ ಜೊತೆ ಅರ್ಚನಾ ಮತ್ತು ಗುರುಬಸಪ್ಪ ಜೊತೆ ಮಹಾದೇವಿ (ಕವಿತಾ) ಅವರ ವಿವಾಹವನ್ನು ಬುಧವಾರ ಏರ್ಪಡಿಸಲಾಗಿತ್ತು.

ಮಧ್ಯಾಹ್ನ ವರರು ವಧುಗಳಿಗೆ ಮಾಂಗಲ್ಯ ಧಾರಣೆ ಮಾಡಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಕೆಲ ಗೆಳೆಯರು ಸೇರಿಕೊಂಡು ಕಾಮಿಡಿ ಸೀನ್ ಕ್ರಿಯೇಟ್ ಮಾಡಲು ಮತ್ತು ಈ ಮದುವೆಯನ್ನು ಅವಿಸ್ಮರಣೀಯವಾಗಿಸಲು ಹೊಸದೇನನ್ನಾದರೂ ಮಾಡಬೇಕೆಂದು ತೀರ್ಮಾನಿಸಿ ಗೇಮ್ ಓವರ್ ಎಂದು ಬರೆದ ಸ್ಲೇಟ್ ಗಳನ್ನು ವರರ ಕೈಯಲ್ಲಿ, ಗೇಮ್ ಸ್ಟಾರ್ಟ್ ಎಂದು ಬರೆದ ಸ್ಲೇಟನ್ನು ವಧುಗಳ ಕೈಯಲ್ಲಿ ನೀಡಿ ಫೋಟೊ ತೆಗೆಸಿಕೊಂಡರು.

ಮದುವೆಯಾದ ಮೇಲೆ ಗಂಡಿನ ಆಟ ಬಂದ್, ಹೆಂಡತಿಯ ಆಟ ಶುರು ಎನ್ನುವ ಅರ್ಥದಲ್ಲಿ ಆ ಸ್ಲೇಟುಗಳನ್ನು ಅವರ ಕೈಯಲ್ಲಿ ಕೊಟ್ಟಿದ್ದರು. ಮೇಲ್ನೋಟಕ್ಕೆ ಇದು ಹಾಸ್ಯ ಭರಿತ ಎನ್ನಿಸಿದರೂ ಒಳಹೊಕ್ಕು ನೋಡಿದಾಗ ಇದರ ಮರ್ಮ ಹಲವರಿಗೆ ಹಲವು ರೀತಿ ಚರ್ಚೆ ನಡೆಸಲು ದಾರಿ ಮಾಡಿಕೊಟ್ಟಂತಾಗಿತ್ತು.

ಮದುವೆಯಲ್ಲಿ ಪಾಲ್ಗೊಂಡಿದ್ದ ಸಂತೋಷಕುಮಾರ ಮತ್ತು ಗುರುಬಸಪ್ಪ ಅವರ ಸ್ನೇಹಿತರಿಗೆ ಇದೊಂದು ಹಾಸ್ಯದ ಸನ್ನಿವೇಶವಾಗಿದ್ದರೂ ಅಲ್ಲಿದ್ದ ಹಿರಿಯರಿಗೆ, ಮದುವೆ ನಂತರದ ಜೀವನದ ಅನುಭವ ಇದ್ದವರಿಗೆ ಮಾತ್ರ ಇದು ಜೀವನದ ನಿಜವಾದ ಅರ್ಥ ತಿಳಿಸಿಕೊಡುವಂಥದ್ದು ಎಂದು ತಮ್ಮೊಳಗೆ ಮುಸಿಮುಸಿ ನಗು ಬೀರುವ ಮೂಲಕ ಮದುವೆಯ ನಂತರದ ಗಂಡು, ಹೆಣ್ಣಿನ ದಾಂಪತ್ಯ ಜೀವನದ ಬದಲಾವಣೆಗಳನ್ನು, ದೃಷ್ಟಿಕೋನಗಳನ್ನು ಈ ರೀತಿಯಾದ ಮುಂದಾಲೋಚನೆಯ ಬರಹಗಳಿಂದ ಮುನ್ನೆಚ್ಚರಿಕೆ ನೀಡಿದಂತಾಗಿದೆ ಎಂದು ತಮ್ಮೊಳಗೆ ಮಾತಾಡಿಕೊಂಡದ್ದು ಕಿವಿಗೆ ಬಿತ್ತು. ಆದರೆ ಗೆಳೆಯರ ಈ ಚಿಂತನೆಯು ಮದುವೆಯ ಸಂಭ್ರಮವನ್ನು ಹಾಸ್ಯ ಮಿಶ್ರಿತವಾಗಿ ಹೆಚ್ಚಿಸಿದ್ದು ಮಾತ್ರ ವಿಶೇಷವಾಗಿತ್ತು.

ಈ ಮದುವೆಗೆ ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಮಾಜಿ ಸಚಿವ ಸಿ.ಎಸ್.ನಾಡಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ಗಣ್ಯರದ ಶಿವಶಂಕರಗೌಡ ಹಿರೇಗೌಡರ, ನೀಲಕಂಠರಾಯಗೌಡ ನಾಡಗೌಡ ಬಸರಕೋಡ, ಹೇಮರಡ್ಡಿ ಮೇಟಿ, ಎಂ.ಎಸ್.ಪಾಟೀಲ ನಾಲತವಾಡ, ಶಾಂತಗೌಡ ಪಾಟೀಲ ನಡಹಳ್ಳಿ, ಗುರು ತಾರನಾಳ, ಶ್ರೀಶೈಲ ಸೂಳಿಭಾವಿ, ನಿಂಗಪ್ಪಗೌಡ ಬಪ್ಪರಗಿ, ಶ್ರೀಧರ ಕಲ್ಲೂರ, ಗಿರೀಶಗೌಡ ಪಾಟೀಲ ನಾಲತವಾಡ, ಸಿಪಿಐ ಆನಂದ ವಾಘ್ಮೋಡೆ, ತೆರಿಗೆ ಸಲಹೆಗಾರ ರುದ್ರಗೌಡ ಪಾಟೀಲ ಅಗಸಬಾಳ ಸೇರಿ ಹಲವರು ಆಗಮಿಸಿ ಶುಭಕೋರಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.