
ChatGPT ತಯಾರಿಸಿದ ಓಪನ್ ಎಐ ಕಂಪನಿಯ ಸಿಇಒ ಸ್ಯಾಮ್ ಆಲ್ಟ್ ಮನ್ ಹುದ್ದೆಯಿಂದ ವಜಾ
Team Udayavani, Nov 18, 2023, 10:59 AM IST

ವಾಷಿಂಗ್ಟನ್: ಸುಮಾರು ಒಂದು ವರ್ಷದ ಹಿಂದೆ ChatGPTಯನ್ನು ತಯಾರಿಸಿದ್ದ ಓಪನ್ ಎಐ ಕಂಪನಿ ಇದೀಗ ಮೈಕ್ರೋಸಾಫ್ಟ್ ಬೆಂಬಲಿತ ಸಂಸ್ಥೆಯನ್ನು ಮುನ್ನಡೆಸುವ ಸಾಮರ್ಥ್ಯ ಇಲ್ಲದ ಸಿಇಒ ಸ್ಯಾಮ್ ಆಲ್ಟಾಮನ್ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:Betting: ಬೆಟ್ಟಿಂಗ್‌ನ ಮಾಸ್ಟರ್ ಬುಕ್ಕಿ ಬಂಧನ, 41 ಲಕ್ಷ ರೂ. ವಶ
ಮೈಕ್ರೋಸಾಫ್ಟ್ ಬೆಂಬಲಿತ ಓಪನ್ ಎಐ ಕಂಪನಿ ತಿಂಗಳಿಗೆ ಕೋಟ್ಯಂತರ ರೂಪಾಯಿ ಆದಾಯಗಳಿಸುತ್ತಿತ್ತು. ಚಾಟ್ ಜಿಪಿಟಿ ಎಂಬ ತಂತ್ರಜ್ಞಾನವನ್ನು ಬಿಡುಗಡೆ ಮಾಡುವ ಮೂಲಕ ಟೆಕ್ ಲೋಕದಲ್ಲಿ ದೊಡ್ಡ ಸಂಚಲನ ಹುಟ್ಟು ಹಾಕಿತ್ತು. ಅದಕ್ಕೆ ಕಾರಣ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ನ ಚಾಟ್ ಬೋಟ್ ಕೆಲವೇ ಸೆಕೆಂಡ್ಸ್ ಗಳಲ್ಲಿ ನಮಗೆ ಬೇಕಾದ ಮಾಹಿತಿ, ಪದ್ಯ, ಕಲೆಯನ್ನು ರಚಿಸಿ ಕೊಡುತ್ತಿರುವುದು.
ಓಪನ್ ಎಐ ಕಂಪನಿಯ ಸಿಇಒ ಆಲ್ಟ್ ಮನ್ (38ವರ್ಷ) ಆಡಳಿತ ಮಂಡಳಿಯೊಂದಿಗೆ ನಿರಂತರವಾದ ಯಾವುದೇ ಸಂಪರ್ಕ ಹೊಂದಿಲ್ಲ. ಅಷ್ಟೇ ಅಲ್ಲ ಕಂಪನಿಯನ್ನು ಮುನ್ನಡೆಸುವ ವಿಶ್ವಾಸವನ್ನು ಕಳೆದುಕೊಂಡಿದ್ದರಿಂದ ಹುದ್ದೆಯಿಂದ ವಜಾಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಓಪನ್ ಎಐ ಮಂಡಳಿ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ.
ಓಪನ್ ಎಐ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಆಲ್ಟಮನ್ ಗೆ ಇಲ್ಲ ಎಂಬುದು ಮಂಡಳಿಗೆ ಮನವರಿಕೆಯಾಗಿದೆ. ಓಪನ್ ಎಐ ಕಂಪನಿಗಾಗಿ ಮೈಕ್ರೋಸಾಫ್ಟ್ ಬಿಲಿಯನ್ ಗಟ್ಟಲೇ ಹಣವನ್ನು ಹೂಡಿಕೆ ಮಾಡಿರುವುದಾಗಿ ವರದಿ ತಿಳಿಸಿದೆ.
ಓಪನ್ ಎಐ ಕಂಪನಿಗೆ ಸ್ಯಾಮ್ ಆಲ್ಟ್ ಮನ್ ಅವರ ಕೆಲವು ಕೊಡುಗೆಯನ್ನು ಶ್ಲಾಘಿಸಿದ್ದು, ಶೀಘ್ರದಲ್ಲೇ ನೂತನ ಸಿಇಒ ನೇಮಕ ಮಾಡುವುದಾಗಿ ತಿಳಿಸಿದೆ. ಏತನ್ಮಧ್ಯೆ ಆಲ್ಟಮನ್ ಅವರ ಸ್ಥಾನಕ್ಕೆ ಹಂಗಾಮಿಯಾಗಿ ಕಂಪನಿಯ ಚೀಫ್ ಟೆಕ್ನಾಲಜಿ ಅಧಿಕಾರಿ ಮೀರಾ ಮುರಾಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
