ನಿರಾಣಿ, ವಿಜಯೇಂದ್ರ ಧರ್ಮಸ್ಥಳದಲ್ಲಿ ಆಣೆ ಮಾಡಲಿ: ಯತ್ನಾಳ್ ಸವಾಲು

ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಹಣ ನೀಡಿದ್ದರು....!

Team Udayavani, Jan 7, 2023, 3:20 PM IST

yatnal

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿಗಳಿಗೆ ಒಂದು ರೂಪಾಯಿ ಹಣವನ್ನೂ ನೀಡಿಲ್ಲ ಎಂದು ಸಚಿವ ನಿರಾಣಿ ಹಾಗೂ ವಿಜಯೇಂದ್ರ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ಸನ್ನಿಧಾನದಲ್ಲಿ ಆಣೆ ಮಾಡಲಿ ಎಂದು ಶಾಸಕ ಯತ್ನಾಳ್ ಸವಾಲು ಹಾಕಿದ್ದಾರೆ.

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾಚಣೆಯಲ್ಲಿ ನನಗೆ ಟಿಕೆಟ್ ಕೊಡಿಸಲು, ಸೋಲಿಸಲು ನಿರಾಣಿ ಯಾರು ಎಂದು ಹರಿಹಾಯ್ದು, ಪಾಲಿಕೆ ಚುನಾವಣೆಯಲ್ಲಿ ನೀವು ಯಾರಿಗೆ ಎಷ್ಟು ಹಣ ಕೊಟ್ಟಿದ್ದೀರಿ ಎಂಬುದು ಗೊತ್ತು, ಈ ವಿಚಾರ ಚುನಾವಣಾ ವೀಕ್ಷಕರಿಗೆ, ಕೇಂದ್ರದ ನಾಯಕರಿಗೂ ತಿಳಿದಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗಾಗಿ ಪಕ್ಷದಿಂದಾಗಲಿ, ನಿರಾಣಿ ಹಾಗೂ ವಿಜಯೇಂದ್ರ ಹಣ ನೀಡಿಲ್ಲ, ನಾವು ಹಣ ಪಡೆದಿಲ್ಲ. ನಗರದ ಮತದಾರರು ನಮ್ಮ ಅಭ್ಯರ್ಥಿಗಳಿಗೆ ಹಣ ಪಡೆಯದೇ ಅಭಿವೃದ್ಧಿಗಾಗಿ ಮತ ಹಾಕಿ ಗೆಲ್ಲಿಸಿದ್ದಾರೆ ಎಂದರು.

ನನ್ನನ್ನು ಸೋಲಿಸಲು ಭಾರಿ ಹಣ ಬರಲಿದೆ

ವಿಜಯಪುರ : ಬರುವ ವಿಧಾನಸಭೆ ಚುನಾವಣೆಯಲ್ಲಿ ನನ್ನು ಸೋಲಿಸಲು ವಿಜಯೇಂದ್ರ, ನಿರಾಣಿ, ಸತಿಶ ಜಾರಕಿಹೊಳಿ ಸೇರಿದಂತೆ ಹಲವರಿಂದ ದೊಡ್ಡ ಮಟ್ಟದ ಹಣ ವಿಜಯಪುರಕ್ಕೆ ಹರಿದು ಬರಲಿದೆ. ಆದರೆ ಅದನ್ನೆಲ್ಲ ಪಡೆದು ನಮ್ಮ ಜನ ನನಗೆ ಮತಹಾಕಲಿದ್ದಾರೆ ಎಂದು ಯತ್ನಾಳ್ ಹೇಳಿದರು.

ನಿರಾಣಿ ಕೇಳಿ ವಿಜಯಪುರ ಕ್ಷೇತ್ರದ ಜನರು ಮತ ಹಾಕುತ್ತಾರಾ, ನಿರಾಣಿ ನನ್ನನ್ನು ಸೋಲಿಸುವ ಮಾತಿರಲಿ, ಮೊದಲು ನಿರಾಣಿ ಬಿಳಗಿ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಇಷ್ಟಕ್ಕೂ ನನಗೆ ಟಿಕೆಟ್ ಕೊಡಿಸುವ ಮಾತಿರಲಿ, ನಿರಾಣಿ ಕುಟುಂಬದಲ್ಲಿ ಎಷ್ಟು ಜನ ಅಣ್ಣತಮ್ಮಂದಿರು ಚುನಾವಣೆಗೆ ನಿಲ್ಲುತ್ತಾರೆ ಎಂದು ಹೇಳಲಿ. ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಎಷ್ಟು ಜನ ನಿಲ್ಲುತ್ತಾರೆ ಎಂದು ಸ್ಪಷ್ಟಪಡಿಸಲಿ. ನನ್ನ ಮನೆಯಲ್ಲಿ ನಾನೊಬ್ಬನೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.

”ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡದಿದ್ದರೆ ಪಂಚಮಸಾಲಿ ಸಮಾಜ ನಿಮ್ಮ ವಿರುದ್ಧ ತಿರುಗಿ ಬೀಳಲಿದೆ ಎಂದು ವಚನಾನಂದಸ್ವಾಮಿ ಬಹಿರಂಗ ವೇದಿಕೆಯಲ್ಲೇ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲೆ ಮಾಡಿದ್ದರು. ರಾಜಕೀಯ ಲಾಭಕ್ಕಾಗಿ ಬಹಿರಂಗವಾಗಿಯೇ ಸಮಾಜವನ್ನು ದುರ್ಬಳಕೆ ಮಾಡಿಕೊಂಡಿದ್ದನ್ನು ರಾಜ್ಯದ ಜನ ನೋಡಿದ್ದಾರೆ ಎಂದರು.

ವಚನಾನಂದಸ್ವಾಮಿ ಮಾತಿನಿಂದ ಯಡಿಯೂರಪ್ಪ ವೇದಿಕೆಯಿಂದ ನಿರ್ಗಮಿಸಲು ಮುಂದಾದ ಸಂದರ್ಭದಲ್ಲಿ ಸುತ್ತೂರು ಶ್ರೀಗಳು, ಬೊಮ್ಮಾಯಿ ಅವರು ಅದನ್ನು ತಡೆದಿದ್ದರು. ಹೀಗೆ ಬ್ಲಾಕ್‍ಮೇಲ್ ಮಾಡಿ ಸಚಿವರಾದವರು ನಿರಾಣಿ ಎಂದು ವಾಗ್ದಾಳಿ ನಡೆಸಿದರು.

ನಿರಾಣಿ, ವಚನಾನಂದಸ್ವಾಮಿ ಪಂಚಮಸಾಲಿ ಸಮಾಜಕ್ಕೆ ಮೀಸಲು ಬೇಕೆಂದು ಹೋರಾಟ ಮಾಡಿದವರೇ ಅಲ್ಲ. ಹೋರಾಟದ ಮಧ್ಯದಲ್ಲಿ ಬಂದು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ಮಂತ್ರಿಯಾಗಲು ಮುಖ್ಯಮಂತ್ರಿ ಆಗಲು ರಾಜಕೀಯ ಬ್ಲಾಕ್‍ಮೇಲ್ ಮಾಡಲು ಸಮಾಜದ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರು.

ಪಂಚಮಸಾಲಿ ಸಮಾಜದ ಹಿಂದೆ ಹಿರಿಯರು ಹೋರಾಟ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ನಾನೂ ಹೋರಾಟವನ್ನು ಮಾಡಿಕೊಂಡು ಬಂದಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗಲೇ ನನ್ನ ನೇತೃತ್ವದಲ್ಲಿ ಸಮಾಜದ ಪ್ರಮುಖರೊಂದಿಗೆ ದೆಹಲಿಯಲ್ಲಿ ಪ್ರಮುಖರ ನಿಯೋಗ ಭೇಟಿ ಮಾಡಿ 2ಎ ಮೀಸಲಾತಿಗೆ ಆಗ್ರಹಿಸಿದ್ದೇವೆ ಎಂದರು.

ಹಿಂದೆ ಅರ್ಧಕ್ಕೆ ನಿಲ್ಲಿಸಿದ್ದ ಪಂಚಮಸಾಲಿ ಮೀಸಲು ಹೋರಾಟವನ್ನು ಮತ್ತೆ ಮುಮದುವರೆಸಿದ್ದೇವೆ. ಇಷ್ಟಕ್ಕೂ ಈಗಲೂ ನಿಮ್ಮಲ್ಲಿ ಶಕ್ತಿ ಇದ್ದರೆ, ನಿಜವಾದ ಬದ್ಧತೆ ಇದ್ದರೆ ತ್ವರಿತವಾಗಿ ಸಮಾಜಕ್ಕೆ ಮೀಸಲು ಕಲ್ಪಿಸಿ ಎಂದು ಸಚಿವ ನಿರಾಣಿಗೆ ಶಾಸಕ ಯತ್ನಾಳ ಸವಾಲು ಹಾಕಿದರು.

ಮೀಸಲಾತಿ ಕುರಿತು ಸಚಿವ ಸಂಪುಟದ ಅಜೆಂಡಾದಲ್ಲೇ ಇಲ್ಲ. 2ಸಿ ಹಾಗೂ 2 ಡಿ ಎಂದರೆ ಏನು ಎಂದು ಈ ವರೆಗೆ ನಡಾವಳಿಗಳನ್ನೇ ನೀಡಿಲ್ಲ. 2ಡಿ ಪ್ರವರ್ಗದಲ್ಲಿ ಎಲ್ಲಾ ವೀರಶೈವ-ಲಿಂಗಾಯತರಿಗೆ ಕೊಡುವುದಾಗಿ ಹೇಳಿದ್ದೀರಿ. ಹಾಗಿದ್ದರೆ 2ಡಿ ಪ್ರವರ್ಗಕ್ಕೆ ಎಷ್ಟು ಶೇಕಡಾ ಮೀಸಲು ಕೊಡುತ್ತೀರಿ ಎಂದು ನಿಖರವಾಗಿ ಹೇಳಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲು 2 ತಿಂಗಳ 9 ದಿನಗಳು ಮಾತ್ರ ಬಾಕಿ ಇದೆ. 3 ತಿಂಗಳಲ್ಲಿ ಮೀಸಲು ಕಲ್ಪುಸುವಾಗಿ ನಿರಾಣಿ ಹೇಳುವುದೆಲ್ಲ ಸುಳ್ಳು. ಮೀಸಲು ಕಲ್ಪಿಸಿವುದು ಅಸಾಧ್ಯವಂದೇ ಈ ಮಾತಿನ ಅರ್ಥ ಎಂದು ದೂರಿದರು.

ಪರಿಶಿಷ್ಟ ಜಾತಿ-ಪಂಗಡಕ್ಕೆ ಇತರೆ ಸಮುದಾಯಗಳನ್ನು ಸೇರ್ಪಡೆ ಮಾಡಲು ಕುಲಶಾಸ್ತ್ರ ಅಧ್ಯಯನ ಬೇಕು. ಪ್ರವರ್ಗಕ್ಕೆ ಸೇರಲಿ ಕುಲಶಾಸ್ತ್ರ ಆಧ್ಯಯನ, ಹಿಂದುಳಿದ ವರ್ಗದ ಆಯೋಗದ ವರದಿ ಪಡೆಯುವ ಅವಶ್ಯಕತೆ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.

ಆರ್ಥಿಕ ದುರ್ಬಲ ಸಮುದಾಯದವರಿಗೆ ಪ್ರಧಾನಿ ಮೋದಿ ಅವರು ಶೇ.10 ರಷ್ಟು ಮೀಸಲು ಕಲ್ಪಿಸಿದ್ದಾರೆ. ಮೀಸಲಾತಿ ಇಲ್ಲದ ಸಮುದಾಯಗಳಿಗೆ ಇಲ್ಲಿ ಅವಕಾಶ ಕಲ್ಪಿಸಿದ್ದರೂ ಲಿಂಗಾಯತರೂ ಇದರಲ್ಲಿ ಸೇರಲು ಸಾಧ್ಯವಿಲ್ಲ. ಇದನ್ನು ಪಡೆಯಲು ಕಠಿಣ ನಿಯಮಗಳಿವೆ. ಇದರಲ್ಲಿ ಶೇ.2 ರಷ್ಟು ಲಿಂಗಾಯತರಿಗೆ ಕೊಡುವುದಾಗಿ ಹೇಳಿದ್ದರೂ ಅದೂ ಅಸಾಧ್ಯ ಎಂದರು.

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.