USA: ನ್ಯೂಜೆರ್ಸಿಯಲ್ಲಿ ಸಿಗಲಿದೆ “ಮೋದಿ ಜೀ ಥಾಲಿ”
Team Udayavani, Jun 13, 2023, 7:17 AM IST
ನ್ಯೂಜೆರ್ಸಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಲು ಅಮೆರಿಕ ಸಜ್ಜಾಗಿದೆ. ಇದೇ ತಿಂಗಳು ಅವರು ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಅವರ ಖ್ಯಾತಿ ಅಮೆರಿಕಾದ್ಯಂತ ಹರಿಡಿರುವುದಕ್ಕೆ ಸಾಕ್ಷಿ ಎಂಬಂತೆ, ನ್ಯೂಜೆರ್ಸಿಯ ರೆಸ್ಟೋರೆಂಟ್ವೊಂದು ಥಾಲಿಗೆ “ಮೋದಿ ಜೀ ಥಾಲಿ” ಎಂದು ನಾಮಕರಣ ಮಾಡಿದೆ.
ಈ ಥಾಲಿಯು ಭಾರತೀಯ ಆಹಾರಗಳಾದ ಕಿಚಡಿ, ರಸಗುಲ್ಲಾ, ಸಾರ್ಸನ್ ಕಾ ಸಾಗ್, ಕಾಶ್ಮೀರಿ ದಮ್ ಆಲೂ, ಇಡ್ಲಿ, ಡೋಕ್ಲಾ, ಮಸಲಾ ಮಜ್ಜಿಗೆ ಮತ್ತು ಹಪ್ಪಳ ಒಳಗೊಂಡಿದೆ. ಚೆಫ್ ಶ್ರೀಪಾದ್ ಕುಲಕರ್ಣಿ ಅವರು ಈ ಥಾಲಿಯನ್ನು ತಯಾರಿಸಿದ್ದಾರೆ. “ಇದು ಯಶಸ್ವಿಯಾದರೆ, ಮುಂದಿನ ದಿನದಲ್ಲಿ “ಡಾ. ಜೈಶಂಕರ್ ಥಾಲಿ” (ವಿದೇಶಾಂಗ ಸಚಿವರ ಗೌರವಾರ್ಥ) ಆರಂಭಿಸಲು ಯೋಜಿಸಿದ್ದೇವೆ,” ಎಂದು ಶ್ರೀಪಾದ್ ತಿಳಿಸಿದ್ದಾರೆ.