Reserved: ಇನ್ನು ಮೈಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲಿ ಅಂಗವಿಕಲರಿಗೆ ಬರ್ಥ್ ಮೀಸಲು
Team Udayavani, Apr 13, 2023, 8:15 AM IST
ಹೊಸದಿಲ್ಲಿ: ಈಗಾಗಲೇ ವೃದ್ಧರಿಗೆ, ಏಕಾಂಗಿ-ಚಿಕ್ಕ ಮಕ್ಕಳನ್ನು ಹೊಂದಿರುವ ಸ್ತ್ರೀ ಯರಿಗೆ ರೈಲುಗಳಲ್ಲಿ ನಿರ್ದಿಷ್ಟ ಆಸನಗಳನ್ನು ಮೀಸಲಾಗಿರಿಸಲಾಗಿದೆ. ಈ ಸೇವೆಯನ್ನು ಕೇಂದ್ರ ರೈಲ್ವೇ ಇಲಾಖೆ ಇನ್ನಷ್ಟು ವಿಸ್ತರಿಸಿದೆ. ಇನ್ನು ಮುಂದೆ ದೈಹಿಕ ಅಂಗವೈಕಲ್ಯ ಹೊಂದಿರುವವರಿಗೆ ಹಾಗೂ ಅವರ ವ್ಯವಸ್ಥೆಗಳನ್ನು ಗಮನಿಸುವವರಿಗೆ ಕೆಲವು ಆಸನಗಳು ಲಭ್ಯವಾಗಲಿವೆ. ಮೈಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಮಾ.31ರಂದು ಬಿಡುಗಡೆ ಮಾಡಲಾಗಿರುವ ಆದೇಶದಲ್ಲಿ, ಸ್ಲಿàಪರ್ ದರ್ಜೆಯಲ್ಲಿ 4 ಬರ್ಥ್ಗಳು (ಎರಡು ಕೆಳ ಗಿನವು, ಇನ್ನೆರಡು ಮಧ್ಯದವು), 3 ಎಸಿಯಲ್ಲಿನ ಎರಡು ಬರ್ಥ್ಗಳು (ಒಂದು ಕೆಳಗಿನದ್ದು, ಇನ್ನೊಂದು ಮಧ್ಯದ್ದು), 3 ಇ ದರ್ಜೆಯಲ್ಲಿ ಎರಡು ಬರ್ಥ್ಗಳನ್ನು (ಕೆಳಗಿನದ್ದು, ಮಧ್ಯದ್ದು) ಕಾಯ್ದಿರಿಸಲಾಗಿದೆ. ಇನ್ನು ಗರೀಬ್ ರಥ ರೈಲುಗಳಲ್ಲಿ ಅಂಗವೈಕಲ್ಯ ಹೊಂದಿ ರುವವರಿಗೆಂದೇ ಎರಡು ಕೆಳಗಿನ, ಎರಡು ತೀರಾ ಮೇಲಿನ ಬರ್ಥ್ಗಳನ್ನು ನೀಡಲಾಗುತ್ತದೆ. ಆದರೆ ಇದಕ್ಕೆ ಅವರು ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇನ್ನು ರೈಲುಗಳ ಎಸಿ ಚೇರ್ ಕಾರ್ನಲ್ಲಿ ಎರಡು ಆಸನಗಳನ್ನು ಅಂಗವಿಕಲರಿಗೆಂದೇ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ