ಪಾಣೆಮಂಗಳೂರು: ರೆಫ್ರಿಜರೇಟರ್ ದುರಸ್ತಿ ಮಳಿಗೆಗೆ ಬೆಂಕಿ
Team Udayavani, Mar 6, 2023, 6:36 AM IST
ಬಂಟ್ವಾಳ: ಪಾಣೆಮಂಗಳೂರಿನ ಗುಡ್ಡೆಅಂಗಡಿಯ ರೆಫ್ರಿಜರೇಟರ್ ದುರಸ್ತಿಯ ಮಳಿಗೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸೊತ್ತುಗಳು ಬೆಂಕಿಗಾಹುತಿಯಾದ ಘಟನೆ ರವಿವಾರ ನಡೆದಿದೆ.
ಗುಡ್ಡೆಅಂಗಡಿಯ ಫಾರೂಕ್ ಅವರಿಗೆ ಸೇರಿದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ನೂಟ್ನಿಂದ ಬೆಂಕಿ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಸೇರಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿ¨ªಾರೆ.