fire

 • ಪಲ್ಲಮಜಲು : ಒಣಹುಲ್ಲಿನ ಗುಡ್ಡಕ್ಕೆ ಬೆಂಕಿ

  ಬಿ.ಸಿ.ರೋಡು: ಬಿ.ಸಿ.ರೋಡು ಸಮೀಪದ ಬಿ.ಮೂಡ ಗ್ರಾಮದ ಪಲ್ಲಮಜಲಿನಲ್ಲಿರುವ ಒಣಹುಲ್ಲಿನ ಗುಡ್ಡಕ್ಕೆ ಬೆಂಕಿ ಬಿದ್ದಿರುವ ಘಟನೆ ಶನಿವಾರ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ಸಿಬಂಧಿ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.

 • ಆಕಸ್ಮಿಕ ಬೆಂಕಿಗೆ ಭಸ್ಮವಾದ ಮನೆ: ಲಕ್ಷಾಂತರ ರೂ. ನಷ್ಟ

  ವಿಜಯಪುರ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಮನೆಯೇ ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ವಿಜಯಪುರ ತಾಲೂಕಿನ ಅಲಿಯಾಬಾದ್ 2ನೇ ತಾಂಡಾದ ರತ್ನು ರಾಠೋಡ ಎಂಬುವವರಿಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿ…

 • ಭಜರಂಗಿ-2 ಚಿತ್ರೀಕರಣ ಸೆಟ್‌ನಲ್ಲಿ ಮತ್ತೆ ಬೆಂಕಿ

  ನೆಲಮಂಗಲ: ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿಯನಯದ “ಭಜರಂಗಿ-2′ ಚಿತ್ರದ ಸೆಟ್‌ನಲ್ಲಿ ಸತತ ಎರಡನೇ ಬಾರಿ ಬೆಂಕಿ ಕಾಣಿಸಿಕೊಂಡಿದೆ. ಚಿತ್ರದ ಪ್ರಮುಖ ದೃಶ್ಯ ಒಂದರ ಚಿತ್ರೀಕರಣಕ್ಕಾಗಿ ನೆಲಮಂಗಲ ಸಮೀಪದ ಶ್ರೀನಿವಾಸಪುರದ ಮೋಹನ್‌ ಬಿ. ಕೆರೆ ಸ್ಟುಡಿಯೋದಲ್ಲಿ ನಿರ್ಮಿಸಿದ್ದ ಬೃಹತ್‌ ಸೆಟ್‌ಗೆ…

 • ದೇರಳಕಟ್ಟೆಯಲ್ಲಿ ಮತ್ತೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಅಟೋ ಮೊಬೈಲ್ ಅಂಗಡಿಗೆ ಬೆಂಕಿ

  ಉಳ್ಳಾಲ: ಅಟೋ ಮೊಬೈಲ್ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ಮುಂಜಾನೆ ದೇರಳಕಟ್ಟೆಯಲ್ಲಿ ನಡೆದಿದೆ. ದೇರಳಕಟ್ಟೆಯ ವಿದ್ಯಾರತ್ನ ಕ್ರಾಸ್ ಎಂಬಲ್ಲಿನ ಭಾರತ್ ಅಟೋ ಮೊಬೈಲ್ ಅಂಗಡಿಗೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಎರಡು…

 • ಪ್ರತಿಭಟನೆಗೆ ತಂದಿದ್ದ ಕುರ್ಚಿಗಳಿದ್ದ ಲಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

  ಉಳ್ಳಾಲ:  ಕುರ್ಚಿಗಳನ್ನು ತುಂಬಿದ್ದ ಈಚರ್ ವಾಹನವೊಂದು ಬೆಂಕಿಗಾಹುತಿಯಾದ ಘಟನೆ ತಡರಾತ್ರಿ 2.30ರ ಸುಮಾರಿಗೆ ದೇರಳಕಟ್ಟೆಯಲ್ಲಿ ನಡೆದಿದೆ. ದೇರಳಕಟ್ಟೆಯ ಸಿಟಿ ಗ್ರೌಂಡ್ ನಲ್ಲಿ ರವಿವಾರ ಏರ್ಪಡಿಸಿದ್ದ ಪೌರತ್ವ ಕಾಯಿದೆ ವಿರೋಧಿಸಿ ಮುಸ್ಲಿಂ ಸಂಘನೆಗಳ ಪ್ರತಿಭಟನಾ ಸಭೆಯ ಬಳಿಕ ಕುರ್ಚಿಗಳನ್ನು ತುಂಬಿದ…

 • ಮಹಾರಾಷ್ಟ್ರ: ಕಾರ್ಖಾನೆಯಲ್ಲಿ ಬೆಂಕಿ ಅವಘಡ 8 ಮಂದಿ ಸಾವು

  ಮುಂಬಯಿ: ಮಹಾರಾಷ್ಟ್ರದ ಪಾಲ್ಗಾರ್‌ ಜಿಲ್ಲೆಯ ತಾರಾಪುರದಲ್ಲಿರುವ ತಾರಾ ನೈಟ್ರೇಟ್‌ ಎಂಬ ರಾಸಾಯನಿಕ ಉತ್ಪಾದನ ಘಟಕದಲ್ಲಿ ಶನಿವಾರ ರಾತ್ರಿ ಸ್ಫೋಟವೊಂದು ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟು, ಐವರು ಮಂದಿ ಗಾಯಗೊಂಡಿದ್ದಾರೆ. ಘಟಕದಲ್ಲಿದ್ದ ರಿಯಾಕ್ಟರ್‌ ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು…

 • ಕಾರ್ಕಳ ಚತುರ್ಮುಖ ಬಸದಿ ಬಳಿ ಬೆಂಕಿ

  ಕಾರ್ಕಳ: ಕಾರ್ಕಳ ನಗರದ ಚತುರ್ಮುಖ ಬಸದಿ ಬಳಿ ಮುಳಿಹುಲ್ಲಿನ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಗೊಮ್ಮಟ ಮೂರ್ತಿ ಬೆಟ್ಟದ ಎದುರುಗದೆ ಇರುವ ಚತುರ್ಮುಖ ಬಸದಿ ಬಳಿ ಇರುವ ಗುಡ್ಡದಲ್ಲಿ ಸಂಜೆ 6:45 ರ…

 • ಕಲಬುರಗಿ: ನಿಂತಿದ್ದ ರೈಲು ಬೋಗಿಯಲ್ಲಿ ಅಗ್ನಿ ಅವಘಡ; ತಪ್ಪಿದ ಭಾರೀ ಅನಾಹುತ

  ಕಲಬುರಗಿ: ನಿಂತಿದ್ದ ರೈಲು ಬೋಗಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಕಲಬುರಗಿಯ ರೈಲು ನಿಲ್ದಾಣದಲ್ಲಿ  ತಡರಾತ್ರಿ ಘಟನೆ ನಡೆದಿದೆ.‌ ಸರಕು ಸಾಗಾಣಿಕೆ ರೈಲ್ವೆಯ ಸಿಬ್ಬಂದಿಗಳ ವಿಶೇಷ ಬೋಗಿನಲ್ಲಿ  ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ್ದು, ಯಾವುದೇ…

 • ಬೆಂಗಳೂರಿನ ಸಿಪಿಐ ಕಚೇರಿ ಮುಂಭಾಗ ಬೈಕ್‌ಗಳಿಗೆ ಬೆಂಕಿ

  ಬೆಂಗಳೂರು: ಇತ್ತೀಚೆಗೆ ಕೇರಳ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಾರು ತಡೆದು ಕಪ್ಪು ಬಾವುಟ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ವೈಯಾಲಿಕಾವಲ್‌ನಲ್ಲಿರುವ ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ)ದ ಕಚೇರಿ ಮುಂಭಾಗ ನಿಂತಿದ್ದ ಆರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ….

 • ದೆಹಲಿಯಲ್ಲಿ ಮತ್ತೊಂದು ಅಗ್ನಿ ಅನಾಹುತ: ಮರದ ಕಾರ್ಖಾನೆಗೆ ಹಬ್ಬಿದ ಬೆಂಕಿಯ ಕೆನ್ನಾಲಿಗೆ

  ದೆಹಲಿ: ಪಶ್ಚಿಮ ದೆಹಲಿಯ ಮುಂಡ್ಕಾ ಪ್ರದೇಶದ ಮರದ ಕಾರ್ಖಾನೆಯೊಂದರಲ್ಲಿ ಇಂದು ಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ರಾಷ್ಟ್ರ ರಾಜಧಾನಿಯಲ್ಲಿನ ಝಾನ್ಸಿರಾಣಿ ರಸ್ತೆಯಲ್ಲಿರುವ ಕೃಷಿ ಮಾರುಕಟ್ಟೆ ಗೋದಾಮಿನ ಬಹುಮಹಡಿ ಕಟ್ಟಡದಲ್ಲಿ ವಾರದ ಹಿಂದೆ  ದಿಢೀರ್…

 • ಸಿಎಂ ಸಲಹೆಗಾರರ ಕೊಠಡಿಯಲ್ಲಿ ಬೆಂಕಿ

  ಬೆಂಗಳೂರು: ಬಹುಮಹಡಿ ಕಟ್ಟಡದಲ್ಲಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಇ-ಆಡಳಿತ ವಿಭಾಗದ ಸಲಹೆಗಾರರಾದ ಬೇಳೂರು ಸುದರ್ಶನ ಅವರ ಕೊಠಡಿಯಲ್ಲಿ ಶಾರ್ಟ್‌ ಸರ್ಕ್ನೂಟ್‌ನಿಂದ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳವಾರ ನಡೆದಿದೆ. ಬಹುಮಹಡಿ ಕಟ್ಟಡದ ಎರಡನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ…

 • ಬೆಂಕಿ ತಗುಲಿ ಅತ್ತೆ, ಸೊಸೆ ಸಾವು

  ತುಮಕೂರು: ಆಕಸ್ಮಿಕ ಬೆಂಕಿ ತಗುಲಿ ಅತ್ತೆ, ಸೊಸೆ ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಗಂಗಸಂದ್ರದಲ್ಲಿ ಶನಿವಾರ ಸಂಭವಿಸಿದೆ. ಗಂಗಸಂದ್ರ ಗ್ರಾಮದ ಪಾರ್ವತಮ್ಮ (75) ಮತ್ತು ರಾಜೇಶ್ವರಿ (45) ಮೃತಪಟ್ಟವರು. ಕಸಬಾ ಹೋಬಳಿ ಗಂಗಸಂದ್ರ ಗ್ರಾಮದಲ್ಲಿ ಪಾರ್ವತಮ್ಮ,…

 • ಹಸಿವಿನ ಬೆಂಕಿ, ಬಾಣಲೆಯ ಬದುಕು…

  “ಬೆಂಕಿಯಿಂದ ಬಾಣಲೆಗೆ’ ಎನ್ನುವ ಮಾತುಂಟು. ಇಲ್ಲಿ ಬಾಣಲೆ ಎದುರು ಕುಳಿತಿರುವ ಜೀವಗಳ ಒಳಗೂ ಯಾರಿಗೂ ಕಾಣದ ಬೆಂಕಿಯಿದೆ. ಅದು ಹಸಿವಿನ ಬೆಂಕಿ. ಒಂದೆಡೆ ಮಗು, ಹಸಿವಿನಿಂದ ಅಳುತ್ತಾ, ತಾಯಿಯ ಚಿತ್ತವನ್ನು ತನ್ನೆಡೆ ಸೆಳೆಯಲು ಯತ್ನಿಸುತ್ತಿದ್ದರೆ, ಮತ್ತೂಂದೆಡೆ ತಾಯಿ ಶಿಲೆಯಂತೆ…

 • ನವದೆಹಲಿ ಪೊಲೀಸರು, ವಕೀಲರ ನಡುವೆ ಘರ್ಷಣೆ, ಕಾರುಗಳಿಗೆ ಬೆಂಕಿ

  ನವದೆಹಲಿ : ಪೊಲೀಸರು ಹಾಗೂ ವಕೀಲರ ನಡುವೆ ನಡೆದ ಘರ್ಷಣೆಯಲ್ಲಿ ವಕೀಲರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ತೀಸ್ ಹಾಜರಿ ಕೋರ್ಟ್ ಬಳಿ ನಡೆದಿದೆ. ಘರ್ಷಣೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು ಪೊಲೀಸರು ಗುಂಡು…

 • ಲಾಸ್‌ಏಂಜಲೀಸ್‌ ಅರಣ್ಯ ಬೆಂಕಿಗೆ 7,500 ಎಕರೆ ಭಸ್ಮ

  ವಾಷಿಂಗ್ಟನ್‌: ಲಾಸ್‌ ಏಂಜಲೀಸ್‌ ನಗರದ ಉತ್ತರ ಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಈ ಬೆಂಕಿ, 7,500 ಎಕರೆ ಪ್ರದೇಶಗಳ ಭೂಭಾಗವನ್ನು, 31 ಮನೆಗಳನ್ನು ಆಪೋಶನ ತೆಗೆದುಕೊಂಡಿದ್ದು, ಆ ವ್ಯಾಪ್ತಿಯಲ್ಲಿನ ಸಾವಿರಾರು ಪ್ರಾಣಿ, ಪಕ್ಷಿ ಸಂಕುಲವನ್ನು ಬಲಿ ಪಡೆದಿದೆ. ನೂರಾರು…

 • ಯುಕೋ ಬ್ಯಾಂಕ್ ಎರಡನೇ ಮಹಡಿಯಲ್ಲಿ ಭಾರೀ ಅಗ್ನಿ ಅವಘಡ

  ಬೆಂಗಳೂರು: ನಗರದ ಎಂಜಿ ರಸ್ತೆಯಲ್ಲಿರುವ ಯುಕೋ ಬ್ಯಾಂಕ್ ನ ಎರಡನೇ ಮಹಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ . ಬ್ಯಾಂಕ್ ಸಿಬ್ಬಂದಿ ಮತ್ತು ಜನರು ಕಟ್ಟಡದ ಮೇಲೆ  ಸಿಲುಕಿಕೊಂಡಿದ್ದು, ಬೆಂಕಿ ನಂದಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಏಣಿ…

 • ಸುಟ್ಟು ಕರಕಲಾದ ಬಸ್‌

  ತುಮಕೂರು: ಹೊರವಲಯದ ಊರುಕೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಜಯಪುರದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಶನಿವಾರ ಬೆಳಗಿನ ಜಾವ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡು ಬಸ್‌ ಸಂಪೂರ್ಣ ಸುಟ್ಟುಕರಕಲಾಗಿದೆ. ಬಸ್‌ನಲ್ಲಿದ್ದ ಆರು ಮಂದಿಗೆ ತೀವ್ರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಸುಟ್ಟ…

 • ಯಾದಗಿರಿ; ಏಕಾಏಕಿ ಹೊತ್ತಿ ಉರಿದ ಖಾಸಗಿ ಬಸ್.

  ಯಾದಗಿರಿ: ವಿಜಯಪುರ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿರುವ ಬಸ್ ಹೊತ್ತಿ ಉರಿದ ಘಟನೆ ಬೆಳಗಿನ ಜಾವ ತುಮಕೂರು ಬಳಿಯ ರಾಜ್ಯ ಹೆದ್ದಾರಿ 5 ರಲ್ಲಿ ನಡೆದಿದೆ. ರಾಯಲ್ ಸಂಸ್ಥೆಗೆ ಸೇರಿದ ಬಸ್ ಎನ್ನಲಾಗಿದ್ದು, ಜಿಲ್ಲೆಯ ಕೆಂಭಾವಿಯ ಹಲವರು ಇದೇ ಬಸ್…

 • ಪ್ಯಾಸೆಂಜರ್ ರೈಲು ಎಂಜಿನ್ ನಲ್ಲಿ ಬೆಂಕಿ; ತಪ್ಪಿದ ಭಾರಿ ಅವಘಡ

  ವಿಜಯಪುರ: ಚಲಿಸುವ ರೈಲಿನ ಎಂಜಿನ್ ಬೆಂಕಿ ಕಾಣಿಸಿಕೊಂಡು ಪರಿಣಾಮ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ಜರುಗಿದೆ. ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ-ಪಡನೂರ ಮಧ್ಯೆ ಸೋಲಾಪುರ ಕಡೆಗೆ ಹೊರಟಿದ್ದ ಪ್ಯಾಸೆಂಜರ್ ರೈಲಿನಲ್ಲಿ  ಬೆಂಕಿ ಕಾಣಿಸಿಕೊಂಡ…

 • ಗಣೇಶ ಮೂರ್ತಿ ಸಾಗಿಸುವಾಗ ವಿದ್ಯುತ್‌ ತಂತಿ ತಗುಲಿ ಬೆಂಕಿ

  ಬೆಳಗಾವಿ: ಗಣೇಶೋತ್ಸವ ಸಂಭ್ರಮದ ನಡುವೆಯೇ ಇಲ್ಲಿಯ ಭಾಗ್ಯ ನಗರದ ಮಾರ್ಗದಿಂದ ಸಾರ್ವಜನಿಕ ಗಣಪತಿ ಮೂರ್ತಿ ತೆಗೆದುಕೊಂಡು ಹೋಗುತ್ತಿದ್ದಾಗ ಹೈವೋಲ್ಟೆಜ್‌ ವಿದ್ಯುತ್‌ ತಂತಿ ತಗುಲಿ ಬೆಂಕಿ ಹತ್ತಿಕೊಂಡಿದ್ದು, ಅದೃಷ್ಟವಶಾತ್‌ ಯಾವುದೇ ಹಾನಿ ಸಂಭವಿಸಿಲ್ಲ. ಬೆಳಗಾವಿ ನಗರದಿಂದ ಬೇರೆ ಊರಿಗೆ ಭಾನುವಾರ…

ಹೊಸ ಸೇರ್ಪಡೆ