Watch: ಪವರ್ ಸ್ಟಾರ್ ಪುನೀತ್ ನಟನೆಯ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆ
ಜೇಮ್ಸ್ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.
Team Udayavani, Feb 11, 2022, 11:25 AM IST
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ “ಜೇಮ್ಸ್” ಚಿತ್ರದ ಟೀಸರ್ ಶುಕ್ರವಾರ (ಫೆ.11) ಬೆಳಗ್ಗೆ 11ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ:ಮಧ್ಯಂತರ ಆದೇಶದ ತುರ್ತು ವಿಚಾರಣೆಗೆ ಸುಪ್ರೀಂ ನಕಾರ; ರಾಷ್ಟ್ರೀಯ ವಿಚಾರ ಮಾಡಬೇಡಿ ಎಂದು ಸೂಚನೆ
ಕನ್ನಡದ ಸಿನಿ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದ ಜೇಮ್ಸ್ ಚಿತ್ರದ ಟೀಸರ್ ಗೆ ಫಿದಾ ಆಗಿದ್ದಾರೆ. ಜೇಮ್ಸ್ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.
ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ಇದಾಗಿದ್ದು, ಬಹುನಿರೀಕ್ಷಿತ ಜೇಮ್ಸ್ ಸಿನಿಮಾ ಬಿಡುಗಡೆಗೂ ಮುನ್ನ ಪುನೀತ್ ಆಕಸ್ಮಿಕವಾಗಿ ಅಗಲಿರುವುದು ಸಿನಿಪ್ರೇಮಿಗಳಲ್ಲಿ ಆಘಾತ ಮೂಡಿಸಿತ್ತು. ಚಿತ್ರದ ಟೀಸರ್ ನಲ್ಲಿ ಶಿವರಾಜ್ ಕುಮಾರ್ ಅವರ ಧ್ವನಿ ಬಳಸಿಕೊಳ್ಳಲಾಗಿದೆ.