ಮಧ್ಯಪ್ರದೇಶವನ್ನು ಮಣಿಸಿದ ಶೇಷ ಭಾರತಕ್ಕೆ ʻಇರಾನಿ ಕಪ್‌ʼ ಗರಿ


Team Udayavani, Mar 5, 2023, 6:27 PM IST

irani

ಗ್ವಾಲಿಯರ್‌: ಶೇಷ ಭಾರತ ಮತ್ತು ಮಧ್ಯಪ್ರದೇಶ ನಡುವೆ ನಡೆದ ಇರಾನಿ ಟ್ರೋಫಿ ಪಂದ್ಯವನ್ನು ಶೇಷ ಭಾರತ ಗೆದ್ದು ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಮೊದಲು ಬ್ಯಾಟ್‌ ಮಾಡಿದ ಶೇಷ ಭಾರತ 484 ತನ್ನುಗಳ ಬೃಹತ್‌ ಮೊತ್ತ ಪೇರಿಸಿತ್ತು. ಇದರಲ್ಲಿ ಯಶಸ್ವಿ ಜೈಸ್ವಾಲ್‌ ಪಾಲೇ 213 ರನ್‌. ಇನ್ನೋರ್ವ ಬ್ಯಾಟ್ಸ್‌ಮನ್‌ ಅಭಿಮನ್ಯು ಈಶ್ವರನ್‌ ಕೂಡಾ  154 ರನ್‌ ಸಿಡಿಸುವ ಮೂಲಕ ಶೇಷ ಭಾರತ ಭರ್ಜರಿ ಮೊತ್ತ ಕಲೆಹಾಕಿತ್ತು.

ಬಳಿಕ ಬ್ಯಾಟ್‌ ಮಾಡಿದ ಮಧ್ಯ ಪ್ರದೇಶ  294 ರನ್ನುಗಳಿಗೆ ಸರ್ವಪತನ ಕಂಡಿತು.  ಮಧ್ಯ ಪ್ರದೇಶ ಪರ ಯಶ್‌ ದುಬೆ 109 ರನ್‌ ಗಳಿಸಿದ್ರೆ, ಹರ್ಷ್‌ 54,  ಸರಂಶ್‌ ಜೈನ್‌ 66 ರನ್‌ ಬಾರಿಸಿ ತಂಡಕ್ಕೆ ಆಸರೆಯಾದರು.

ಮೊದಲ ಇನ್ನಿಂಗ್ಸ್‌ನಲ್ಲಿ 188 ರನ್ನುಗಳ ಮುನ್ನಡೆ ಪಡೆದ ಶೇಷ ಭಾರತ ಎರಡನೇ ಇನ್ನಿಂಗ್‌ನಲ್ಲೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಇನ್ನಂದು ಕಡೆ ಸಾಲು ಸಾಲು ವಿಕೆಟ್‌ ಉರುಳುತ್ತಿದ್ದರೂ ಯಶಸ್ವಿ ಜೈಸ್ವಾಲ್‌ ಮಾತ್ರ ನೆಲಕಚ್ಚಿ ನಿಂತು ತಂಡವನ್ನು ಆಧರಿಸಿದ್ದರು. 157 ಎಸೆತಗಳಲ್ಲಿ 16 ಬೌಂಡರಿ 3 ಸಿಕ್ಸರ್‌ ನೆರವಿನಿಂದ 144 ರನ್‌ ಸಿಡಿಸಿದ ಕುಡಿ ಮೀಸೆಯ ಜೈಸ್ವಾಲ್‌ ಶೇಷ ಭಾರತಕ್ಕೆ  ಬೃಹತ್‌ ಮುನ್ನಡೆ ತಂದುಕೊಟ್ಟಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 246 ರನ್ನುಗಳಿಗೆ ಆಲ್‌ಔಟ್‌ ಆದ ಶೇಷ ಭಾರತ 434 ರನ್ನುಗಳ ಭಾರೀ ಮುನ್ನಡೆ ಪಡೆದುಕೊಂಡಿತ್ತು.

ಈ ಬೃಹತ್‌ ಮೊತ್ತವನ್ನು ಬೆನ್ನತ್ತುವ ವೇಳೆ ಆರಂಭದಲ್ಲೇ ಎಡವಿದ ಮಧ್ಯಪ್ರದೇಶ ಕೊನೆ ತನಕವೂ ರನ್‌ ಗಳಿಸಲು ಪರದಾಡಿತು. ನಾಯಕ ಹಿಮಾಂಶು ಮಂತ್ರಿ ಅರ್ಧ ಶತಕ ದಾಖಲಿಸಿದ್ದು ಹೊರತುಪಡಿಸಿ ಬೇರೆ ಯಾವೊಬ್ಬ ಆಟಗಾರನೂ ತಂಡವನ್ನು ಆಧರಿಸಲಿಲ್ಲ.

ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ದ್ವಿಶತಕ, ಶತಕ ಬಾರಿಸುವ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ. ಅಲ್ಲದೇ ಅದ್ಭುತ ಬ್ಯಾಟಿಂಗ್‌ ಪ್ರದೃಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಕಳೆದ ವರ್ಷ ಸೌರಾಷ್ಟ್ರ ತಂಡವನ್ನುಮಣಿಸಿ ಶೇಷ ಭಾರತ ತಂಡ ಇರಾನಿ ಕಪ್‌ ತನ್ನದಾಗಿಸಿಕೊಂಡಿತ್ತು. ಈ  ಬಾರಿಯೂ ಮಧ್ಯ ಪ್ರದೇಶ ವಿರುದ್ಧ ಗೆಲ್ಲುವ ಮೂಲಕ ಇರಾನಿ ಕಪ್‌ ಮುಡಿಗೇರಿಸಿಕೊಂಡಿದೆ.

ಇದನ್ನೂ ಓದಿ : ಡಬ್ಲ್ಯೂಪಿಎಲ್ ಚಾಲೆಂಜ್ ಗೆ ಆರ್ ಸಿಬಿ ರೆಡಿ; ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಸ್ಮೃತಿ

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.