ರಿಲ್ಯಾಕ್ಸ್ ಮೂಡ್ ಗೆ ಜಾರಿದ ಸಿದ್ದರಾಮಯ್ಯ : ಕಾಕನಕೋಟೆ ಕಾಡಿನಲ್ಲಿ ಓಡಾಟ
Team Udayavani, Feb 1, 2022, 11:22 AM IST
ಮೈಸೂರು : ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಮಂಗಳವಾರ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದು, ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಕಾಕನಕೋಟೆ ಕಾಡಿನಲ್ಲಿ ಗೆಳೆಯರ ಜೊತೆ ಸುತ್ತಾಟ ಮಾಡಿ ಪರಿಸರದೊಂದಿಗೆ ಸಂಭ್ರಮಿಸುತ್ತಿದ್ದಾರೆ.
ನಾಗರಹೊಳೆ ಅಭಯಾರಣ್ಯದಲ್ಲಿ ಓಡಾಟ ಮಾಡುತ್ತಿರುವ ಮಾಜಿ ಸಿಎಂಗೆ ಗೆಳೆಯ ಎಚ್.ಸಿ.ಮಹದೇವಪ್ಪ,ಶಾಸಕ ಎಚ್.ಪಿ.ಮಂಜುನಾಥ್, ವೆಂಕಟೇಶ್ ಸೇರಿ ಹಲವರು ಸಾಥ್ ನೀಡಿದ್ದಾರೆ.
ಇದನ್ನೂ ಓದಿ :Live Updates:ಕೇಂದ್ರ ಬಜೆಟ್ ಮಂಡನೆ ಶುರು;LIC ಬಂಡವಾಳ ಹಿಂತೆಗೆತ, 60 ಲಕ್ಷ ಉದ್ಯೋಗ ಸೃಷ್ಟಿ
ಸಫಾರಿ ವೇಳೆ ಕಾಡು ಪ್ರಾಣಿಗಳಾದ ಹುಲಿ,ಜಿಂಕೆಗಳ ಫೋಟೋ ಕ್ಲಿಕ್ಕಿಸಿ ಮಾಜಿ ಸಿಎಂ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ದಾರೆ..!