ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಹೇಳಿದ್ದನ್ನು ಭಟ್ರು ಕೇಳಬೇಕು ಅದೇ ಧರ್ಮ : ಬೇಳೂರು
Team Udayavani, Nov 2, 2020, 5:39 PM IST
ಶಿವಮೊಗ್ಗ : ಸಿಗಂದೂರು ದೇವಸ್ಥಾನದಲ್ಲಿ ಧರ್ಮದರ್ಶಿ ರಾಮಪ್ಪ ಅವರು ಹೇಳಿದ್ದನ್ನು ಭಟ್ರು ಒಪ್ಪಿಕೊಂಡು ಹೋಗಬೇಕು ಇಲ್ಲಿ ಇದೆ ಧರ್ಮ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಲಹಾ ಸಮಿತಿ ನೇಮಕ ವಿಚಾರವಾಗಿ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಭವನದಲ್ಲಿ ಈಡಿಗ ಮುಖಂಡರ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಿಂಗದೂರು ವಿಷಯದಲ್ಲಿ ದುರುದ್ದೇಶ ಇಟ್ಟುಕೊಂಡು ಏನಾದರೂ ಮಾಡಲು ಹೋದರೆ ನಾವು ಖಂಡಿತಾ ಸುಮ್ಮನಿರಲ್ಲ ಎಂದ ಅವರು ಸಮಾಜವನ್ನ ಕೀಳುಮಟ್ಟದಲ್ಲಿ ನೋಡುವ ಶಾಸಕರು ಹಾಗೂ ಜಿಲ್ಲಾಧಿಕಾರಿ ಮುಂದೆ ನಾವು ಸುಮ್ಮನೇ ಕೂರಲ್ಲ ಎಂದರು.
ರಾಜ್ಯದಲ್ಲಿ 55 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈಡಿಗ ಸಮುದಾಯದ ಜನರಿದ್ದಾರೆ. ಅಲ್ಲದೆ 10 ವರ್ಷ ನಾನು ಆಡಳಿತ ಮಾಡಿದ್ದೇನೆ, ಕಾಗೋಡು ಸಾಹೇಬ್ರು ಮಾಡಿದಾಗ ಜಾತಿ ವಿಚಾರ ಬರಲಿಲ್ಲ. ಅದ್ರೇ, ಈಗ ಯಡಿಯೂರಪ್ಪ, ಅವರ ಮಗ ಹಾಗೂ ಶಾಸಕರು ಸೇರಿ ಜಾತಿ ತರ್ತಾ ಇದ್ದಾರೆ. ರಾಘವೇಂದ್ರ ಅವರು ತೀರ್ಮಾನ ಮಾಡಿಕೊಂಡು ಮಾಡಿರುವ ಪಿತೂರಿ ಇದು. ಇದರ ಉದ್ದೇಶ ನನಗೆ ಗೊತ್ತು ಎಂದು ಕಿಡಿಕಾರಿದರು.
ಇದನ್ನೂ ಓದಿ:ರಾಜ್ಯದ ಗಮನಸೆಳೆದಿದ್ದ ಗಂಗಾವತಿ ನಗರಸಭೆ ಕಾಂಗ್ರೆಸ್ ತೆಕ್ಕೆಗೆ!
ರಾಮಪ್ಪ ಹೇಳಿದ್ದನ್ನ ಭಟ್ರು ಒಪ್ಕೊಂಡು ಹೋಗಬೇಕು. ಅದೇ ಧರ್ಮ ಎಂದ ಬೇಳೂರು ಗೋಕರ್ಣದಲ್ಲಿ ಎಷ್ಟು ಹೊಡೆದಾಟ ಬಡಿದಾಟ ಆಯ್ತು..ಆಗ ಏನಾದರೂ ಮಾಡಿದ್ರಾ….? ಕೊಲ್ಲೂರಲ್ಲೂ ಆಗಿದೆ, ಕನಕ ದಾಸರ ವಿಚಾರ ಉಡುಪಿಯಲ್ಲಿಯೂ ಆಗಿದೆ. ಹಾಗಾದ್ರೇ ಅಲ್ಲಿ ಯಾವ ಸಮಿತಿಗಳು ರಚನೆಯಾಗಿವೆ ಹೇಳಿ ನೋಡೋಣ. ನಾವು ಜಾತಿ ತರಲ್ಲ ಎಂದ ಅವರು ಹಿಂದುಳಿದ ವರ್ಗದ ದೇವಾಲಯ ನೆಲಸಮ ಮಾಡಲು ಹೊರಟಿದ್ದು ಸರಿಯಲ್ಲ ಎಂದಿದ್ದಾರೆ.
ರಾಮಪ್ಪ ಶ್ರಮ ಹಾಕಿದ ದೇವಾಲಯಕ್ಕೆ ಒಮ್ಮೆಲೆ ಸಮಿತಿ ರಚನೆ ಮಾಡ್ತೀವಿ ಅಂದರೆ ಹೇಗೆ ಸರಿಯಾಗುತ್ತೆ…? ಈಡಿಗ ಸಮುದಾಯದ ಸ್ವಯಂ ಘೋಷಿತ ಸಂಘವೆಂದು ಡಿಸಿ ನಾಲಗೆ ಹರಿಬಿಟ್ಟಿದ್ದಾರೆ. ಈ ವಿಚಾರದಲ್ಲಿ ಕ್ಷಮೆ ಕೇಳದೇ ಇದ್ದರೆ ಡಿಸಿ ಕಚೇರಿ ಮುತ್ತಿಗೆ ಹಾಕ್ತೀವಿ, ಸಿಗಂದೂರು ಉಳಿಸಿ ಎಂದು ಬೃಹತ್ ಹೋರಾಟ ಮಾಡ್ತಿವಿ, ಎಲ್ಲಾ ಜಾತಿಯವರು ಸೇರಿ 25 ಸಾವಿರ ಜನರನ್ನ ಸೇರಿಸೋ ತಾಕತ್ ನನಗೆ ಇದೆ ಎಂದು ಗುಡುಗಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್
ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್
ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ : ಬೀಳಗಿಯ ಓರ್ವ ವಶಕ್ಕೆ
ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದ ಶಾಸಕ ಯತ್ನಾಳ್
ಮಕ್ಕಳು ಸಂಗ್ರಹಿಸಿದ್ದ ಹುಂಡಿಯನ್ನು ಶ್ರೀರಾಮ ಮಂದಿರ ನಿಧಿಗೆ ಸಮರ್ಪಣೆ
MUST WATCH
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ
ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,
ಹೊಸ ಸೇರ್ಪಡೆ
ಎಂಬುಲ್ದೇನಿಯ-ರೂಟ್ ಗ್ರೇಟ್ ಫೈಟ್
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್
ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್
ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು
ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ