ಟೆಕ್ಸಾಸ್ ಶೂಟ್ಔಟ್: ತೆಲಂಗಾಣದ ಜಡ್ಜ್ ಪುತ್ರಿ ಸಾವು
Team Udayavani, May 9, 2023, 7:33 AM IST
ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಅಲೆನ್ನ ಮಾಲ್ ಒಂದರಲ್ಲಿ ಶನಿವಾರ ನಡೆದ ಶೂಟ್ಔಟ್ನಲ್ಲಿ ಮೃತಪಟ್ಟವರ ಪೈಕಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ನರ್ಸಿ ರೆಡ್ಡಿ ಅವರ ಪುತ್ರಿ ತಾಟಿಕೊಂಡ ಐಶ್ವರ್ಯ ರೆಡ್ಡಿ(27) ಕೂಡ ಸೇರಿದ್ದಾರೆ.
ಐಶ್ವರ್ಯ ಅವರು ಕಳೆದ ಐದು ವರ್ಷಗಳಿಂದ ಅಮೆರಿಕದ ಟೆಕ್ಸಾಸ್ನಲ್ಲಿ ನೆಲೆಸಿದ್ದರು. ಹೈದರಾಬಾದ್ನ ಒಸ್ಮಾನಿಯಾ ವಿವಿಯಿಂದ ಎಂಜಿನಿಯರಿಂಗ್ ಪದವಿ ಪಡೆದ ಅವರು, 2020ರಲ್ಲಿ ಅಮೆರಿಕದ ಈಸ್ಟರ್ನ್ ಮಿಚಿಗನ್ ವಿಶ್ವವಿದ್ಯಾಲಯದಿಂದ ನಿರ್ಮಾಣ ನಿರ್ವಹಣೆಯಲ್ಲಿ ಎಂಎಸ್ ಪೂರ್ಣಗೊಳಿಸಿದರು. ನಂತರ ಟೆಕ್ಸಾಸ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಅಲ್ಲೇ ನೆಲೆಸಿದ್ದರು. ಶನಿವಾರ ಅಲೆನ್ನ ಮಾಲ್ಗೆ ತೆರಳಿದ್ದ ವೇಳೆ, ಅಪರಿಚಿತ ಬಂದೂಕುಧಾರಿಯೊಬ್ಬನಿಂದ ನಡೆದ ಗುಂಡಿನ ದಾಳಿಯಲ್ಲಿ ಅಸುನೀಗಿದ್ದಾರೆ. ಈ ದಾಳಿಯಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದರು.